ನವದೆಹಲಿ: ಮಾಹಿತಿ ತಂತ್ರಜ್ಞಾನ ಸೇವೆಗಳನ್ನು (IT Services) ಒದಗಿಸುವ ವಿಶ್ವದ ಮುಂಚೂಣಿ ಬ್ರ್ಯಾಂಡ್ಗಳಲ್ಲಿ ಬೆಂಗಳೂರು ಮೂಲದ ಇನ್ಫೋಸಿಸ್ (Infosys) ಮೂರನೇ ಸ್ಥಾನದಲ್ಲೇ ಮುಂದುವರಿದಿದೆ. 2023ನೇ ಸಾಲಿನ ‘ಬ್ರ್ಯಾಂಡ್ ಫೈನಾನ್ಸ್ ಗ್ಲೋಬಲ್ 500 (Brand Finance Global 500)’ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ನಾವು ಗುರುತಿಸಿಕೊಂಡಿದ್ದೇವೆ. ಅತಿಹೆಚ್ಚು ಮೌಲ್ಯ ಹೊಂದಿರುವ ಬ್ರ್ಯಾಂಡ್ಗಳ ಪಟ್ಟಿಯಲ್ಲಿ ಮೊದಲ 150ರ ಒಳಗೆ ಸ್ಥಾನ ಪಡೆದಿದ್ದೇವೆ ಎಂದು ಇನ್ಫೋಸಿಸ್ ತಿಳಿಸಿದೆ. ಕ್ಲಿಯೆಂಟ್ ಸ್ಥಿರತೆ, ಅತ್ಯುತ್ತಮ ಸೇವಾ ವಿತರಣೆ, ಹೆಚ್ಚಿನ ಬದ್ಧತೆ, ಡಿಜಿಟಲ್ ರೂಪಾಂತರಕ್ಕೆ ಸಂಬಂಧಿಸಿ ಉದ್ಯಮ ಸಹಭಾಗಿಗಳನ್ನು ಕ್ರೂಡೀಕರಿಸಿರುವುದು ಇನ್ಫೋಸಿಸ್ ಬ್ರ್ಯಾಂಡ್ನ ಭಿನ್ನತೆಯಾಗಿದೆ ಎಂದು ಕಂಪನಿಯ ಮುಖ್ಯ ಕಾರ್ಯಿರ್ವಹಣಾಧಿಕಾರಿ (ಸಿಇಒ) ಸಲಿಲ್ ಪರೇಖ್ ತಿಳಿಸಿದ್ದಾರೆ. ಉದ್ಯೋಗಿಗಳ ಕುರಿತಾದ ಕಾಳಜಿ, ಅವರ ಅಭಿವೃದ್ಧಿಗೆ ಸಂಬಂಧಿಸಿದ ಹೂಡಿಕೆ, ಪರಿಸರ, ಸಾಮಾಜಿಕ ಮತ್ತು ಆಡಳಿತಕ್ಕೆ ಸಂಬಂಧಿಸಿ ನಾವು ನೀಡಿರುವ ಆದ್ಯತೆಗಳಿಂದ ಇನ್ಫೋಸಿಸ್ಗೆ ನೆರವಾಗಿದೆ. ಪರಿಣಾಮವಾಗಿ ಕಂಪನಿಯು ತನ್ನ ಮಾರುಕಟ್ಟೆಯನ್ನು ಸ್ಥಿರವಾಗಿ ಇರಿಸಿಕೊಂಡಿದ್ದು, ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಮೌಲ್ಯಯುತ ಬ್ರ್ಯಾಂಡ್ ಆಗಿ ಗುರಿತಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಐಟಿ ಸೇವೆಗಳನ್ನು ಒದಗಿಸುವ ವಿಶ್ವದ ಮುಂಚೂಣಿ ಬ್ರ್ಯಾಂಡ್ಗಳ ಪಟ್ಟಿಯಲ್ಲಿ ಇನ್ಫೋಸಿಸ್ ಸತತ ಎರಡನೇ ವರ್ಷವೂ ಮೂರನೇ ಸ್ಥಾನದಲ್ಲಿ ಮುಂದುವರಿದಂತಾಗಿದೆ. ಕಳೆದ ಬಾರಿಯೂ ‘ಬ್ರ್ಯಾಂಡ್ ಫೈನಾನ್ಸ್ ಗ್ಲೋಬಲ್ 500’ ಪಟ್ಟಿಯಲ್ಲಿ ಇನ್ಫೋಸಿಸ್ ಮೂರನೇ ಸ್ಥಾನ ಪಡೆದಿತ್ತು. ಇನ್ಫೋಸಿಸ್ ಇತ್ತೀಚೆಗಷ್ಟೇ ನಾಲ್ಕು ದಶಕಗಳನ್ನು ಪೂರೈಸಿದ ಸಂಭ್ರಮ ಆಚರಿಸಿತ್ತು. ನಾಲ್ಕು ದಶಕಗಳ ಯಶಸ್ಸು, ಬ್ರ್ಯಾಂಡ್ ಮೌಲ್ಯ ವೃದ್ಧಿ, ಕಂಪನಿಯು ಮತ್ತಷ್ಟು ಬೆಳವಣಿಗೆ ಹೊಂದುತ್ತಿರುವ ಬಗ್ಗೆ ಸಂಭ್ರಮ ಆಚರಿಸಲಾಗಿತ್ತು.
ಇದನ್ನೂ ಓದಿ: Salary Hike: ಭಾರತೀಯ ಉದ್ಯೋಗಿಗಳಿಗೆ ಈ ವರ್ಷ ವರ್ಕ್ ಫ್ರಂ ಹೋಮ್ ಜತೆ ಶೇ 15 – 30 ವೇತನ ಹೆಚ್ಚಳ; ಸಮೀಕ್ಷಾ ವರದಿ
ಸಿಇಒ ಸಲಿಲ್ ಪರೇಖ್ ಅವರ ನಾಯಕತ್ವ, ಡಿಜಿಟಲ್ ಸೇವೆಗಳ ಮೂಲಕ ಇನ್ಫೋಸಿಸ್ ಮಾರುಕಟ್ಟೆಯಲ್ಲಿ ಪ್ರಬಲ ಸ್ಥಾನ ಪಡೆದಿದೆ. ವಿಶ್ವದ ಪ್ರಮುಖ 150 ಬ್ರ್ಯಾಂಡ್ಗಳ ಪೈಕಿ ಗುರಿತಿಸಿಕೊಂಡಿದೆ ಎಂದು ಸಿಇಒ ಮತ್ತು ಬ್ರ್ಯಾಂಡ್ ಫೈನಾನ್ಸ್ ಅಧ್ಯಕ್ಷ ಡೇವಿಡ್ ಹೈ ತಿಳಿಸಿದ್ದಾರೆ.
ಐಟಿ ಸೇವೆಗಳನ್ನು ಒದಗಿಸುವ ವಿಶ್ವದ ಮುಂಚೂಣಿ ಬ್ರ್ಯಾಂಡ್ಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ಅಮೆಜಾನ್ ಮುಮದುವರಿದಿದೆ. ಬ್ರ್ಯಾಂಡ್ ಮೌಲ್ಯ ಕುಸಿಯುತ್ತಿರುವುದರ ಮಧ್ಯೆಯೂ ಅಮೆಜಾನ್ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಕಂಪನಿಯ ಬ್ರ್ಯಾಂಡ್ ಮೌಲ್ಯ ಒಂದು ವರ್ಷದಲ್ಲಿ ಶೇ 15ರಷ್ಟು ಕುಸಿತವಾಗಿದೆ ಎಂದು ಬ್ರ್ಯಾಂಡ್ ಫೈನಾನ್ಸ್ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ