Gold Rate Today: ವೀಕೆಂಡ್​ನಲ್ಲಿ ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಯೋಚಿಸುತ್ತಿದ್ದೀರಾ? ದರ ವಿವರ ಮಾಹಿತಿ ಪರಿಶೀಲಿಸಿ

Gold Price Today: ನಿನ್ನೆಗಿಂತ ಇಂದು ಬೆಲೆ ಏರಿಕೆಯಾಗಿಯೆಯೋ? ಅಥವಾ ಇಳಿದಿದೆಯೋ? ಎಂಬ ಸಂಪೂರ್ಣ ವಿವರ ಈ ಕೆಳಗಿನಂತಿದೆ. ನೀವು ಕೂಡಿಟ್ಟ ಹಣಕ್ಕೆ ಚಿನ್ನಾಭರಣ ಕೊಳ್ಳಬೇಕು ಅಂದನಿಸಿದರೆ ಆ ಕುರಿತಾಗಿ ಯೋಚಿಸಿ.

Gold Rate Today: ವೀಕೆಂಡ್​ನಲ್ಲಿ ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಯೋಚಿಸುತ್ತಿದ್ದೀರಾ? ದರ ವಿವರ ಮಾಹಿತಿ ಪರಿಶೀಲಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on:Aug 29, 2021 | 9:01 AM

Gold Silver Price Today | ಬೆಂಗಳೂರು: ಚಿನ್ನಾಭರಣ ಕೊಳ್ಳಬೇಕು ಎಂಬ ಆಸೆ ಜತೆಗೆ ಭಾರತೀಯರಲ್ಲಿ ಆಭರಣದ ಮೇಲೆ ಮೋಹ ಜಾಸ್ತಿ ಎಂದರೆ ತಪ್ಪಾಗಲಾರದು. ಕೇವಲ ಸಂಭ್ರಮದಲ್ಲಿ ಚಿನ್ನ (Gold Price), ಬೆಳ್ಳಿ ತೊಟ್ಟು ಸಂತೋಷ ಪಡುವುದೊಂದೇ ಅಲ್ಲ, ಕಷ್ಟ ಕಾಲದಲ್ಲಿ ನೆರವಾಗುವ ಚಿನ್ನಾಭರಣಕ್ಕೆ ಬೇಡಿಕೆ ಹೆಚ್ಚು ಇದೆ. ಹಾಗಾಗಿಯೇ ಪ್ರತಿನಿತ್ಯ ದರ ಎಷ್ಟಿದೆ? ಎಂಬ ಕೂತೂಹಲ ಕೆರಳುವುದು ಸಾಮಾನ್ಯ. ಇಂದು ( ಆಗಸ್ಟ್ 29, ಭಾನುವಾರ) ಪ್ರಮುಖ ನಗರದ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ (Silver Price) ಎಷ್ಟಿದೆ? ನಿನ್ನೆಗಿಂತ ಇಂದು ಬೆಲೆ ಏರಿಕೆಯಾಗಿಯೆಯೋ? ಅಥವಾ ಇಳಿದಿದೆಯೋ? ಎಂಬ ಸಂಪೂರ್ಣ ವಿವರ ಈ ಕೆಳಗಿನಂತಿದೆ. ನೀವು ಕೂಡಿಟ್ಟ ಹಣಕ್ಕೆ ಚಿನ್ನಾಭರಣ ಕೊಳ್ಳಬೇಕು ಅಂದನಿಸಿದರೆ ಆ ಕುರಿತಾಗಿ ಯೋಚಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,550 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,45,500 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,500 ರೂಪಾಯಿಯಷ್ಟು ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,600 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,86,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 1,600 ರೂಪಾಯಿ ಏರಿಕೆ ಕಂಡು ಬಂದಿದೆ. ಬೆಳ್ಳಿ ದರವೂ ಸಹ ಕೊಂಚ ಏರಿಕೆ ಆಗಿದ್ದು, ಕೆಜಿ ಬೆಳ್ಳಿಗೆ 63,800 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಏರಿಕೆಯಲ್ಲಿ ಸುಮಾರು 800 ರೂಪಾಯಿ ಹೆಚ್ಚಳವಾಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,070 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,50,700 ರೂಪಾಯಿ ಇದೆ. ದೈನಂದಿನ ದರ ಏರಿಕೆಯಲ್ಲಿ 2,300 ರೂಪಾಯಿ ಏರಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,170 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,91,700 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಏರಿಕೆಯಲ್ಲಿ 2,500 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಆಗಿದ್ದು 800 ರೂಪಾಯಿ ಏರಿಕೆ ಬಳಿಕ ಕೆಜಿ ಬೆಳ್ಳಿ ಬೆಲೆ 68,700 ರೂಪಾಯಿ ಏರಿಕೆ ಆಗಿದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,700 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,67,000 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,930 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,09,300 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,500 ರೂಪಾಯಿ ಏರಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿ ಬೆಲೆ 800 ರೂಪಾಯಿ ಏರಿಕೆ ಬಳಿಕ 63,800 ರೂಪಾಯಿ ನಿಗದಿ ಆಗಿದೆ.

ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಚಿನ್ನ, ಬೆಳ್ಳಿ ದರ ಏರಿಕೆ ಕಂಡಿದೆ. ನಿನ್ನೆ ಚಿನ್ನದ ದರ ಕೊಂಚ ಏರಿಕೆ ಕಂಡಿತ್ತು. ಆದರೆ ಬೆಳ್ಳಿ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡು ಬಂದಿತ್ತು. ಆದರೆ ಇಂದು ಬೆಂಗಳೂರು, ದೆಹಲಿ, ಚೆನ್ನೈ ಸೇರಿದಂತೆ, ಜೈಪುರ, ಹೈದರಾಬಾದ್, ಕೇರಳದಲ್ಲಿ ಚಿನ್ನಾಭರಣದ ಬೆಲೆ ಹೆಚ್ಚಳವಾಗಿದೆ.

ಇದನ್ನೂ ಓದಿ:

Gold Rate Today: ಸತತ 2 ದಿನಗಳಿಂದ ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ ಗೊತ್ತಾ?

Gold Rate Today: ಗ್ರಾಹಕರಿಗೆ ಗುಡ್ ನ್ಯೂಸ್; ಚಿನ್ನದ ದರದಲ್ಲಿ ಇಳಿಕೆ, ಆಭರಣ ಖರೀದಿಸುವುದಾದರೆ ಯೋಚಿಸಿ

Published On - 8:50 am, Sun, 29 August 21