Gold Price on 11th October 2022 | ಬೆಂಗಳೂರು: ಭಾರತದಲ್ಲಿ 3 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ (Gold Rate) ಇಂದು 270 ರೂ. ಕುಸಿತವಾಗಿದೆ. ಬೆಳ್ಳಿ ಬೆಲೆ (Silver Price) ಇಂದು 1,300 ರೂ. ಕುಸಿತವಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. 4 ದಿನಗಳಿಂದ 22 ಕ್ಯಾರೆಟ್ ಚಿನ್ನದ ಬೆಲೆ 47,850 ರೂ. ಇದ್ದುದು ಇಂದು 47,600 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,200 ರೂ. ಇದ್ದುದು 51,930 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,050 ರೂ. ಮುಂಬೈ- 47,600 ರೂ, ದೆಹಲಿ- 47,750 ರೂ, ಕೊಲ್ಕತ್ತಾ- 47,600 ರೂ, ಬೆಂಗಳೂರು- 47,650 ರೂ, ಹೈದರಾಬಾದ್- 47,600 ರೂ, ಕೇರಳ- 47,600 ರೂ, ಪುಣೆ- 47,630 ರೂ, ಮಂಗಳೂರು- 47,650 ರೂ, ಮೈಸೂರು- 47,650 ರೂ. ಆಗಿದೆ.
ಇದನ್ನೂ ಓದಿ: Gold Price Today: 2 ದಿನಗಳಿಂದ ಯಥಾಸ್ಥಿತಿಯಲ್ಲಿದೆ ಚಿನ್ನದ ಬೆಲೆ; ಬೆಳ್ಳಿ ದರ 800 ರೂ. ಕುಸಿತ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 52,420 ರೂ, ಮುಂಬೈ- 51,930 ರೂ, ದೆಹಲಿ- 52,100 ರೂ, ಕೊಲ್ಕತ್ತಾ- 51,930 ರೂ, ಬೆಂಗಳೂರು- 51,980 ರೂ, ಹೈದರಾಬಾದ್- 51,930 ರೂ, ಕೇರಳ- 51,930 ರೂ, ಪುಣೆ- 51,960 ರೂ, ಮಂಗಳೂರು- 51,980 ರೂ, ಮೈಸೂರು- 51,980 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಬೆಳ್ಳಿ ದರ ಇಂದು 1,300 ರೂ. ಕುಸಿತವಾಗಿದೆ. 2 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 60,800 ರೂ. ಇದ್ದುದು ಇಂದು 59,500 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 64,800 ರೂ, ಮೈಸೂರು- 64,800 ರೂ., ಮಂಗಳೂರು- 64,800 ರೂ., ಮುಂಬೈ- 59,500 ರೂ, ಚೆನ್ನೈ- 64,800 ರೂ, ದೆಹಲಿ- 59,500 ರೂ, ಹೈದರಾಬಾದ್- 64,800 ರೂ, ಕೊಲ್ಕತ್ತಾ- 59,500 ರೂ. ಆಗಿದೆ.