Gold Silver Rate Today | ಬೆಂಗಳೂರು: ಹಲವೆಡೆ ನಿನ್ನೆ ಚಿನ್ನದ ದರ (Gold Price) ಕೊಂಚ ಇಳಿಕೆ ಕಂಡಿತ್ತು. ಅದೇ ರೀತಿ ಬೆಳ್ಳಿ ದರದಲ್ಲಿ (Silver Price) ಅಲ್ಪ ಏರಿಕೆಯಾಗಿತ್ತು. ಆದರೆ ಇಂದು ( ಆಗಸ್ಟ್ 5, ಗುರುವಾರ) ಆಭರಣದ ಬೆಲೆ ಸ್ಥಿರವಾಗಿದೆ. ಕೆಲವೆಡೆ ಬೆಳ್ಳಿ ದರ ಏರಿಕೆಯತ್ತ ಸಾಗಿದೆ. ಚಿನ್ನದ ದರವನ್ನು ಗಮಿಸಿದಾಗ ಪ್ರಮುಖ ಎಲ್ಲಾ ಮಹಾನಗರದಲ್ಲಿಯೂ ಸಹ ಇಂದು ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಹಾಗಿರುವಾಗ ಇಂದು ಚಿನ್ನ ಖರೀದಿಸುವ ಕುರಿತು ಯೋಚಿಸಬಹುದು. ನಿಮ್ಮೂರಿನಲ್ಲಿ ಆಭರಣದ ಬೆಲೆ ಎಷ್ಟಿದೆ ತಿಳಿಯಿರಿ, ನೀವು ಕೂಡಿಟ್ಟ ಹಣಕ್ಕೆ ಸರಿ ಹೊಂದುವುದಾದರೆ ಆಭರಣ ಖರೀದಿಸುವ ಕುರಿತಾಗಿ ಯೋಚಿಸಬಹುದು.
ಕೊರೊನಾ ಸಾಂಕ್ರಾಮಿಕದಿಂದಾಗಿ ಮದುವೆ ಸಮಾರಂಭಗಳು ಅಷ್ಟಾಗಿ ನಡೆಯುತ್ತಿಲ್ಲ. ನಡೆಯುತ್ತಿರುವ ಸಮಾರಂಭಗಳಿಗೆ ಅಷ್ಟಾಗಿ ಜನ ಸೇರುವಂತಿಲ್ಲ. ಕೇವಲ ಚಿನ್ನವನ್ನು ತೊಟ್ಟು ಅಲಂಕಾರಗೊಳ್ಳುವುದೊಂದೇ ಅಲ್ಲ! ಭಾರತೀಯರ ಸಂಪ್ರದಾಯದ ಪ್ರಕಾರ ಮಧುಮಗಳಿಗೆ ಚಿನ್ನವನ್ನು ನೀಡಿ ಬೇರೊಂದು ಮನೆಗೆ ಕಳುಹಿಸಬೇಕು ಎಂಬ ಆಚರಣೆಯೂ ಇದೆ. ಹಾಗಿರುವಾಗ ನಿಮ್ಮ ಮನೆಯಲ್ಲಿ ನಿಶ್ಚಯವಾದ ಮದುವೆ ಸಮಾರಂಭಕ್ಕೆ ಚಿನ್ನ ಕೊಳ್ಳಬೇಕು ಎಂದು ನಿರ್ಧರಿಸಿರಬಹುದು. ಅದೆಷ್ಟೋ ವರ್ಷಗಳಿಂದ ಆಭರಣ ಕೊಳ್ಳಲೆಂದೇ ಹಣವನ್ನು ಕೂಡಿಟ್ಟು ಬಂದಿರುತ್ತೀರಿ. ಇಂದಿನ ದರ ನಿಮಗೆ ಸರಿ ಹೊಂದುವುದಾರೆ ಆ ಕುರಿತಂತೆ ಯೋಚಿಸಿ.
ಚಿನ್ನದ ದರ ಮಾಹಿತಿ
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,900 ರೂಪಾಯಿ ಇದೆ. ಅದೆ ರೀತಿ 100 ಗ್ರಾಣ ಚಿನ್ನಕ್ಕೆ 4,49,000 ರೂಪಾಯಿ ಇದೆ. ದೈನಂದಿನ ದರ ವ್ಯತ್ಯಾಸದಲ್ಲಿ ಯಾವುದೇ ಏರಿಳಿತಗಳು ಕಂಡು ಬಂದಿಲ್ಲ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,980 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,89,800 ರೂಪಾಯಿ ಇದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,330 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,53,300 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,450 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,94,500 ರೂಪಾಯಿ ಇದೆ.
ದೆಹಲಿಯಲ್ಲಿ ಚಿನ್ನದ ದರ ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,040 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,70,400 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,320 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,13,200 ರೂಪಾಯಿಗೆ ಇಳಿಕೆಯಾಗಿದೆ.
ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಇಂದು ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇನ್ನು ಕೆಲವೆಡೆ ಕೊಂಚ ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ಕೆಲವೆಡೆ ಏರಿಕೆ ಕಂಡು ಬಂದಿದೆ.
ಬೆಳ್ಳಿ ದರ ಮಾಹಿತಿ
ದೆಹಲಿಯಲ್ಲಿ ಕೆಜಿ ಬೆಳ್ಳಿಗೆ 68,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ವ್ಯತ್ಯಾಸದಲ್ಲಿ 400 ರೂಪಾಯಿ ಏರಿಕೆ ಕಂಡು ಬಂದಿದೆ. ಚೆನ್ನೈನಲ್ಲಿಯೂ ಸಹ 400 ರೂಪಾಯಿ ಏರಿಕೆ ಬಳಿಕ ಕೆಜಿ ಬೆಳ್ಳಿಗೆ 73,100 ರೂಪಾಯಿ ನಿಗದಿಯಾಗಿದೆ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿಯೂ ಕೂಡಾ ಬೆಳ್ಳಿ ದರ ಇಂದು ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಇದನ್ನೂ ಓದಿ:
Gold Rate Today: ಇಂದು ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ಬೆಲೆಯಲ್ಲಿ ಏರಿಕೆ; ನಿಮ್ಮೂರಿನಲ್ಲಿ ಆಭರಣದ ಬೆಲೆ ಎಷ್ಟಿದೆ?