Reliance Jio: ವೊಡಾಫೋನ್ ಐಡಿಯಾದ ವಿರುದ್ಧ ದೂರು ನೀಡಿ ಪತ್ರ ಬರೆದ ರಿಲಯನ್ಸ್ ಜಿಯೋ
ವೊಡಾಫೋನ್ ಐಡಿಯಾ ವಿರುದ್ಧ ರಿಲಯನ್ಸ್ ಜಿಯೋದಿಂದ ಟ್ರಾಯ್‌ಗೆ ದೂರು ನೀಡಲಾಗಿದೆ. ಏತಕ್ಕಾಗಿ ಎಂಬುದರ ಮಾಹಿತಿ ಈ ಲೇಖನದಲ್ಲಿ ಇದೆ.
ಅಧಿಕೃತ ಮೂಲಗಳ ಪ್ರಕಾರ, ವೊಡಾಫೋನ್ ಐಡಿಯಾದ ಹೊಸ ದರ ರಚನೆಯು ಆರಂಭ ಹಂತದ ಗ್ರಾಹಕರನ್ನು ಈ ನೆಟ್‌ವರ್ಕ್‌ನಿಂದ ತಮ್ಮ ಮೊಬೈಲ್ ಸಂಖ್ಯೆಯನ್ನು ಬೇರೆಯದಕ್ಕೆ ಪೋರ್ಟ್ ಮಾಡಲು ನಿರ್ಬಂಧಿಸುತ್ತದೆ ಎಂದು ದೂರಿ, ರಿಲಯನ್ಸ್ ಜಿಯೋ ನಿಯಂತ್ರಕ ಟ್ರಾಯ್‌ಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ. ವೊಡಾಫೋನ್ ಐಡಿಯಾ (ವಿಐಎಲ್) ನವೆಂಬರ್‌ನಲ್ಲಿ ಮೊಬೈಲ್ ಸೇವೆಗಳು ಮತ್ತು ಡೇಟಾ ದರಗಳನ್ನು ಶೇಕಡಾ 18ರಿಂದ 25ರಷ್ಟು ಹೆಚ್ಚಿಸಿದೆ. ಹೊಸ ದರದ ಅಡಿಯಲ್ಲಿ, VIL ಆರಂಭ ಹಂತದ ಯೋಜನೆಯನ್ನು 28 ದಿನಗಳ ಮಾನ್ಯತೆಯೊಂದಿಗೆ ರೂ. 75ರಿಂದ ರೂ. 99ಕ್ಕೆ ಹೆಚ್ಚಿಸಿದೆ. ಆದರೆ ಆರಂಭ ಹಂತದ ಯೋಜನೆಯು ಎಸ್ಸೆಮ್ಮೆಸ್ ಸೇವೆಯೊಂದಿಗೆ ಸಂಯೋಜನೆ ಮಾಡಿಲ್ಲ.
“ವಿಐಎಲ್‌ನ ಆರಂಭ ಹಂತದ ಯೋಜನೆಗಳಲ್ಲಿ ಹೊರಹೋಗುವ ಎಸ್‌ಎಂಎಸ್ ಸೌಲಭ್ಯ ಲಭ್ಯವಿಲ್ಲದ ಕಾರಣ ಕಡಿಮೆ ಮೌಲ್ಯದ ಯೋಜನೆಗಳನ್ನು ಆಯ್ಕೆ ಮಾಡುವ ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡುವುದನ್ನು ನಿರ್ಬಂಧಿಸುತ್ತದೆ ಎಂದು ಟ್ರಾಯ್‌ಗೆ ಜಿಯೋ ದೂರು ನೀಡಿದೆ,” ಎಂಬುದಾಗಿ ಮೂಲಗಳು ತಿಳಿಸಿವೆ. ಜಿಯೋ ದೂರಿನ ಪ್ರಕಾರ, ವಿಐಎಲ್ 179 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಯೋಜನೆಗಳಲ್ಲಿ ಎಸ್ಸೆಮ್ಮೆಸ್ ಸೇವೆಯನ್ನು ಒದಗಿಸುತ್ತಿದೆ. ಜಿಯೋ ಮತ್ತು VILಗೆ ಕಳುಹಿಸಲಾದ ಇಮೇಲ್ ಪ್ರಶ್ನೆಗಳಿಗೆ ಯಾವುದೇ ಉತ್ತರವನ್ನು ನೀಡಿಲ್ಲ.
ಎನ್‌ಜಿಒ ಟೆಲಿಕಾಂ ನಿಗಾಸಂಸ್ಥೆ ಸಹ ವಿಐಎಲ್‌ನ ಹೊಸ ದರವು ಜಾರಿಗೆ ಬಂದ ದಿನದಂದು ಇದೇ ವಿಷಯದ ಕುರಿತು ಟ್ರಾಯ್‌ಗೆ ದೂರು ಸಲ್ಲಿಸಿತ್ತು.”ವೊಡಾಫೋನ್ ಐಡಿಯಾವು ಪ್ಯಾಕೇಜ್‌ಗಳಾದ್ಯಂತ ದರದ ಯೋಜನೆಯನ್ನು ಹೆಚ್ಚಿಸಿದೆ. ಆದರೂ ಅವರು ಎಸ್ಸೆಮ್ಮೆಸ್ ಸೇವೆಗಳನ್ನು ಹೆಚ್ಚಿನ ದರದ ಬ್ರಾಕೆಟ್‌ಗೆ, ಅಂದರೆ ರೂ. 179ರ ಪ್ಯಾಕೇಜ್‌ಗೆ ವರ್ಗಾಯಿಸಿದ ಬಗ್ಗೆ ನಮ್ಮ ಆತಂಕವಿದೆ. ನಿಮಗೆ ತಿಳಿದಿರುವಂತೆ ಪೋರ್ಟ್ ಮಾಡಲು ಎಸ್ಸೆಮ್ಮೆಸ್ ಸೇವೆಯ ಅಗತ್ಯವಿದೆ. ಗ್ರಾಹಕರು ಪೋರ್ಟ್ ಔಟ್ ಮಾಡಲು ಬಯಸಿದರೆ, ಅವರು ಎಸ್ಸೆಮ್ಮೆಸ್ ಸೇವೆಯೊಂದಿಗೆ ದರದ ಯೋಜನೆಯನ್ನು ಪಡೆಯಲು ಮೊದಲು ರೂ.179 ಪಾವತಿಸಬೇಕು,” ಎಂದು ಎನ್‌ಜಿಒ ಹೇಳಿದೆ.
ಉತ್ತಮ ಸೇವೆಗಳಿಗಾಗಿ ಗ್ರಾಹಕರು ಇತರ ಟೆಲಿಕಾಂ ನೆಟ್‌ವರ್ಕ್‌ಗಳಿಗೆ ಹೋಗುವುದನ್ನು ತಡೆಯುವುದು VIL ಕ್ರಮವಾಗಿದೆ ಎಂದು ಅದು ಆರೋಪಿಸಿದೆ. “ಗ್ರಾಹಕರ ಹಿತಾಸಕ್ತಿ ಕಾಪಾಡಲು ಟ್ರಾಯ್ ಯಾವುದೇ ಕ್ರಮವನ್ನು ಆರಂಭಿಸದ ಕಾರಣ ವೊಡಾಫೋನ್ ಐಡಿಯಾದ ಇಂತಹ ರೀತಿಯ ಕ್ರಮವು ಗಮನಕ್ಕೆ ಬಂದಿಲ್ಲ ಎಂಬುದು ನಮಗೆ ತುಂಬಾ ಆಶ್ಚರ್ಯವಾಗಿದೆ. ವಾಸ್ತವವಾಗಿ, ಎಸ್ಸೆಮ್ಮೆಸ್ ಸೇವೆಗಳು ಕಡಿಮೆ ದರದ ಯೋಜನೆಯಲ್ಲಿ ಲಭ್ಯವಿರಬೇಕು,” ಎಂದು ದೂರಸಂಪರ್ಕ ನಿಗಾಸಂಸ್ಥೆ ಹೇಳಿದೆ.
ಇದನ್ನೂ ಓದಿ: ವೊಡಾಫೋನ್- ಐಡಿಯಾ ಬಳಕೆದಾರರಿಗೆ ಶಾಕ್; ನವೆಂಬರ್ 25ರಿಂದಲೇ ಪ್ರಿಪೇಯ್ಡ್ ಸೇವೆಗಳ ದರ ಹೆಚ್ಚಳ