AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger: ಈ ಷೇರಿನ ಮೇಲೆ ಹೂಡಿಕೆ ಮಾಡಿದ್ದ 1 ಲಕ್ಷ ರೂಪಾಯಿ 8 ತಿಂಗಳಲ್ಲಿ 71 ಲಕ್ಷ ರೂಪಾಯಿ

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಮೇಲೆ ಮಾಡಿದ 1 ಲಕ್ಷ ರೂಪಾಯಿ ಹೂಡಿಕೆ ಈ ವರ್ಷದ ಎಂಟೇ ತಿಂಗಳಲ್ಲಿ ಹೂಡಿಕೆದಾರರಿಗೆ 71 ಲಕ್ಷ ಆಗಿದೆ. ಯಾವುದು ಆ ಷೇರು ಎಂಬ ಮಾಹಿತಿ ಇಲ್ಲಿದೆ.​

Multibagger: ಈ ಷೇರಿನ ಮೇಲೆ ಹೂಡಿಕೆ ಮಾಡಿದ್ದ 1 ಲಕ್ಷ ರೂಪಾಯಿ 8 ತಿಂಗಳಲ್ಲಿ 71 ಲಕ್ಷ ರೂಪಾಯಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Dec 01, 2021 | 7:32 PM

Share

ಪೆನ್ನಿ ಸ್ಟಾಕ್​ಗಳು ಯಾವಾಗಲೂ ಅಪಾಯಕಾರಿ. ಈ ಷೇರುಗಳಲ್ಲಿನ ಲಿಕ್ವಿಡಿಟಿ ಕಡಿಮೆಯಾದ್ದರಿಂದ ಒಂದೊಂದು ಸಲ ಭಾರೀ ಬೆಲೆ ಏರಿಕೆಗೆ ಕಾರಣ ಆಗಿಬಿಡುತ್ತದೆ. ಕೊವಿಡ್​-19 ಚೇತರಿಕೆ ನಂತರ ಷೇರು ಮಾರುಕಟ್ಟೆಯಲ್ಲಿ ಹಲವು ಪೆನ್ನಿ ಸ್ಟಾಕ್​ಗಳು ಊಹಿಸಲು ಕೂಡ ಸಾಧ್ಯವಿಲ್ಲದಂಥ ಮಲ್ಟಿಬ್ಯಾಗರ್​ ರಿಟರ್ನ್ ಅನ್ನು ಷೇರುದಾರರಿಗೆ ನೀಡಿದೆ. ಅಂಥ ಷೇರುಗಳಲ್ಲಿ ಒಂದು ಗೋಪಾಲ ಪಾಲಿಪ್ಲಾಸ್ಟ್​. ಈ ಕಂಪೆನಿಯ ಷೇರಿನ ಬೆಲೆ ಮಾರ್ಚ್ 31, 2021ರಂದು ಬಿಎಸ್​ಇಯಲ್ಲಿ 9.10 ರೂಪಾಯಿ ಇದ್ದದ್ದು ಎಂಟು ತಿಂಗಳಲ್ಲಿ, ಅಂದರೆ ಡಿಸೆಂಬರ್ 1, 2021ರ ಬೆಳಗ್ಗೆ ಬಿಎಸ್​ಇಯಲ್ಲಿ 650 ರೂಪಾಯಿಗೆ ಚಹಿವಾಟು ನಡೆಸಿತ್ತು. ಆ ಮೂಲಕ ಈ ಅವಧಿಯಲ್ಲಿ ಹತ್ತಿರ ಹತ್ತಿರ 70 ಪಟ್ಟು ರಿಟರ್ನ್ಸ್ ನೀಡಿದೆ.

ಗೋಪಾಲ ಪಾಲಿಪ್ಲಾಸ್ಟ್ ಷೇರು ಬೆಲೆ ಇತಿಹಾಸ ಗೋಪಾಲ ಪಾಲಿಪ್ಲಾಸ್ಟ್ ಷೇರು ಬೆಲೆ ಇತಿಹಾಸದ ಪ್ರಕಾರ, ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಇತ್ತೀಚಿನ ಟ್ರೇಡ್ ಸೆಷನ್‌ಗಳಲ್ಲಿ ಪ್ರಾಫಿಟ್ ಬುಕಿಂಗ್ ಒತ್ತಡದಲ್ಲಿದೆ. ಈ ಪೆನ್ನಿ ಸ್ಟಾಕ್ ಕಳೆದ ಒಂದು ತಿಂಗಳಲ್ಲಿ ಶೇಕಡಾ 12ರಷ್ಟು ಕುಸಿದಿದೆ. ಆದರೆ ಕಳೆದ 6 ತಿಂಗಳಲ್ಲಿ ರೂ. 27.55ರಿಂದ ರೂ. 650ರ ಮಟ್ಟಕ್ಕೆ ಏರಿದೆ, ಅಂದರೆ ಈ ಅವಧಿಯಲ್ಲಿ ಸುಮಾರು ಶೇ 2260ರಷ್ಟು ಏರಿಕೆಯಾಗಿದೆ. ಈ ಮಲ್ಟಿಬ್ಯಾಗರ್ ಷೇರಿನ ಬೆಲೆಯು ಮಾರ್ಚ್​ ಅಂತ್ಯದ ಹೊತ್ತಿಗೆ ಇದ್ದ ರೂ. 9.10ರಿಂದ ರೂ. 650 ಮಟ್ಟಕ್ಕೆ ಏರಿತು. 2021ರ ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ ಶೇ 7000ದಷ್ಟು ಹೆಚ್ಚಳವಾಗಿದೆ. ಇನ್ನು ಈ ವರ್ಷದ ಶುರುವಿನಿಂದ ಇಲ್ಲಿಯವರೆಗೆ ಈ ಪೆನ್ನಿ ಸ್ಟಾಕ್ ರೂ. 8.26ರಿಂದ ರೂ. 650ಕ್ಕೆ ಏರಿದೆ. ಸುಮಾರು ಶೇ 7750ರಷ್ಟು ಏರಿಕೆಯಾಗಿದೆ.

ಹೂಡಿಕೆಯ ಮೇಲೆ ಪರಿಣಾಮ ಗೋಪಾಲ ಪಾಲಿಪ್ಲಾಸ್ಟ್ ಷೇರಿನ ಬೆಲೆ ಇತಿಹಾಸವನ್ನು ಗಮನಿಸಿದರೆ, ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಆ 1 ಲಕ್ಷ ಇಂದು ರೂ. 88,000 ಆಗಿರುತ್ತಿತ್ತು. ಹೂಡಿಕೆದಾರರು 6 ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದು ಮತ್ತು ಇಲ್ಲಿಯವರೆಗೆ ಹಾಗೇ ಉಳಿಸಿಕೊಂಡಿದ್ದರೆ ಆ 1 ಲಕ್ಷ ಇಂದು 23.6 ಲಕ್ಷ ರೂಪಾಯಿ ಆಗುತ್ತಿತ್ತು. ಅದೇ ರೀತಿ, ಹೂಡಿಕೆದಾರರು ಈ ವರ್ಷದ ಆರಂಭದಲ್ಲಿ 1 ಲಕ್ಷವನ್ನು ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿ, ತಲಾ ರೂ. 8.26ಕ್ಕೆ ಒಂದು ಷೇರಿನಂತೆ ಖರೀದಿಸಿದ್ದರೆ, ಆ 1 ಲಕ್ಷ ಇಂದು 78.50 ಲಕ್ಷ ರೂಪಾಯಿ ತಿರುಗುತ್ತಿತ್ತು. ಇನ್ನು ಹೂಡಿಕೆದಾರರು FY22ರ ಆರಂಭದಲ್ಲಿ, ಅಂದರೆ ಏಪ್ರಿಲ್ 1ರಂದು ಗೋಪಾಲ್ ಪಾಲಿಪ್ಲಾಸ್ಟ್ ಸ್ಟಾಕ್‌ನಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ, ಆಗ ತಲಾ ಷೇರು ರೂ. 9.10ರ ಮಟ್ಟದಲ್ಲಿ ಇದ್ದಾಗ ಷೇರನ್ನು ಖರೀದಿಸಿದ್ದರೆ ಆ 1 ಲಕ್ಷ ರೂಪಾಯಿ ಇಂದು 71 ಲಕ್ಷ ರೂಪಾಯಿ ಆಗುತ್ತಿತ್ತು.

ಇದನ್ನೂ ಓದಿ:20 ವರ್ಷದ ಹಿಂದೆ ರಾಯಲ್ ಎನ್​ಫೀಲ್ಡ್​ ಬೈಕ್ ಬದಲಿಗೆ ಈ ಕಂಪೆನಿ ಷೇರು ಖರೀದಿಸಿದ್ದರೆ ಇವತ್ತಿಗೆ ಎಷ್ಟು ಕೋಟಿ ಗೊತ್ತೆ?

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?