Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 1,750 ರೂ ಏರಿಕೆ

Bullion Market 2026 January 19th: ಚಿನ್ನ, ಬೆಳ್ಳಿ ಬೆಲೆಗಳೆರಡೂ ಸೋಮವಾರ ಹೆಚ್ಚಿವೆ. ಚಿನ್ನದ ಬೆಲೆ 175 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 10 ರೂ ದುಬಾರಿಗೊಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 13,180 ರೂನಿಂದ 13,355 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 14,569 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 295 ರೂನಿಂದ 305 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 318 ರೂ ಆಗಿದೆ.

Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 1,750 ರೂ ಏರಿಕೆ
ಚಿನ್ನ

Updated on: Jan 19, 2026 | 11:33 AM

ಬೆಂಗಳೂರು, ಜನವರಿ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸೋಮವಾರ ಭರ್ಜರಿಯಾಗಿ ಏರಿವೆ. ಎರಡೂ ಕೂಡ ಹೊಸ ದಾಖಲೆ ಬರೆದಿವೆ. ಚಿನ್ನದ ಬೆಲೆ ಗ್ರಾಮ್​ಗೆ 175 ರೂ ಏರಿದೆ. 18 ಕ್ಯಾರಟ್ ಚಿನ್ನದ ಬೆಲೆಯಂತೂ (Gold Rates) 11,000 ರೂ ಮೈಲಿಗಲ್ಲು ಸಮೀಪ ಹೋಗಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆಯಲ್ಲಿ ಇಂದು ವ್ಯತ್ಯಯವಾಗಿಲ್ಲ. ಬೆಳ್ಳಿ ಬೆಲೆಯಂತೂ ಚಿನ್ನವನ್ನು ಮೀರಿಸಿ ಜಿಗಿದಿದೆ. ಸೋಮವಾರ ಒಂದು ಗ್ರಾಮ್​ಗೆ ಬರೋಬ್ಬರಿ 10 ರೂ ಏರಿದೆ. ಬೆಂಗಳೂರಿನಲ್ಲಿ ಇದರ ಬೆಲೆ 300 ರೂ ಗಡಿ ದಾಟಿ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,550 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,45,690 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 30,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 30,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 31,800 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 19ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,569 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,355 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,927 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 305 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,569 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,355 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 305 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,355 ರೂ
  • ಚೆನ್ನೈ: 13,450 ರೂ
  • ಮುಂಬೈ: 13,355 ರೂ
  • ದೆಹಲಿ: 13,370 ರೂ
  • ಕೋಲ್ಕತಾ: 13,355 ರೂ
  • ಕೇರಳ: 13,355 ರೂ
  • ಅಹ್ಮದಾಬಾದ್: 13,360 ರೂ
  • ಜೈಪುರ್: 13,370 ರೂ
  • ಲಕ್ನೋ: 13,370 ರೂ
  • ಭುವನೇಶ್ವರ್: 13,355 ರೂ

ಇದನ್ನೂ ಓದಿ: ಬಜೆಟ್​ಗೆ ಮುಂಚೆ ಆರ್ಥಿಕ ಸಮೀಕ್ಷೆ ವರದಿ; ಏನಿದರ ಮಹತ್ವ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 585 ರಿಂಗಿಟ್ (13,102 ರುಪಾಯಿ)
  • ದುಬೈ: 512.75 ಡಿರಾಮ್ (12,678 ರುಪಾಯಿ)
  • ಅಮೆರಿಕ: 143 ಡಾಲರ್ (12,990 ರುಪಾಯಿ)
  • ಸಿಂಗಾಪುರ: 186.80 ಸಿಂಗಾಪುರ್ ಡಾಲರ್ (13,196 ರುಪಾಯಿ)
  • ಕತಾರ್: 510 ಕತಾರಿ ರಿಯಾಲ್ (12,711 ರೂ)
  • ಸೌದಿ ಅರೇಬಿಯಾ: 520 ಸೌದಿ ರಿಯಾಲ್ (12,596 ರುಪಾಯಿ)
  • ಓಮನ್: 54.40 ಒಮಾನಿ ರಿಯಾಲ್ (12,837 ರುಪಾಯಿ)
  • ಕುವೇತ್: 41.78 ಕುವೇತಿ ದಿನಾರ್ (12,408 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 305 ರೂ
  • ಚೆನ್ನೈ: 318 ರೂ
  • ಮುಂಬೈ: 305 ರೂ
  • ದೆಹಲಿ: 305 ರೂ
  • ಕೋಲ್ಕತಾ: 305 ರೂ
  • ಕೇರಳ: 318 ರೂ
  • ಅಹ್ಮದಾಬಾದ್: 305 ರೂ
  • ಜೈಪುರ್: 305 ರೂ
  • ಲಕ್ನೋ: 305 ರೂ
  • ಭುವನೇಶ್ವರ್: 318 ರೂ
  • ಪುಣೆ: 305

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ