
ಬೆಂಗಳೂರು, ಅಕ್ಟೋಬರ್ 28: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ ಮುಂದುವರಿದಿದೆ. ಕಳೆದ ಹತ್ತು ದಿನದಲ್ಲಿ ಈ ಎರಡೂ ಬೆಲೆಗಳು ಸಿಕ್ಕಾಪಟ್ಟೆ ಕುಸಿದಿವೆ. ಆಭರಣ ಚಿನ್ನದ ಬೆಲೆ (gold rate) 12,170 ರೂ ಇದ್ದದ್ದು 11,225 ರೂಗೆ ಇಳಿದಿದೆ. ಹತ್ತು ದಿನದಲ್ಲಿ ಶೇ. 7-8ರಷ್ಟು ಬೆಲೆ ಕುಸಿತವಾಗಿದೆ. ಬೆಳ್ಳಿ ಬೆಲೆಯಂತೂ ಇನ್ನೂ ಭಯಂಕರ ಕುಸಿತ ಕಂಡಿದೆ. ಅತಿರೇಕವಾಗಿ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಅಷ್ಟೇ ಅತಿರೇಕವಾಗಿ ಕುಸಿಯುತ್ತಿದೆ. ಹತ್ತು ದಿನಗಳ ಹಿಂದೆ 190 ರೂಗಳ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಅದರ ಬೆಲೆ ಶೇ. 20ರಷ್ಟು ಕುಸಿದು 151 ರೂ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,12,250 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,22,460 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 15,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,12,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 15,200 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,500 ರೂ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಇದನ್ನೂ ಓದಿ: ದಾಖಲೆ ಇಲ್ಲದೆ ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಲು ಅವಕಾಶ? ಆಭರಣ ಖರೀದಿಸುವ ಮುನ್ನ ಇದು ತಿಳಿದಿರಿ…
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ