ಎಸ್​ಇಝಡ್ ಪ್ರದೇಶದ ಐಟಿ ಉದ್ಯೋಗಿಗಳಿಗೆ ಶುಭ ಸುದ್ದಿ; ಇನ್ನೂ ಒಂದು ವರ್ಷ ಪೂರ್ತಿ ವರ್ಕ್ ಫ್ರಂ ಹೋಮ್

Work From Home; ಈ ಹಿಂದೆ ಶೇಕಡಾ 50ರಷ್ಟು ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ನೀಡಬಹುದು ಎಂದು ಸರ್ಕಾರ ಹೇಳಿತ್ತು. ಆದರೆ ಇದೀಗ 2023ರ ಡಿಸೆಂಬರ್​ ವರೆಗೆ ಶೇಕಡಾ 100ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನೀಡಬಹುದು ಎಂದು ತಿಳಿಸಿದೆ.

ಎಸ್​ಇಝಡ್ ಪ್ರದೇಶದ ಐಟಿ ಉದ್ಯೋಗಿಗಳಿಗೆ ಶುಭ ಸುದ್ದಿ; ಇನ್ನೂ ಒಂದು ವರ್ಷ ಪೂರ್ತಿ ವರ್ಕ್ ಫ್ರಂ ಹೋಮ್
ಸಾಂದರ್ಭಿಕ ಚಿತ್ರImage Credit source: Reuters
Follow us
TV9 Web
| Updated By: Ganapathi Sharma

Updated on: Dec 09, 2022 | 2:37 PM

ನವದೆಹಲಿ: ವಿಶೇಷ ಆರ್ಥಿಕ ವಲಯ ಅಥವಾ ಎಸ್​ಇಝಡ್ (SEZ) ಪ್ರದೇಶದ ಐಟಿ ಮತ್ತು ಐಟಿ ಆಧಾರಿತ ಸೇವೆಗಳನ್ನು ನೀಡುವ ಕಂಪನಿಗಳ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಐಟಿ ಕಂಪನಿಗಳ ಎಸ್​ಇಝಡ್ ಪ್ರದೇಶದ ಘಟಕದ ಶೇಕಡಾ 100ರಷ್ಟು ಉದ್ಯೋಗಿಗಳಿಗೆ 2023ರ ಡಿಸೆಂಬರ್ ವರೆಗೆ ಕೆಲವೊಂದು ಷರತ್ತುಗಳೊಂದಿಗೆ ಮನೆಯಿಂದಲೇ ಕೆಲಸ ಅಥವಾ ವರ್ಕ್ ಫ್ರಂ ಹೋಮ್​ಗೆ (Work From Home) ಅವಕಾಶ ನೀಡಲು ವಾಣಿಜ್ಯ ಸಚಿವಾಲಯ ಅನುಮತಿ ನೀಡಿದೆ. ಕಂಪನಿಯ ಎಸ್​ಇಝಡ್ ಪ್ರದೇಶದ ಘಟಕವು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅಥವಾ ಎಸ್​ಇಝಡ್ ವಲಯದ ಹೊರಗೆ ಎಲ್ಲಿಂದ ಬೇಕಾದರೂ ಕೆಲಸ ಮಾಡಲು ಅವಕಾಶ ನೀಡಬಹುದು ಎಂದು ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಈ ಹಿಂದೆ ಶೇಕಡಾ 50ರಷ್ಟು ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ನೀಡಬಹುದು ಎಂದು ಸಚಿವಾಲಯ ಹೇಳಿತ್ತು.

ಕಂಪನಿಯ ಎಸ್​ಇಝಡ್ ಪ್ರದೇಶದ ಘಟಕದ ಮಾಲೀಕರು ಸಂಬಂಧಪಟ್ಟ ಅಭಿವೃದ್ಧಿ ಆಯುಕ್ತರಿಗೆ ಮಾಹಿತಿ ನೀಡಬೇಕು. ಅನುಮೋದನೆ ಪತ್ರ ಪಡೆದು ಘಟಕವು ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಭವಿಷ್ಯದಲ್ಲಿ ವರ್ಕ್ ಫ್ರಂ ಹೋಮ್​ ಆಯ್ಕೆ ನೀಡಲು ಬಯಸುವ ಘಟಕಗಳು ಒಂದು ದಿನ ಮುಂಚಿತವಾಗಿ ಇ-ಮೇಲ್ ಸಂದೇಶದ ಮೂಲಕ ಮಾಹಿತಿ ನೀಡಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬರೀ ವರ್ಕ್​ ಫ್ರಂ ಹೋಂ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು ಸ್ವಲ್ಪ; 3 ಮಿಲಿಯನ್​ ಜನರನ್ನು ಸೆಳೆದಿದೆ ಈ ವಿಡಿಯೋ

ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಪ್ರಕಾರ, ಮನೆಯಿಂದ ಕೆಲಸ ಮಾಡುವ ಅಥವಾ ಬೇರೆಡೆಯಿಂದ ಕಾರ್ಯನಿರ್ವಹಿಸುವ ಉದ್ಯೋಗಿಗಳ ಪಟ್ಟಿಯನ್ನು ಕಂಪನಿಯ ಘಟಕಗಳು ಸರ್ಕಾರಕ್ಕೆ ಸಲ್ಲಿಸಬೇಕೆಂದಿಲ್ಲ. ಆದರೆ, ಆಂತರಿಕವಾಗಿ ಪಟ್ಟಿಯನ್ನು ಹೊಂದಿರಬೇಕು. ಬೇರೆ ಪ್ರದೇಶದಲ್ಲಿದ್ದುಕೊಂಡು ಕೆಲಸ ಮಾಡುವವರು, ಪ್ರಯಾಣಿಸಲು ಸಾಧ್ಯವಾಗದವರು ಹಾಗೂ ತಾತ್ಕಾಲಿಕ ಅಸಮರ್ಥತೆ ಹೊಂದಿರುವವರ ವರ್ಕ್ ಫ್ರಂ ಹೋಮ್​ ಸೌಲಭ್ಯ ಮುಂದುವರಿಯಲಿದೆ.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಕಡ್ಡಾಯ ವರ್ಕ್ ಫ್ರಂ ಹೋಮ್ ಅನ್ನು ವಾಪಸ್ ಪಡೆಯುವುದು ಜಾಗತಿಕ ಮಟ್ಟದಲ್ಲಿ ಈಗ ಕಂಪನಿಗಳಿಗೆ ಸವಾಲಾಗಿ ಪರಿಣಮಿಸಿದೆ. ಯುವ ಉದ್ಯೋಗಿಗಳು ಫ್ಲೆಕ್ಸಿಬಲ್ ಅಥವಾ ಪಾರದರ್ಶಕ ಕೆಲಸದ ಬಗ್ಗೆ ಒಲವು ಹೊಂದಿದ್ದಾರೆ ಎಂದು ಇತ್ತೀಚೆಗೆ ಅಮೆರಿಕ ಮೂಲದ ‘ಸೆಂಟರ್ ಫಾರ್ ಕ್ರಿಯೇಟಿವ್ ಲೀಡರ್​ಶಿಪ್’ ಸ್ವಯಂಸೇವಾ ಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿತ್ತು. ಇದರ ಬೆನ್ನಲ್ಲೇ ಈಗ ವಾಣಿಜ್ಯ ಸಚಿವಾಲಯ ವರ್ಕ್ ಫ್ರಂ ಹೋಮ್​​ಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಿರುವ ವಿಚಾರ ಬಯಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ