AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salary Hike: ಭಾರತೀಯ ಉದ್ಯೋಗಿಗಳಿಗೆ ಈ ವರ್ಷ ವರ್ಕ್ ಫ್ರಂ ಹೋಮ್ ಜತೆ ಶೇ 15 – 30 ವೇತನ ಹೆಚ್ಚಳ; ಸಮೀಕ್ಷಾ ವರದಿ

ಭಾರತೀಯ ಉದ್ಯೋಗಿಗಳ ಸರಾಸರಿ ವೇತನ 2023ರಲ್ಲಿ ಶೇ 9.8ರಷ್ಟು ಹೆಚ್ಚಳವಾಗಲಿದೆ. ಕಳೆದ ವರ್ಷ ಇದು ಶೇ 9.4ರಷ್ಟಿತ್ತು. ಹೈಟೆಕ್ ಉದ್ಯಮಗಳು, ಜೀವ ವಿಜ್ಞಾನ, ಆರೋಗ್ಯ ಕ್ಷೇತ್ರದ ಕಂಪನಿಗಳು ಶೇ 10ಕ್ಕಿಂತಲೂ ಹೆಚ್ಚಿನ ವೇತನ ಹೆಚ್ಚಳ ಮಾಡಲಿವೆ ಎಂದು ವರದಿ ತಿಳಿಸಿದೆ.

Salary Hike: ಭಾರತೀಯ ಉದ್ಯೋಗಿಗಳಿಗೆ ಈ ವರ್ಷ ವರ್ಕ್ ಫ್ರಂ ಹೋಮ್ ಜತೆ ಶೇ 15 - 30 ವೇತನ ಹೆಚ್ಚಳ; ಸಮೀಕ್ಷಾ ವರದಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 18, 2023 | 10:21 AM

Share

ನವದೆಹಲಿ: ಆರ್ಥಿಕ ಹಿಂಜರಿತ ಭೀತಿಯಿಂದಾಗಿ ವಿಶ್ಯದಾದ್ಯಂತ ಕಂಪನಿಗಳು ಉದ್ಯೋಗಿಗಳ ವಜಾ (Layoffs), ವೇತನ ಕಡಿತ (Salary Cut) ಇತ್ಯಾದಿ ಮಾರ್ಗಗಳ ಮೊರೆ ಹೋದರೆ ಭಾರತದ ನೌಕರರಿಗೆ ಭರ್ಜರಿ ಸಿಹಿ ಸುದ್ದಿಯನ್ನು ಸಮೀಕ್ಷೆಯೊಂದು ನೀಡಿದೆ. ದೇಶದ ಶೇ 60ರಷ್ಟು ಕಂಪನಿಗಳು ಹೈಬ್ರಿಡ್ ಮಾದರಿಯ ಕೆಲಸ (Hybrid Model Work), ಅಂದರೆ ಕೆಲವು ದಿನ ವರ್ಕ್ ಫ್ರಂ ಹೋಮ್ (Work From Home) ಮತ್ತು ಕೆಲವು ದಿನ ಕಚೇರಿಗೆ ತೆರಳುವ ವ್ಯವಸ್ಥೆಯನ್ನು ಉದ್ಯೋಗಿಗಳಿಗೆ ನೀಡುತ್ತಿದ್ದು, ಇದನ್ನು ಮುಂದುವರಿಸುವ ಒಲವು ವ್ಯಕ್ತಪಡಿಸಿವೆ. ಇದರ ಜತೆಗೆ ಈ ವರ್ಷ ಶೇ 15-30 ರಷ್ಟು ವೇತನ ಹೆಚ್ಚಳ ನೀಡಲಿವೆ ಎಂದು ಕಾರ್ನ್​ ಫೆರ್ರಿ (Korn Ferry) ಸಮೀಕ್ಷಾ ವರದಿ ತಿಳಿಸಿದೆ. ಇದು ಏಷ್ಯಾದಲ್ಲೇ ಅತಿಹೆಚ್ಚಿನ ವೇತನ ಹೆಚ್ಚಳವಾಗಿರಲಿದೆ ಎಂದೂ ವರದಿ ಹೇಳಿದೆ.

ಸರಾಸರಿ ಶೇ 9.8ರ ವೇತನ ಹೆಚ್ಚಳದ ನಿರೀಕ್ಷೆ

ಭಾರತೀಯ ಉದ್ಯೋಗಿಗಳ ಸರಾಸರಿ ವೇತನ 2023ರಲ್ಲಿ ಶೇ 9.8ರಷ್ಟು ಹೆಚ್ಚಳವಾಗಲಿದೆ. ಕಳೆದ ವರ್ಷ ಇದು ಶೇ 9.4ರಷ್ಟಿತ್ತು. ಹೈಟೆಕ್ ಉದ್ಯಮಗಳು, ಜೀವ ವಿಜ್ಞಾನ, ಆರೋಗ್ಯ ಕ್ಷೇತ್ರದ ಕಂಪನಿಗಳು ಶೇ 10ಕ್ಕಿಂತಲೂ ಹೆಚ್ಚಿನ ವೇತನ ಹೆಚ್ಚಳ ಮಾಡಲಿವೆ ಎಂದು ವರದಿ ತಿಳಿಸಿದೆ. ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಸೇರ್ಪಡೆಯಾಗುತ್ತಿರುವ ದೇಶವೂ ಆಗಿದೆ. ಒಟ್ಟಾರೆ ನಿರುದ್ಯೋಗ ದರ ಹೆಚ್ಚಿದ್ದರೂ ಅಧಿಕವಾಗಿದ್ದರೂ ಶಿಕ್ಷಣದಲ್ಲಿನ ಅಂತರವು ಪ್ರತಿಭೆಗಳನ್ನು ತಮ್ಮದಾಗಿಸಿಕೊಳ್ಳುವ ಪೈಪೋಟಿಯನ್ನು ಹೆಚ್ಚಿಸಿವೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

ಇದನ್ನೂ ಓದಿ: Cash Transaction: ಎಚ್ಚರ, ಮನೆಯಲ್ಲಿ ಹೆಚ್ಚೆಚ್ಚು ನಗದು ಇಟ್ಟುಕೊಳ್ಳುವವರು ನೀವಾದರೆ ಈ ವಿಚಾರಗಳನ್ನು ತಿಳಿದಿರಿ

ಭಾರತದಲ್ಲಿ ಒಟ್ಟು 8 ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡುವ 818 ಕಂಪನಿಗಳನ್ನು ಕಾರ್ನ್​ ಫೆರ್ರಿ ಸಮೀಕ್ಷೆಗೆ ಒಳಪಡಿಸಿತ್ತು. ಈ ಪೈಕಿ ಶೇ 61ರಷ್ಟು ಕಂಪನಿಗಳು ರಿಟೆಂಶನ್ ಪೇಮೆಂಟ್ ನೀಡುತ್ತಿರುವುದು ತಿಳಿದುಬಂದಿದೆ.

ಯಾವ ದೇಶದಲ್ಲಿ ಎಷ್ಟು ವೇತನ ಹೆಚ್ಚಳ?

ಭಾರತದಲ್ಲಿ ಸರಾಸರಿ ಶೇ 9.8, ಆಸ್ಟ್ರೇಲಿಯಾದಲ್ಲಿ ಶೇ 5.5, ಚೀನಾದಲ್ಲಿ ಶೇ 5.5, ಹಾಂಗ್​ಕಾಂಗ್​​ನಲ್ಲಿ ಶೇ 3.6, ಇಂಡೊನೇಷ್ಯಾದಲ್ಲಿ ಶೇ 7, ಕೊರಿಯಾದಲ್ಲಿ ಶೇ 4.5, ಮಲೇಷ್ಯಾದಲ್ಲಿ ಶೇ 5, ನ್ಯೂಜಿಲ್ಯಾಂಡ್​ನಲ್ಲಿ ಶೇ 3.8, ಫಿಲಿಪ್ಪೀನ್ಸ್​​ನಲ್ಲಿ ಶೇ 5.5, ಸಿಂಗಾಪುರದಲ್ಲಿ ಶೇ 4, ಥಾಯ್ಲೆಂಡ್​​ನಲ್ಲಿ ಶೇ 5 ಮತ್ತು ವಿಯೆಟ್ನಾಂನಲ್ಲಿ ಶೇ 8ರ ಸರಾಸರಿ ವೇತನ ಹೆಚ್ಚಳ ಕಂಡುಬರಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಮೆಟ್ರೋಪಾಲಿಟನ್ ನಗರಗಳಲ್ಲಿ, ಒಂದನೇ ಸ್ತರದ ನಗರಗಳ ಉದ್ಯೋಗಿಗಳಿಗೆ ಹೆಚ್ಚಿನ ಪರಿಹಾರ ಸಿಗಲಿದೆ. ಇದಕ್ಕೆ ಹೈಬ್ರಿಡ್ ಕೆಲಸ ಮತ್ತು ಎಲ್ಲಿಂದ ಬೇಕಾದರೂ ಕೆಲಸ ಮಾಡುವ ರಿಮೋಟ್ ವರ್ಕ್​ ವಿಧಾನ ಹೆಚ್ಚು ಅನುಷ್ಠಾನಕ್ಕೆ ಬಂದಿರುವುದು ಕಾರಣ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್