Gold Silver Price in Bangalore | ಬೆಂಗಳೂರು: ದೇಶದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಗೋಲ್ಡ್ ಫ್ಯೂಚರ್ಸ್ (Gold Futures) ಸೋಮವಾರ ಇಳಿಕೆಯಾಗಿತ್ತು. ಒಂದು ನಿಗದಿತ ಮೊತ್ತಕ್ಕೆ ನಿರ್ದಿಷ್ಟ ದಿನದಂದು ಚಿನ್ನ ಖರೀದಿಸುವ ಬಗ್ಗೆ ಮುಂಚಿತವಾಗಿಯೇ ಕರಾರು ಏರ್ಪಟ್ಟಿದ್ದು, ಈ ರೀತಿಯ ಕರಾರಿಗೆ ಒಳಪಟ್ಟ ಚಿನ್ನವನ್ನು ಗೋಲ್ಡ್ ಫ್ಯೂಚರ್ಸ್ ಎಂದು ಕರೆಯಲಾಗುತ್ತದೆ. ಗೋಲ್ಡ್ ಫ್ಯೂಚರ್ಸ್ ದರವು ಸಾಮಾನ್ಯ ಚಿನ್ನದ ಮಾರಾಟದ ದರದ ಮೇಲೂ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಗೋಲ್ಡ್ ಫ್ಯೂಚರ್ಸ್ ದರದಲ್ಲಿ ತುಸು ಇಳಿಕೆಯಾಗಿರುವುದು ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ದರದ ಮೇಲೂ ಪರಿಣಾಮ ಬೀರಿದೆ. ಇಂದು 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ ಮತ್ತು 24 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. 1 ಕೆಜಿ ಬೆಳ್ಳಿ ಬೆಲೆ 400 ರೂ. ಇಳಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 52,200 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 56,950 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂ. ಇಳಿಕೆಯಾಗಿ 72,500 ರೂ. ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;