Gold Silver Price Today | ಬೆಂಗಳೂರು: ಚಿನ್ನಾಭರಣ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಚಿನ್ನ ಖರೀದಿಸಬೇಕು ಎಂದು ಪ್ಲಾನ್ ಮಾಡಿರಬಹುದು. ಇಂದು (ಆಗಸ್ಟ್ 30, ಸೋಮವಾರ) ಚಿನ್ನ (Gold Price) , ಬೆಳ್ಳಿ ದರ (Silver Price) ಎಷ್ಟಿದೆ? ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಎಷ್ಟು? ಎಂಬ ಮಾಹಿತಿ ಈ ಕೆಳಗಿನಂತಿದೆ. ಚಿನ್ನ ಖರೀದಿಸುವ ಬಗಗೆ ಯೋಚನೆ ಇದ್ದರೆ ದರ ವಿವರ ಪರಿಶೀಲಿಸಿ.
ಕಳೆದ ಕೆಲವು ದಿನಗಳಿಂದ ಚಿನ್ನ, ಬೆಳ್ಳಿ ದರ ಏರುತ್ತಲೇ ಇದೆ. ಇದು ಗ್ರಾಹಕರಿಗೆ ನಿರಾಸೆ ಮೂಡಿಸಿರುವ ವಿಚಾರ. ಚಿನ್ನದ ಆಭರಣಗಳನ್ನು ಕೊಳ್ಳಬೇಕು ಅಂದುಕೊಂಡಿದ್ದಾಗ ದರ ಕೂಡಾ ಇಳಿಕೆಯತ್ತ ಸಾಗಿರಬೇಕು ಎಂಬ ಆಸೆ ತಪ್ಪಲ್ಲ. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಅಲ್ಪ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ದರ ಏರಿಳಿತ ಕಾಣುತ್ತಿರುವುದು ಸಹಜ. ಹಾಗಿದ್ದಾಗ ಇಂದು ಸಹ ಚಿನ್ನ, ಬೆಳ್ಳಿ ದರ ಕೊಂಚ ಏರಿಕೆ ಕಂಡಿದೆ. ನೀವು ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವುದಾದರೆ ಯೋಚಿಸಬಹುದು.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,560 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,45,600 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಏರಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,610 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,86,100 ರೂಪಾಯಿ ಆಗಿದೆ. ಸುಮಾರು 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿ ಬೆಲೆ 63,800 ರೂಪಾಯಿ ನಿಗದಿ ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,080 ರೂಪಾಯಿ ನಿಗದಿ ಆಗಿದೆ. 100 ಗ್ರಾಂ ಚಿನ್ನಕ್ಕೆ 4,50,800 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಏರಿಕೆ ಕಂಡು ಬಂದಿದೆ. ಅದೆ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,180 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,91,800 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 100 ರೂಪಾಯಿ ಏರಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿಗೆ 68,700 ರೂಪಾಯಿ ನಿಗದಿ ಆಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,710 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,67,100 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 4,67,100 ರೂಪಾಯಿ ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,940 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,09,400 ರೂಪಾಯಿ ನಿಗದಿ ಆಗಿದೆ. ಕೆಜಿ ಬೆಳ್ಳಿಗೆ 63,800 ರೂಪಾಯಿ ಇದೆ.
Gold Price increased today 2021 august 30 check silver price in bangalore delhi mumbai and major city
Published On - 7:48 am, Mon, 30 August 21