Gold Prices: ಮತ್ತೆ ಏರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆ; 100 ಗ್ರಾಮ್ ಸ್ವರ್ಣದ ಬೆಲೆ 5,000 ರೂನಷ್ಟು ಏರಿಕೆ

|

Updated on: Apr 13, 2023 | 5:00 AM

Bullion Market 2023, April 13th: ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,200 ರುಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,310 ರುಪಾಯಿ ಆಗಿದೆ. ಬೆಳ್ಳಿ ಬೆಲೆ ಕೂಡ ತುಸು ಏರಿಕೆ ಕಂಡಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Prices: ಮತ್ತೆ ಏರುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆ; 100 ಗ್ರಾಮ್ ಸ್ವರ್ಣದ ಬೆಲೆ 5,000 ರೂನಷ್ಟು ಏರಿಕೆ
ಚಿನ್ನ
Follow us on

ಬೆಂಗಳೂರು: ಚಿನ್ನ ಮತ್ತು ಬೆಳ್ಳಿಗಳಿಗೆ ಇರುವ ಬೇಡಿಕೆ ಮುಂದುವರಿದಿದೆ. ಈ ಅಮೂಲ್ಯ ಲೋಹಗಳ ಬೆಲೆ ಮತ್ತೆ ಏರುಗತಿ ಪಡೆದಿದೆ. ಭಾರತ ಹಾಗೂ ವಿದೇಶ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Prices) ಹೆಚ್ಚಾಗಿದೆ. ಭಾರತದಲ್ಲಿ 10 ಗ್ರಾಮ್ ಚಿನ್ನದ ಬೆಲೆ 300 ರುಪಾಯಿಯಷ್ಟು ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ 10 ಗ್ರಾಮ್​ಗೆ 7.5 ರೂನಷ್ಟು ಹೆಚ್ಚಳಗೊಂಡಿದೆ. ಮೊನ್ನೆಯಷ್ಟೇ ಚಿನ್ನದ ಬೆಲೆ ತುಸು ಇಳಿದು ಆಭರಣ ಪ್ರಿಯರ ಹುಮ್ಮಸ್ಸು ಹೆಚ್ಚಿಸಿತ್ತು. ಇದೀಗ ಮತ್ತೆ ಏರಿದೆ. ಇತ್ತೀಚಿನ ಕೆಲ ವಾರಗಳ ಹಿಂದೆ ನಾಲ್ಕು ಸಾವಿರ ರೂನಷ್ಟು ಏರಿಕೆ ಕಂಡಿದ್ದ ಚಿನ್ನದ ಬೆಲೆಗೆ ಬೇಡಿಕೆ ಯಾವತ್ತಿದ್ದರೂ ಇರುವಂಥದ್ದೇ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,200 ರುಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,735 ರುಪಾಯಿಗೆ ಏರಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,140 ರುಪಾಯಿಗೆ ಏರಿಕೆ ಕಂಡಿದೆ.

ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರುವ ಸಾಧ್ಯತೆ ಇದೆ.

ವಿದೇಶಗಳ ಚಿನಿವಾರಪೇಟೆಗಳಲ್ಲಿಯೂ (Bullion Market) ಚಿನ್ನದ ಬೆಲೆ ಏರಿಕೆ ಕಂಡಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಕನಿಷ್ಠ 50 ಸಾವಿರ ರೂ ಮಟ್ಟಕ್ಕೆ ಸಮೀಪ ಇವೆ. ಮಲೇಷ್ಯಾ, ಕತಾರ್ ಮತ್ತು ಓಮನ್​ನಲ್ಲಿ ಚಿನ್ನದ ಬೆಲೆ 52 ಸಾವಿರ ರೂಗಿಂತ ಹೆಚ್ಚಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಗೆ ಏನು ಕಾರಣ?

ಅಮೆರಿಕದಲ್ಲಿ ಉದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಗಳು ಬಂದಿವೆ. ಆದರೂ ಕೂಡ ಅಮೆರಿಕದ ಆರ್ಥಿಕತೆಯ ತುಮುಲ, ಹಣದುಬ್ಬರ ಅನಿಶ್ಚಿತತೆ, ಬಡ್ಡಿ ದರ ಬಗ್ಗೆ ಅಸ್ಪಷ್ಟತೆ, ಡಾಲರ್ ದುರ್ಬಲಗೊಂಡಿರುವುದು ಇವೆಲ್ಲವೂ ಹೂಡಿಕೆದಾರರನ್ನು ಚಿನ್ನದತ್ತ ಗಮನ ಹರಿಸುವಂತೆ ಮಾಡಿದೆ.

ಇದನ್ನೂ ಓದಿSSY: ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ 40 ಮೂಲಾಂಕಗಳಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ; ಹೆಣ್ಮಕ್ಕಳ ಈ ಸ್ಕೀಮ್​ನಿಂದ ಎಷ್ಟು ಲಾಭ?

ಭಾರತದಲ್ಲಿರುವ ಬೆಲೆ (ಏಪ್ರಿಲ್ 13ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,200 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,310 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 773.50 ರೂ

ಬೆಂಗಳೂರಿನಲ್ಲಿರುವ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,250 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,360 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 814 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 56,250 ರೂ
  • ಚೆನ್ನೈ: 56,800 ರೂ
  • ಮುಂಬೈ: 56,200 ರೂ
  • ದೆಹಲಿ: 56,350 ರೂ
  • ಕೋಲ್ಕತಾ: 56,200 ರೂ
  • ಕೇರಳ: 56,200 ರೂ
  • ಅಹ್ಮದಾಬಾದ್: 56,250 ರೂ
  • ಜೈಪುರ್: 56,350 ರೂ
  • ಲಕ್ನೋ: 56,350 ರೂ
  • ಭುವನೇಶ್ವರ್: 56,200 ರೂ

ಇದನ್ನೂ ಓದಿನಮ್ಮ ಕರ್ನಾಟಕದ ಸಹಕಾರಿ ಬ್ಯಾಂಕ್‌ಗಳಲ್ಲಿ ಇದೆಂತಹ ಧೋಕಾ? KYC ದಾಖಲೆಗಳೇ ಇಲ್ಲದೆ ಸಾವಿರಾರು ಕೋಟಿ ರೂಪಾಯಿ ಗುಳುಂ! ಇದು ಐಟಿ ಇಲಾಖೆ ವರದಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,830 ರಿಂಗಿಟ್ (52,615 ರುಪಾಯಿ)
  • ದುಬೈ: 2255 ಡಿರಾಮ್ (50,408 ರುಪಾಯಿ)
  • ಅಮೆರಿಕ: 615 ಡಾಲರ್ (50,461 ರುಪಾಯಿ)
  • ಸಿಂಗಾಪುರ: 835 ಸಿಂಗಾಪುರ್ ಡಾಲರ್ (51,507 ರುಪಾಯಿ)
  • ಕತಾರ್: 2,320 ಕತಾರಿ ರಿಯಾಲ್ (52,315 ರೂ)
  • ಓಮನ್: 246.50 ಒಮಾನಿ ರಿಯಾಲ್ (52,547 ರುಪಾಯಿ)
  • ಕುವೇತ್: 192 ಕುವೇತಿ ದಿನಾರ್ (51,440 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,140 ರೂ
  • ಚೆನ್ನೈ: 8,140 ರೂ
  • ಮುಂಬೈ: 7,735 ರೂ
  • ದೆಹಲಿ: 7,735 ರೂ
  • ಕೋಲ್ಕತಾ: 7,735 ರೂ
  • ಕೇರಳ: 8,140 ರೂ
  • ಅಹ್ಮದಾಬಾದ್: 7,735 ರೂ
  • ಜೈಪುರ್: 7,735 ರೂ
  • ಲಕ್ನೋ: 7,735 ರೂ
  • ಭುವನೇಶ್ವರ್: 8,140 ರೂ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ