SSY: ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ 40 ಮೂಲಾಂಕಗಳಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ; ಹೆಣ್ಮಕ್ಕಳ ಈ ಸ್ಕೀಮ್​ನಿಂದ ಎಷ್ಟು ಲಾಭ?

Sukanya Samriddhi Yojana: ಸರ್ಕಾರದ ಬೇರೆ ಉಳಿತಾಯ ಯೋಜನೆಗಳು ಹಾಗೂ ಬ್ಯಾಂಕುಗಳ ನಿಶ್ಚಿತ ಠೇವಣಿ ಯೋಜನೆಗಳಿಗೆ ಹೋಲಿಸಿದರೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸಿಗುವ ಬಡ್ಡಿ ದರ ಇದ್ದುದರಲ್ಲೇ ಉತ್ತಮ ಎನಿಸಿದೆ. ಅಂಚೆ ಕಚೇರಿಯ ಉಳಿತಾಯ ಯೋಜನೆಗಳಿಗಿಂತಲೂ ಹೆಚ್ಚು ಲಾಭಕಾರಿ ಎನಿಸಿದೆ ಎಸ್​ಎಸ್​ವೈ.

SSY: ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ 40 ಮೂಲಾಂಕಗಳಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ; ಹೆಣ್ಮಕ್ಕಳ ಈ ಸ್ಕೀಮ್​ನಿಂದ ಎಷ್ಟು ಲಾಭ?
ಹೆಣ್ಮಕ್ಕಳು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 12, 2023 | 4:00 PM

Sukanya Samriddhi Yojana Interest Rate Hike: ಹೆಣ್ಮಕ್ಕಳ ಭವಿಷ್ಯ ಭದ್ರತೆಗೆಂದು ರೂಪಿಸಲಾಗಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (SSY- Sukanya Samriddhi Yojana) ಇಡಲಾಗುವ ಠೇವಣಿಗಳಿಗೆ ಸರ್ಕಾರ ನೀಡುವ ವಾರ್ಷಿಕ ಬಡ್ಡಿ ದರವನ್ನು 40 ಬೇಸಿಸ್ ಪಾಯಿಂಟ್​ಗಳಷ್ಟು (40 Basis Points) ಹೆಚ್ಚಿಸಲಾಗಿದೆ. ಶೇ. 7.60 ಇದ್ದ ಬಡ್ಡಿ ದರವನ್ನು ಶೇ. 8ಕ್ಕೆ ಏರಿಕೆ ಮಾಡಲಾಗಿದೆ. 2020-21 ಹಣಕಾಸು ವರ್ಷದಲ್ಲಿ ಈ ಯೋಜನೆಯಲ್ಲಿನ ಬಡ್ಡಿ ದರವನ್ನು ಶೇ. 8.4 ರಿಂದ ಶೇ. 7.6ಕ್ಕೆ ಇಳಿಸಲಾಗಿತ್ತು. ಇದೀಗ ಬಡ್ಡಿ ದರ ಮತ್ತೊಮ್ಮೆ 8ರ ಗಡಿ ದಾಟಿದೆ. ಈ ಯೋಜನೆಯಲ್ಲಿ ಸರ್ಕಾರ ಪ್ರತೀ 3 ತಿಂಗಳಿಗೊಮ್ಮೆ ಬಡ್ಡಿ ದರವನ್ನು ಪರಿಷ್ಕರಿಸುತ್ತದೆ. ಬಡ್ಡಿ ದರ ಬದಲಿಸಲೇಬೇಕು ಎಂದಲ್ಲ, ಯಥಾಸ್ಥಿತಿ ಉಳಿಸಿಕೊಳ್ಳಲೂ ಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸಿಗುವ ಶೇ. 8ರಷ್ಟು ಬಡ್ಡಿ ದರ ದೊಡ್ಡ ಮಟ್ಟದ್ದೇನಲ್ಲ. ಆದರೆ, ಬೇರೆ ಬೇರೆ ಕಾರಣಗಳಿಂದಾಗಿ ಈ ಉಳಿತಾಯ ಯೋಜನೆ (Saving Scheme) ಜನರ ಬೇಡಿಕೆ ಪಡೆದಿದೆ.

ಸುಕನ್ಯಾ ಸಮೃದ್ಧಿ ಯೋಜನೆಯಿಂದ ಪ್ರಯೋಜನಗಳೇನು?

ಸರ್ಕಾರದ ಬೇರೆ ಉಳಿತಾಯ ಯೋಜನೆಗಳು ಹಾಗೂ ಬ್ಯಾಂಕುಗಳ ನಿಶ್ಚಿತ ಠೇವಣಿ ಯೋಜನೆಗಳಿಗೆ ಹೋಲಿಸಿದರೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸಿಗುವ ಬಡ್ಡಿ ದರ ಇದ್ದುದರಲ್ಲೇ ಉತ್ತಮ ಎನಿಸಿದೆ. ಅಂಚೆ ಕಚೇರಿಯ ಉಳಿತಾಯ ಯೋಜನೆಗಳಿಗಿಂತಲೂ ಹೆಚ್ಚು ಲಾಭಕಾರಿ ಎನಿಸಿದೆ ಎಸ್​ಎಸ್​ವೈ. ಇದಕ್ಕಿಂತ ಹೆಚ್ಚಾಗಿ ಈ ಯೋಜನೆ ಗಮನ ಸೆಳೆಯುವುದು ಇದರ ತೆರಿಗೆ ಉಳಿತಾಯದ ಮೂಲವಾಗಿ. ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಬೇಕೆಂದಿರುವವರಿಗೆ ಈ ಯೋಜನೆಯಲ್ಲಿನ ಹೂಡಿಕೆ ಹೇಳಿ ಮಾಡಿಸಿದ್ದು.

ಹಾಗೆಯೇ ಹೆಣ್ಮಕ್ಕಳ ಮದುವೆ ವಯಸ್ಸಿಗೆ ಬಂದು ಅವರ ವಿವಾಹ ಹೇಗಪ್ಪಾ ಮಾಡುವುದು ಎಂದು ಚಿಂತಿಸುವ ಬದಲು ಈ ಸ್ಕೀಮ್​ಗೆ ಹೂಡಿಕೆ ಮಾಡಿದರೆ ನಿಶ್ಚಿಂತೆಯಿಂದ ಮಗಳ ಮದುವೆ ಮಾಡಬಹುದು. ಮದುವೆ ಸರಳವಾಗಿ ಮಾಡಿ ಈ ಯೋಜನೆಯ ಬಾಕಿ ಹಣವನ್ನು ಆಕೆಗೆ ಉಡುಗೊರೆ ರೂಪದಲ್ಲಿ ಪೋಷಕರು ಕೊಡಬಹುದು.

ಇದನ್ನೂ ಓದಿGMS: ಚಿನ್ನ ನಗದೀಕರಣ ಯೋಜನೆಯಲ್ಲಿ ನೀವಿಡುವ ಆಭರಣ ಯಾವುದಕ್ಕೆ ಬಳಕೆ ಆಗುತ್ತದೆ? ಚಿನ್ನಕ್ಕೆ ಬಡ್ಡಿ ಕೊಡುವ ಜಿಎಂಎಸ್ ಸ್ಕೀಮ್ ಬಗ್ಗೆ ಎಲ್ಲಾ ಮಾಹಿತಿ

ಏನಿದು ಸುಕನ್ಯಾ ಸಮೃದ್ಧಿ ಯೋಜನೆ? ಎಷ್ಟು ಅವಧಿಯ ಸ್ಕೀಮ್ ಇದು?

ಇದು ಹೆಣ್ಮಕ್ಕಳ ವಿದ್ಯಾಭ್ಯಾಸ, ಮದುವೆ ಇತ್ಯಾದಿ ಖರ್ಚಿಗಾಗಿ ಬಳಕೆ ಮಾಡಬಹುದಾದ ಉಳಿತಾಯ ಯೋಜನೆ. ಕರ್ನಾಟಕದ ಭಾಗ್ಯಲಕ್ಷ್ಮೀ ಯೋಜನೆ ರೀತಿ ಏಕಕಾಲದಲ್ಲಿ ಪ್ರೀಮಿಯಂ ಕಟ್ಟುವ ಸ್ಕೀಮ್ ಇದಲ್ಲ. ಉಳಿತಾಯ ಯೋಜನೆಯಾಗಿರುವ ಇದರಲ್ಲಿ ನಿಯಮಿತವಾಗಿ ಠೇವಣಿ ಇಡಬೇಕಾಗುತ್ತದೆ.

2015ರಲ್ಲಿ ಈ ಸ್ಕೀಮ್ ಆರಂಭವಾಗಿದ್ದು. 10 ವರ್ಷದೊಳಗಿನ ಹೆಣ್ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದು. 21 ವರ್ಷಗಳವರೆಗೂ ಸ್ಕೀಮ್ ಅವಧಿ ಇರುತ್ತದೆ. 15 ವರ್ಷಗಳ ಕಾಲ ಠೇವಣಿ ಇಡುತ್ತಾ ಹೋಗಬಹುದು.

ಇದನ್ನೂ ಓದಿIncome Tax: ಹೊಸ ಅದಾಯ ತೆರಿಗೆ ವ್ಯವಸ್ಥೆಯೋ ಹಳೆಯದ್ದೋ? ಆಯ್ಕೆ ಮಾಡಿಕೊಳ್ಳದಿದ್ದರೆ ಏನಾಗುತ್ತದೆ? ಸಿಬಿಡಿಟಿ ಹೊಸ ನೋಟೀಸ್​ನಲ್ಲಿ ಏನು ಹೇಳಿದೆ?

ಈ ಸ್ಕೀಮ್​ನಲ್ಲಿ ಕನಿಷ್ಠ ಠೇವಣಿ ಮೊತ್ತ ಒಂದು ವರ್ಷದಲ್ಲಿ 250 ರುಪಾಯಿ ಆದರೆ, ಗರಿಷ್ಠ ಮೊತ್ತ 1.5 ಲಕ್ಷ ರೂ ಇದೆ. ಹೆಣ್ಮಗುವಿನ ವಯಸ್ಸು 18 ವರ್ಷ ಆದ ಬಳಿಕ ಆಕೆಗೆ ಉನ್ನತ ವ್ಯಾಸಂಗ ಮಾಡುವುದಿದ್ದರೆ, ಯೋಜನೆಯಲ್ಲಿ ಠೇವಣಿಯಾಗಿ ಇಡಲಾಗಿರುವ ಹಣದಲ್ಲಿ ಶೇ. 50 ಭಾಗವನ್ನು ವಾಪಸ್ ಪಡೆಯಬಹುದು. ಆಕೆ 21 ವರ್ಷ ವಯಸ್ಸು ಪೂರ್ಣವಾದಾಗ ಯೋಜನೆಯ ಎಲ್ಲಾ ಮೊತ್ತವನ್ನೂ ಹಿಂಪಡೆಯಬಹುದು.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪೂರ್ಣಪ್ರಮಾಣದಲ್ಲಿ ಹಣ ತೊಡಗಿಸಿದರೆ ಬರುತ್ತೆ 63 ಲಕ್ಷ ರೂ ರಿಟರ್ನ್ಸ್

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಒಂದು ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೂ ಠೇವಣಿ ಇಡಬಹುದು. ಅದರಂತೆ ತಿಂಗಳಿಗೆ 12,500 ರೂ ಆಗುತ್ತದೆ. ಹೆಣ್ಮಗು ಹುಟ್ಟಿದಾಗಿನಿಂದ ಶುರುವಾಗಿ 15 ವರ್ಷಗಳ ಕಾಲ ನೀವು ಪ್ರತೀ ತಿಂಗಳು 12,500 ರೂ ಕಟ್ಟಿದರೆ ಆ ಹುಡುಗಿ 21 ವರ್ಷವಾದಾಗ ನೀವು ಹಿಂಪಡೆಯುವ ಒಟ್ಟು ಮೊತ್ತ 63,79,634 ರೂ ಆಗುತ್ತದೆ.

ಇದರ ಜೊತೆಗೆ ಟ್ಯಾಕ್ಸ್ ಡಿಡಕ್ಷನ್ ಫೀಚರ್ ಕೂಡ ಇರುವುದರಿಂದ ಪ್ರತೀ ವರ್ಷ ನೀವು ತೆರಿಗೆಯಲ್ಲಿ ನೂರಾರು ರೂ ಅನ್ನು ಉಳಿಸಬಹುದು. ಯೋಜನೆ ಮೆಚ್ಯೂರ್ ಆಗಿ ನಿಮಗೆ ಒಟ್ಟು ಮೊತ್ತ ಕೈಸೇರಿದಾಗಲೂ ಯಾವುದೇ ತೆರಿಗೆ ಬೀಳುವುದಿಲ್ಲ. ಇದರಲ್ಲಿ ನೀಡಲಾಗುವ ಬಡ್ಡಿ ಹಣಕ್ಕೂ ತೆರಿಗೆ ಇರುವುದಿಲ್ಲ.

ಇದನ್ನೂ ಓದಿನಮ್ಮ ಕರ್ನಾಟಕದ ಸಹಕಾರಿ ಬ್ಯಾಂಕ್‌ಗಳಲ್ಲಿ ಇದೆಂತಹ ಧೋಕಾ? KYC ದಾಖಲೆಗಳೇ ಇಲ್ಲದೆ ಸಾವಿರಾರು ಕೋಟಿ ರೂಪಾಯಿ ಗುಳುಂ! ಇದು ಐಟಿ ಇಲಾಖೆ ವರದಿ

ಹೆಣ್ಮಗುವಿನ ವಿದ್ಯಾಭ್ಯಾಸದ ಹೆಸರಿನಲ್ಲಿ ಹಿಂಪಡೆಯುವ ಹಣ ಬೇರೆಯದ್ದಕ್ಕೆ ಉಪಯೋಗಿಸುವಂತಿಲ್ಲ

ಈ ಯೋಜನೆಯಲ್ಲಿ ಹೆಣ್ಮಗುವಿನ ವಯಸ್ಸು 18 ವರ್ಷ ದಾಟಿದಾಗ ಅಥವಾ ಆಕೆ 12ನೇ ತರಗತಿ ಪೂರ್ಣಗೊಳಿಸಿದಾಗ ಶೇ. 50ರಷ್ಟು ಠೇವಣಿ ಹಣವನ್ನು ಹಿಂಪಡೆಯಲು ಪೋಷಕರಿಗೆ ಅವಕಾಶ ಇರುತ್ತದೆ. ಆದರೆ, ಈ ಹಣವನ್ನು ಹುಡುಗಿಯ ವಿದ್ಯಾಭ್ಯಾಸಕ್ಕೆ ಮಾತ್ರ ಬಳಸಬೇಕು. ಕಾಲೇಜಿನ ಶುಲ್ಕ, ಯೂನಿವರ್ಸಿಟಿ ಪ್ರವೇಶ ಪತ್ರ ಇತ್ಯಾದಿ ಯಾವುದಾದರೂ ದಾಖಲೆಯನ್ನು ಒದಗಿಸಬೇಕು.

ಸುಕನ್ಯಾ ಸಮೃದ್ಧಿ ಯೋಜನೆ ಎಲ್ಲೆಲ್ಲಿ ಪಡೆಯಬಹುದು?

ಭಾರತದಲ್ಲಿ ಎಸ್​ಬಿಐ, ಎಚ್​ಡಿಎಫ್​ಸಿ ಇತ್ಯಾದಿ ಯಾವುದೇ ಅಧಿಕೃತ ವಾಣಿಜ್ಯ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಉಳಿತಾಯ ಖಾತೆ ತೆರೆಯಬಹುದು. ಅಂಚೆ ಕಚೇರಿಯಲ್ಲಿ ಖಾತೆ ತೆರೆದರೆ ಕೊನೆಯವರೆಗೂ ಅಲ್ಲಿಯೇ ಖಾತೆ ಮುಂದುವರಿಸಬೇಕೆಂದಿಲ್ಲ. ಬೇಕಾದರೆ ಅಂಚೆ ಕಚೇರಿಯಿಂದ ಬ್ಯಾಂಕಿಗೆ, ಅಥವಾ ಬ್ಯಾಂಕಿಂದ ಅಂಚೆ ಕಚೇರಿಗೆ ಖಾತೆಯನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಅದೂ ಯಾವುದೇ ಶುಲ್ಕ ಇಲ್ಲದೇ.

ಇದನ್ನೂ ಓದಿTravel Insurance: ಪ್ರಯಾಣಕ್ಕೂ ಇನ್ಷೂರೆನ್ಸ್ ಸ್ಕೀಮ್; ಇದರಲ್ಲಿ ಏನೇನು ಕವರ್ ಆಗುತ್ತೆ? ಇಲ್ಲಿದೆ ಡೀಟೇಲ್ಸ್

ಹೆಣ್ಮಗುವಿನ ಹೆಸರಿನಲ್ಲಿ ಪೋಷಕರು ಈ ಯೋಜನೆ ಪಡೆಯಬಹುದು. ಆನ್​ಲೈನ್ ಮೂಲಕ ಪ್ರೀಮಿಯಮ್ ಹಣ ಪಾವತಿಸಬಹುದು. ಡಿಡಿ, ಕ್ಯಾಷ್ ಅಥವಾ ಚೆಕ್ ಮೂಲಕವೂ ಹಣ ಪಾವತಿಸಬಹುದು.

ಆದರೆ, ಹೆಣ್ಮಗುವಿನ ವಯಸ್ಸು 10 ವರ್ಷ ದಾಟುವುದರೊಳಗಾಗಿ ಯೋಜನೆ ಆರಂಭಿಸಬೇಕು. ಹೆಣ್ಮಗುವಿನ ವಯಸ್ಸು 18 ವರ್ಷ ತುಂಬುವವರೆಗೂ ಪೋಷಕರೇ ಈ ಉಳಿತಾಯ ಖಾತೆಯನ್ನು ನಿಭಾಯಿಸುತ್ತಾರೆ. 18 ವರ್ಷ ತುಂಬಿದ ಬಳಿಕ ಹೆಣ್ಮಕ್ಕಳು ಬಯಸಿದರೆ ಈ ಖಾತೆಯನ್ನು ತಾವೇ ನಿರ್ವಹಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ