Gold Price Today: 6 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಚಿನ್ನದ ದರ; ಆಭರಣ ಖರೀದಿಸಲು ಸೂಕ್ತ ಸಮಯವೇ?

| Updated By: shruti hegde

Updated on: Sep 22, 2021 | 9:22 AM

Gold Rate Today: ದೀಪಾವಳಿ ಸಮಯದಲ್ಲಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ. 10 ಗ್ರಾಂಗೆ 50,000 ಕ್ಕೆ ಏರಿಕೆಯಾಗಬಹುದು ಹಾಗಾಗಿ ಚಿನ್ನ ಖರೀದಿಸಲು ಇದು ಸುಸಮಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

Gold Price Today: 6 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಚಿನ್ನದ ದರ; ಆಭರಣ ಖರೀದಿಸಲು ಸೂಕ್ತ ಸಮಯವೇ?
ಸಾಂದರ್ಭಿಕ ಚಿತ್ರ
Follow us on

Gold Silver Price Today |  ಕಳೆದ ಸೋಮವಾರ ಚಿನ್ನದ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ದರ 45,900 ರೂಪಾಯಿ ನಿಗದಿಯಾಗಿದೆ. ಈ ಮೂಲಕ MCX ( ಮಲ್ಟಿ ಕಮೊಡಿಟಿ ಎಕ್ಸ್​ಚೇಂಜ್​ನಲ್ಲಿ) 6 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ. ವಿದೇಶಿ ವಿನಮಯ ಮಾರುಕಟ್ಟೆಯಲ್ಲಿನ ಬದಲಾವಣೆ, ಕಚ್ಚಾ ತೈಲ ಬೆಲೆ ಏರಿಕೆಯು ಜಾಗತಿಕ ಮಟ್ಟದ ಹಣದುಬ್ಬರದಲ್ಲಿ ಏರಿಕೆ ಕಾರಣವಾಗುವುದರಿಂದ ಡಾಲರ್​ ಪ್ರಬಲ ವೇಗವು ಹೆಚ್ಚಾಗ ಉಳಿಯುವುದಿಲ್ಲ. ಇವೆಲ್ಲಾ ಕಾರಣಗಳು ಸರಕು ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯನ್ನು ತಳ್ಳಿಹಾಕುತ್ತವೆ. ದೀಪಾವಳಿ ಸಮಯದಲ್ಲಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ. 10 ಗ್ರಾಂಗೆ 50,000 ಕ್ಕೆ ಏರಿಕೆಯಾಗಬಹುದು ಹಾಗಾಗಿ ಚಿನ್ನ ಖರೀದಿಸಲು ಇದು ಸುಸಮಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಮಾಹಿತಿಯನ್ನು ದಿ ಮಿಂಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯುಎಸ್ ಡಾಲರ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಲವನ್ನು ಪಡೆಯುತ್ತಿರುವುದರಿಂದ ಚಿನ್ನ ಬೆಲೆ ಕುಸಿದಿದೆ. ಆದರೆ, ಜಾಗತಿಕ ಸರಕು ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ ಇದು ಹೆಚ್ಚು ಕಾಲ ಉಳಿಯುವುದಿಲ್ಲ. ಇದು ಜಾಗತಿಕ ಮಟ್ಟದಲ್ಲಿ ಹಣದುಬ್ಬರಕ್ಕೆ ಕಾರಣವಾಗಬಹುದು.

ಭಾತರದಲ್ಲಿ ಒಂದಾದ ಮೇಲೊಂದು ಬರುವ ಹಬ್ಬದ ಸೀಸನ್ ಜತೆಗೆ ಅಫ್ಘಾನಿಸ್ತಾನ ಮತ್ತು ದಕ್ಷಿಣ ಚೀನಾ ರಾಜಕೀಯ ಭೌಗೋಳಿಕ ಪಲ್ಲಟಗಳು ಅಮೂಲ್ಯವಾದ ಲೋಹದ ಬೇಡಿಕೆಯನ್ನು ಮತ್ತುಷ್ಟು ಹೆಚ್ಚಿಸಬಹುದು ಎಂದು ಸರಕು ಮತ್ತು ಕರೆನ್ಸಿ ವ್ಯಾಪಾರದ ಉಪಾಧ್ಯಕ್ಷ ಅನುಜ್ ಗುಪ್ತಾ ಮಾಹಿತಿ ನೀಡಿದ್ದಾರೆ. ಚಿನ್ನದ ಬೆಲೆ ಇಂದು MCX ನಲ್ಲಿ 45,900 ರೂಪಾಯಿ ಆಗಿದೆ. ಮುಂದಿ ಕೆಲವು ಟ್ರೇಡ್ ಸೆಷನ್​ಗಳಲ್ಲಿ ಈ ಬೆಲೆ 10 ಗ್ರಾಂಗೆ 400 ರಿಂದ 500 ರೂಪಾಯಿ ಇಳಿಕೆ ಆಗಬಹುದು. ಹಾಗಾಗಿ ಚಿನ್ನದ ಹೂಡಿಕೆದಾರರು ಕಾಯುವಂತೆ ಅನುಜ್ ಗುಪ್ತಾ ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನ 43,500 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,35,000 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,460 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,74,600 ರೂಪಾಯಿ ನಿಗದಿ ಆಗಿದೆ. ಬೆಳ್ಳಿ ದರದಲ್ಲಿ 200 ರೂಪಾಯಿ ಇಳಿಕೆ ಕಂಡು ಬಂದಿದೆ. ಬಳಿಕ ಕೆಜಿ ಬೆಳ್ಳಿಗೆ 59,800 ರೂಪಾಯಿ ನಿಗದಿಯಾಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,750 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,37,500 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,730 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,37,500 ರೂಪಾಯಿ ನಿಗದಿಯಾಗಿದೆ. ಕೆಜಿ ಬೆಳ್ಳಿಗೆ 63,800 ರೂಪಾಯಿ ನಿಗದಿಯಾಗಿದೆ.

ಇದನ್ನೂ ಓದಿ:

Gold Price Today: ಆಭರಣ ಖರೀದಿಸುವ ಯೋಚನೆಯಿದೆಯೇ? ನಿನ್ನೆ ದರ ಇಳಿಕೆಯ ಬಳಿಕ ಇಂದು ಸ್ಥಿರತೆಯಲ್ಲಿದೆ ಚಿನ್ನದ ದರ

Gold Price Today: ಗ್ರಾಹಕರೇ ಗಮನಿಸಿ! ಏರಿಕೆಯಾಗಿದ್ದ ಚಿನ್ನ, ಬೆಳ್ಳಿ ದರದಲ್ಲಿ ಇಂದು ಇಳಿಕೆ

(Gold price today 2021 September 22 down near 6 months check in Kannada)

Published On - 8:52 am, Wed, 22 September 21