Closing Bell: ಸೆನ್ಸೆಕ್ಸ್ 776 ಪಾಯಿಂಟ್ಸ್, ನಿಫ್ಟಿ 235 ಪಾಯಿಂಟ್ಸ್ ಹೆಚ್ಚಳ; ಅದಾನಿ ಪೋರ್ಟ್ಸ್ 4 ಪರ್ಸೆಂಟ್ಸ್ ಏರಿಕೆ
ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 2, 2021ರ ಗುರುವಾರ ಭರ್ಜರಿ ಏರಿಕೆ ಕಂಡಿದೆ. ಈ ದಿನ ಏರಿಕೆ ಮತ್ತು ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.
ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 2ನೇ ತಾರೀಕಿನ ಗುರುವಾರದಂದು ಭಾರೀ ಏರಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ಮಿಶ್ರ ಪ್ರಭಾವ ಇದ್ದರೂ ಈ ಬೆಳವಣಿಗೆ ಆಗಿದೆ. ಬಿಎಸ್ಇ ಸೆನ್ಸೆಕ್ಸ್ 776.50 ಪಾಯಿಂಟ್ಸ್ ಅಥವಾ ಶೇ 1.35ರಷ್ಟು ಮೇಲೇರಿ 58,461.29 ಪಾಯಿಂಟ್ಸ್ನೊಂದಿಗೆ ದಿನಾಂತ್ಯವನ್ನು ಕಂಡಿದ್ದರೆ, ನಿಫ್ಟಿ 234.80 ಪಾಯಿಂಟ್ಸ್ ಅಥವಾ ಶೇ 1.37ರಷ್ಟು ಹೆಚ್ಚಳದೊಂದಿಗೆ 17,401.70 ಪಾಯಿಂಟ್ಸ್ನೊಂದಿಗೆ ವ್ಯವಹಾರವನ್ನು ಚುಕ್ತಾ ಮಾಡಿದೆ. ಇಂದಿನ ವಹಿವಾಟಿನಲ್ಲಿ “ಬುಲ್ಗಳು” ಮೇಲುಗೈ ಸಾಧಿಸಿದರು. ಮಧ್ಯಾಹ್ನದ ವಹಿವಾಟಿನಲ್ಲಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕವು ಶೇ 1ರಷ್ಟು ಏರಿಕೆ ಕಂಡಿತು. ಸೂಚ್ಯಂಕಗಳ ಏರಿಳಿತ ಇಂದು ಸ್ವಲ್ಪ ಮಟ್ಟಿಗೆ ತಣ್ಣಗಾದಂತೆ ಕಂಡಿತು.
ಎಲ್ಲ ವಲಯಗಳಲ್ಲೂ ನಿರ್ದಿಷ್ಟ ಸ್ಟಾಕ್ಗಳಲ್ಲಿ ಚಟುವಟಿಕೆ ಕಂಡುಬಂತು. ಜಿಡಿಪಿ ಮತ್ತು ಜಿಎಸ್ಟಿ ಡೇಟಾ ಹಾಗೂ ಇಂಧನ ಬೆಲೆಯಲ್ಲಿನ ಇಳಿಕೆ ಇವೆಲ್ಲ ಅಂಶವೂ ಕೊಡುಗೆ ನೀಡಿವೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಷೇರುಗಳ ಸಂಖ್ಯೆಯ ದೃಷ್ಟಿಯಿಂದ ಏರಿಕೆ ಮತ್ತು ಇಳಿಕೆಯನ್ನು ಗಮನಿಸಿದರೆ ಚೇತರಿಕೆ ಕಂಡುಬರುತ್ತಿದೆ. ಬಹುತೇಕ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯ ಕಂಡಿವೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಸೇರ್ಪಡೆ ಮಾಡಿವೆ. ನಿಫ್ಟಿ ಐಟಿ, ಲೋಹ, ಎನರ್ಜಿ ಮತ್ತು ವಾಹನ ಸೂಚ್ಯಂಕಗಳು ಶೇ 1ರಿಂದ 2ರಷ್ಟು ಏರಿಕೆಯನ್ನು ಕಂಡಿವೆ. ಬಿಎಸ್ಇಯಲ್ಲಿ ವಾಹನ, ಎಫ್ಎಂಸಿಜಿ, ಮಾಹಿತಿ ತಂತ್ರಜ್ಞಾನ, ತೈಲ ಮತ್ತು ಅನಿಲ, ವಿದ್ಯುತ್, ರಿಯಾಲ್ಟಿ ಮತ್ತು ಲೋಹದ ಸೂಚ್ಯಂಕಗಳು ಶೇ 2ರ ತನಕ ಏರಿಕೆ ದಾಖಲಿಸಿದೆ.
ವೈಯಕ್ತಿಕ ಸ್ಟಾಕ್ಗಳನ್ನು ನೋಡುವುದಾದರೆ ಜಿಎಂಆರ್ ಇನ್ಫ್ರಾ, ಆರ್ತಿ ಇಂಡಸ್ಟ್ರೀಸ್ ಮತ್ತು ಎಂಸಿಎಕ್ಸ್ ಇಂಡಿಯಾ ಶೇ 200ಕ್ಕೂ ಹೆಚ್ಚು ವಾಲ್ಯೂಮ್ ಜಾಸ್ತಿ ಆಗಿದೆ. ಪವರ್ಗ್ರಿಡ್ ಕಾರ್ಪೊರೇಷನ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಟೊರೊಂಟೊ ಪವರ್ ಸೇರಿದಂತೆ 150ಕ್ಕೂ ಹೆಚ್ಚು ಸ್ಟಾಕ್ಗಳು ಬಿಎಸ್ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಅದಾನಿ ಪೋರ್ಟ್ಸ್ ಶೇ 4.40 ಎಚ್ಡಿಎಫ್ಸಿ ಶೇ 3.85 ಪವರ್ಗ್ರಿಡ್ ಕಾರ್ಪೊರೇಷನ್ ಶೇ 3.52 ಸನ್ ಫಾರ್ಮಾ ಶೇ 2.80 ಟಾಟಾ ಸ್ಟೀಲ್ ಶೇ 2.76
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಸಿಪ್ಲಾ ಶೇ -0.74 ಐಸಿಐಸಿಐ ಬ್ಯಾಂಕ್ ಶೇ -0.73 ಆಕ್ಸಿಸ್ ಬ್ಯಾಂಕ್ ಶೇ -0.52
ಇದನ್ನೂ ಓದಿ: Multibagger: ಈ ಷೇರಿನ ಮೇಲೆ ಹೂಡಿಕೆ ಮಾಡಿದ್ದ 1 ಲಕ್ಷ ರೂಪಾಯಿ 8 ತಿಂಗಳಲ್ಲಿ 71 ಲಕ್ಷ ರೂಪಾಯಿ