Gold Price Today: ಬೆಂಗಳೂರಿನಲ್ಲಿ ಮತ್ತಷ್ಟು ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ; ಇಂದಿನ ದರ ಇಲ್ಲಿದೆ ನೋಡಿ

| Updated By: sandhya thejappa

Updated on: Dec 02, 2021 | 9:21 AM

Gold Rate Today: ವರ್ಷದ ಕೊನೆಯಲ್ಲಿ ಚಿನ್ನಕ್ಕೆ ಉತ್ತಮ ಬೇಡಿಕೆಯಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,600 ರೂ. ಮತ್ತು 100 ಗ್ರಾಂ ಚಿನ್ನಕ್ಕೆ 4,46,000 ರೂ ಇದೆ. 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಗಮನಿಸಿದಾಗ ನಿನ್ನಗಿಂತ ಸ್ವಲ್ಪ ಕಡಿಮೆಯಾಗಿದೆ. 1

Gold Price Today: ಬೆಂಗಳೂರಿನಲ್ಲಿ ಮತ್ತಷ್ಟು ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ; ಇಂದಿನ ದರ ಇಲ್ಲಿದೆ ನೋಡಿ
ಸಂಗ್ರಹ ಚಿತ್ರ
Follow us on

ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ಎಷ್ಟಿದ್ದರೂ ಹೊಸ ಹೊಸ ಡಿಸೈನ್ಸ್​ಗಳತ್ತ ಕಣ್ಣು ಹೋಗುತ್ತ ಇರುತ್ತೆ. ಹಾಗಂತ ಇದು ತಪ್ಪಲ್ಲ. ಆಭರಣ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಲ್ಲದೇ ಆರ್ಥಿಕ ಸಮಸ್ಯೆ ಎದುರಾದಾಗ ಕೈ ಹಿಡಿಯುತ್ತದೆ. ಹೀಗಾಗಿ ಭಾರತೀಯರಿಗೆ ಚಿನ್ನ, ಬೆಳ್ಳಿಯತ್ತ ಹೆಚ್ಚು ಆಸಕ್ತಿ. ಹಾಗಾದರೆ ಇವತ್ತಿಗೆ ಚಿನ್ನದ ಬೆಲೆ (Gold Price) ಎಷ್ಟಿದೆ? ಇನ್ನು ಬೆಳ್ಳಿ ಬೆಲೆ (Silver Price) ಎಷ್ಟಿದೆ? ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಆಭರಣದ ಬೆಲೆ ಎಷ್ಟಿದೆ? ಅಂತ ಇಲ್ಲಿ ತಿಳಿಸಿದ್ದೀವಿ. ಇಂದು ಆಭರಣ ಕೊಳ್ಳುವವರು ಇಂದಿನ (ಡಿಸೆಂಬರ್ 2) ಆಭರಣದ ಬೆಲೆ ಎಷ್ಟಿದೆ ಅಂತ ಈ ಕೆಳಗಡಂತೆ ತಿಳಿಸಲಾಗಿದೆ, ಗಮನಿಸಿ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಹೀಗಿದೆ (Bangalore Gold And Silver Price)
ವರ್ಷದ ಕೊನೆಯಲ್ಲಿ ಚಿನ್ನಕ್ಕೆ ಉತ್ತಮ ಬೇಡಿಕೆಯಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,600 ರೂ. ಮತ್ತು 100 ಗ್ರಾಂ ಚಿನ್ನಕ್ಕೆ 4,46,000 ರೂ ಇದೆ. 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಗಮನಿಸಿದಾಗ ನಿನ್ನಗಿಂತ ಸ್ವಲ್ಪ ಕಡಿಮೆಯಾಗಿದೆ. 10 ಗ್ರಾಂ ಗೆ 250 ರೂ. ಮತ್ತು 100 ಗ್ರಾಂ ಗೆ 2,500 ರೂ. ಕಡಿಮೆಯಾಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,650 ರೂ ನಿಗದಿಯಾಗಿದೆ. 100 ಗ್ರಾಂ ಬಂಗಾರಕ್ಕೆ 4,86,500 ರೂ. ಇದೆ. ಈ 24 ಕ್ಯಾರೆಟ್ ಚಿನ್ನ ಬೆಲೆಯಲ್ಲೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. 10 ಗ್ರಾಂಗೆ 280 ರೂ. ಇಳಿಕೆಯಾಗಿದ್ದರೆ, 100 ಗ್ರಾಂ ಗೆ 2,800 ರೂ. ಕಡಿಮೆಯಾಗಿದೆ. ನಿನ್ನೆಗಿಂತ ಬೆಳ್ಳಿ ಬೆಲೆ ಕೊಂಚ ಕಡಿಮೆಯಾಗಿದೆ. ಒಂದು ಕೆಜಿಗೆ 61,900 ರೂ. ಇದ್ದ ಬೆಲೆ ಇಂದು ಒಂದು ಕೆಜಿ ಬೆಳ್ಳಿಗೆ 61,700 ರೂ. ಆಗಿದೆ. ಅಂದರೆ 200 ರೂಪಾಯಿ ಕಡಿಮೆಯಾಗಿದೆ.

ದೆಹಲಿಯಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು? ( Delhi Gold And Silver Price)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,750 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 4,67,500 ರೂ. ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 51,000 ರೂ. ಇದ್ದು, 100 ಗ್ರಾಂಗೆ 5,10,000 ರೂಪಾಯಿ ಇದೆ. ನಗರದಲ್ಲಿ 1 ಕೆಜಿ ಬೆಳ್ಳಿಗೆ ನಿನ್ನೆ 61,900 ರೂ ಇತ್ತು. ಆದರೆ ಇಂದು 61,700 ರೂ. ಇದೆ. ಬೆಲೆ ಗಮನಿಸಿದಾಗ ನಿನ್ನೆಗಿಂತ 200 ರೂ. ಕಡಿಮೆಯಾಗಿದೆ.

ಆಭರಣದ ಬೆಲೆ ಮುಂಬೈನಲ್ಲಿ ಎಷ್ಟಿದೆ ಗೊತ್ತಾ? (Mumbai Gold And Silver Price)
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,120 ರೂ. ಮತ್ತು 100 ಗ್ರಾಂಗೆ 4,71,200 ರೂ. ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನಕ್ಕೆ 48,120 ರೂ. ಮತ್ತು ಅದೇ 100 ಗ್ರಾಂ ಚಿನ್ನಕ್ಕೆ 4,81,200 ರೂಪಾಯಿದೆ ಇದೆ. ಇಲ್ಲಿನ ದರ ಗಮನಿಸಿದಾಗ ನಿನ್ನೆ ಇದ್ದಷ್ಟೆ ಇದೆ. ಮುಂಬೈನಲ್ಲಿ 1 ಕೆಜಿ ಬೆಳ್ಳಿಗೆ 61,700 ರೂಪಾಯಿ ನಿಗದಿಯಾಗಿದೆ. ನಿನ್ನೆಗಿಂತ 200 ರೂಪಾಯಿ ಕಡಿಮೆಯಾಗಿದೆ.

ಇದನ್ನೂ ಓದಿ

ಡಾನ್​ ಆದ ರಘು ದೀಕ್ಷಿತ್​ಗೆ ಡ್ಯಾಡಿ ಅಂತಾರೆ; ‘ಬ್ಯಾಂಗ್​’ ಚಿತ್ರದಲ್ಲಿ ನಟಿ ಶಾನ್ವಿಗೆ ಹೊಸ ಅವತಾರ

Karnataka Dams Water Level: ಕಬಿನಿ ಡ್ಯಾಂನಲ್ಲಿ ತಗ್ಗಿದ ನೀರು; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Published On - 9:20 am, Thu, 2 December 21