Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಕರ್ನಾಟಕದ ಸಹಕಾರಿ ಬ್ಯಾಂಕ್‌ಗಳಲ್ಲಿ ಇದೆಂತಹ ಧೋಕಾ? KYC ದಾಖಲೆಗಳೇ ಇಲ್ಲದೆ ಸಾವಿರಾರು ಕೋಟಿ ರೂಪಾಯಿ ಗುಳುಂ! ಇದು ಐಟಿ ಇಲಾಖೆ ವರದಿ

Cooperative banks in Karnataka: ಈ ಬ್ಯಾಂಕ್‌ಗಳು ಅಸ್ತಿತ್ವದಲ್ಲಿಯೇ ಇಲ್ಲದ ಸಂಸ್ಥೆಗಳ ಹೆಸರಿನಲ್ಲಿ ವಿವಿಧ ವ್ಯಾಪಾರ ಸಂಸ್ಥೆಗಳು ನೀಡಿದ ಬೇರರ್ ಚೆಕ್‌ಗಳನ್ನು ವ್ಯಾಪಕವಾಗಿ ಡಿಸ್ಕೌಂಟ್​ ಮಾಡಿಕೊಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಕರ್ನಾಟಕದ ಸಹಕಾರಿ ಬ್ಯಾಂಕ್‌ಗಳಲ್ಲಿ ಇದೆಂತಹ ಧೋಕಾ? KYC ದಾಖಲೆಗಳೇ ಇಲ್ಲದೆ ಸಾವಿರಾರು ಕೋಟಿ ರೂಪಾಯಿ ಗುಳುಂ! ಇದು ಐಟಿ ಇಲಾಖೆ ವರದಿ
ಕರ್ನಾಟಕದ ಸಹಕಾರಿ ಬ್ಯಾಂಕ್‌ಗಳಲ್ಲಿ ಇದೆಂತಹ ಧೋಕಾ?
Follow us
ಸಾಧು ಶ್ರೀನಾಥ್​
|

Updated on:Apr 12, 2023 | 1:04 PM

ನಾವು ನಂಬಿರುವ ಕರ್ನಾಟಕದ ಸಹಕಾರಿ ಬ್ಯಾಂಕ್‌ಗಳಲ್ಲಿ (Karnataka cooperative banks) ಈ ಪಾಟಿ ಧೋಕಾ ನಡೆಯುತ್ತಿದೆಯಾ? ಹೇಳುವವರು ಕೇಳುವವರು ಯಾರೂ ಇಲ್ಲವಾ? ನಮ್ಮದೆ ಹಣವನ್ನು ನೂರು, ಸಾವಿರಗಳ ಲೆಕ್ಕದಲ್ಲಿ ತೆಗೆದುಕೊಳ್ಳಬೆಕೆಂದು ನೂರೆಂಟು ತರಲೆ ತಾಪತ್ರಯಗಳ ಲೆಕ್ಕ ಕೊಡುವ ಸಹಕಾರಿ ಬ್ಯಾಂಕ್‌ಗಳು ಹೀಗೆ ಲೆಕ್ಕ ಜಮಾ ಇಲ್ಲದೆ ಖಾತೆದಾರರ ಹಣಕ್ಕೆ ಕನ್ನ ಹಾಕಬಹುದಾ? ಈ ಪಾಟಿ ಯಾಮಾರಿಸಬಹುದಾ (Fraud)? ವೆಚ್ಚವೇ ಮಾಡದೇ ಸಾವಿರಾರು ಕೋಟಿ ರೂಪಾಯಿ ಗುಳುಂ (bogus expenditure) ಮಾಡಿದ್ದಾರಂತೆ! ಐಟಿ ಇಲಾಖೆಯೇ (Income Tax Department -IT) ನೀಡಿರುವ ಅಧಿಕೃತ ವರದಿ ಇದು. ಈ ಸಹಕಾರಿ ಬ್ಯಾಂಕ್‌ಗಳು ಕಾಲ್ಪನಿಕವಾದ, ಅಸ್ತಿತ್ವದಲ್ಲಿಯೇ ಇಲ್ಲದ ಸಂಸ್ಥೆಗಳ ಹೆಸರಿನಲ್ಲಿ ವಿವಿಧ ವ್ಯಾಪಾರ ಸಂಸ್ಥೆಗಳು ನೀಡಿದ ಬೇರರ್ ಚೆಕ್‌ಗಳನ್ನು ವ್ಯಾಪಕವಾಗಿ ಡಿಸ್ಕೌಂಟ್​ ಮಾಡಿಕೊಟ್ಟಿವೆ, ಇದಕ್ಕೆ ಇಲಾಖೆ ವಶಪಡಿಸಿಕೊಂಡ ದಾಖಲೆಗಳು ಪುರಾವೆ ಒದಗಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯ ತೆರಿಗೆ (ಐಟಿ) ಇಲಾಖೆಯು ಕರ್ನಾಟಕದಲ್ಲಿ ಸಹಕಾರಿ ಬ್ಯಾಂಕ್‌ಗಳ ಮೇಲೆ ಕಳೆದ ತಿಂಗಳು ನಡೆಸಿದ ದಾಳಿಗಳ ವೇಳೆ 1,000 ಕೋಟಿ ರೂಪಾಯಿಗಳ ಬೋಗಸ್ ವೆಚ್ಚದಲ್ಲಿ ತೊಡಗಿರುವುದು ಪತ್ತೆಯಾಗಿದೆ ಎಂದು ಮಂಗಳವಾರ ವರದಿ ಬಿಡುಗಡೆ ಮಾಡಿದೆ. ಐಟಿ ಅಧಿಕಾರಿಗಳು ಶೋಧದ ವೇಳೆ ಲೆಕ್ಕಕ್ಕೆ ಸಿಗದ 3.3 ಕೋಟಿ ರೂಪಾಯಿ ನಗದು ಮತ್ತು 2 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.

ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಂದಿರುವ ಐಟಿ ಇಲಾಖೆ ಅಧಿಕಾರಿಗಳ ಪ್ರಕಾರ, ಮಾರ್ಚ್ 31 ರಂದು ಕರ್ನಾಟಕದ ಕೆಲವು ಸಹಕಾರಿ ಬ್ಯಾಂಕ್‌ಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಬ್ಯಾಂಕ್‌ಗಳು ವಿವಿಧ ಬ್ಯಾಂಕ್‌ಗಳ ಹಣದ ರೂಟಿಂಗ್‌ನಲ್ಲಿ ತೊಡಗಿರುವುದು ಕಂಡುಬಂದಿದೆ. ತಮ್ಮ ಗ್ರಾಹಕರ ವ್ಯಾಪಾರ ಘಟಕಗಳು ತಮ್ಮ ತೆರಿಗೆ ಬಾಧ್ಯತೆಗಳನ್ನು ತಪ್ಪಿಸಿಕೊಳ್ಳುವಲ್ಲಿ ಅವರಿಗೆ ನೆರವಾಗಲು ಹೀಗೆ ಮಾಡಲಾಗಿದೆ. ಒಟ್ಟು 16 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೋಧ ಕಾರ್ಯದ ಸಮಯದಲ್ಲಿ ಭೌತಿಕ ದಾಖಲೆಗಳು ಮತ್ತು ಸಾಫ್ಟ್ ಕಾಪಿ ಡೇಟಾದ ರೂಪದಲ್ಲಿ ಹೆಚ್ಚಿನ ಸಂಖ್ಯೆಯ ದೋಷಾರೋಪಣೆಯ ಪುರಾವೆಗಳು ಕಂಡುಬಂದಿವೆ ಮತ್ತು ಅವುಗಳನ್ನೆಲ್ಲ ವಶಪಡಿಸಿಕೊಳ್ಳಲಾಗಿದೆ. ಈ ಸಹಕಾರಿ ಬ್ಯಾಂಕ್‌ಗಳು ಕಾಲ್ಪನಿಕವಾದ, ಅಸ್ತಿತ್ವದಲ್ಲಿಲ್ಲದ ಸಂಸ್ಥೆಗಳ ಹೆಸರಿನಲ್ಲಿ ವಿವಿಧ ವ್ಯಾಪಾರ ಸಂಸ್ಥೆಗಳು ನೀಡಿದ ಬೇರರ್ ಚೆಕ್‌ಗಳನ್ನು ವ್ಯಾಪಕವಾಗಿ ರಿಯಾಯಿತಿಯಲ್ಲಿ ಕೊಡತೊಡಗಿದ್ದವು ಎಂದು ವಶಪಡಿಸಿಕೊಂಡ ಪುರಾವೆಗಳನ್ನು ಆಧರಿಸಿ, ಬಹಿರಂಗಪಡಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವ್ಯಾಪಾರ ಘಟಕಗಳಲ್ಲಿ ಹೆಚ್ಚಾಗಿ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಸೇರಿವೆ.

ಅಂತಹ ಬೇರರ್ ಚೆಕ್‌ಗಳನ್ನು ರಿಯಾಯಿತಿ ಮಾಡುವಾಗ (discounting bearer cheques) ಯಾವುದೇ KYC ಮಾನದಂಡಗಳನ್ನು ಅನುಸರಿಸಲಾಗಿಲ್ಲ. ರಿಯಾಯಿತಿಯ ನಂತರದ ಮೊತ್ತವನ್ನು ಈ ಬ್ಯಾಂಕ್‌ಗಳಲ್ಲಿ ನಿರ್ವಹಿಸುತ್ತಿರುವ ಕೆಲವು ಸಹಕಾರಿ ಸಂಘಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಕೆಲವು ಸಹಕಾರಿ ಸಂಘಗಳು ತರುವಾಯ ತಮ್ಮ ಖಾತೆಗಳಿಂದ ಹಣವನ್ನು ನಗದು ರೂಪದಲ್ಲಿ ಹಿಂತೆಗೆದುಕೊಂಡವು ಮತ್ತು ಹಣವನ್ನು ವ್ಯಾಪಾರ ಘಟಕಗಳಿಗೆ ಹಿಂದಿರುಗಿಸಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚಿನ ಸಂಖ್ಯೆಯ ಚೆಕ್‌ಗಳ ಇಂತಹ ರಿಯಾಯಿತಿಯ ಉದ್ದೇಶವು ನಗದು ಹಿಂಪಡೆಯುವಿಕೆಯ ನೈಜ ಮೂಲವನ್ನು ಮರೆಮಾಚುವುದು ಮತ್ತು ವ್ಯಾಪಾರ ಘಟಕಗಳಲ್ಲಿ ನಕಲಿ ವೆಚ್ಚಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುವುದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹಕಾರ ಸಂಘಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು ಮತ್ತು ಈ ವಿಧಾನದ ಕಾರ್ಯಾಚರಣೆಯನ್ನು ಬಳಸಿಕೊಂಡು ಈ ವ್ಯಾಪಾರ ಘಟಕಗಳು ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳನ್ನು ತಪ್ಪಿಸುತ್ತಿವೆ. ಇದು ಖಾತೆಯ ಪಾವತಿದಾರರ ಚೆಕ್ ಅನ್ನು ಹೊರತುಪಡಿಸಿ ಅನುಮತಿಸುವ ವ್ಯಾಪಾರ ವೆಚ್ಚವನ್ನು ಮಿತಿಗೊಳಿಸುತ್ತದೆ. ಈ ಫಲಾನುಭವಿ ವ್ಯವಹಾರ ಸಂಸ್ಥೆಗಳು ಈ ರೀತಿ ಬುಕ್ ಮಾಡಿರುವ ಬೋಗಸ್ ವೆಚ್ಚ ಸುಮಾರು 1,000 ಕೋಟಿ ರೂಪಾಯಿ ಆಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: GMS: ಚಿನ್ನ ನಗದೀಕರಣ ಯೋಜನೆಯಲ್ಲಿ ನೀವಿಡುವ ಆಭರಣ ಯಾವುದಕ್ಕೆ ಬಳಕೆ ಆಗುತ್ತದೆ? ಚಿನ್ನಕ್ಕೆ ಬಡ್ಡಿ ಕೊಡುವ ಜಿಎಂಎಸ್ ಸ್ಕೀಮ್ ಬಗ್ಗೆ ಎಲ್ಲಾ ಮಾಹಿತಿ

ಶೋಧದ ಸಮಯದಲ್ಲಿ, ಅಧಿಕಾರಿಗಳು ಈ ಸಹಕಾರಿ ಬ್ಯಾಂಕ್‌ಗಳು ನಗದು ಠೇವಣಿಗಳನ್ನು ಸೂಕ್ತ ಖಾತ್ರಿಯಿಲ್ಲದೆ ಬಳಸಿಕೊಂಡು ಸ್ಥಿರ ಠೇವಣಿ ರಸೀದಿಗಳನ್ನು (ಎಫ್‌ಡಿಆರ್‌ಎಸ್) ತೆರೆಯಲು ಅವಕಾಶ ಮಾಡಿಕೊಟ್ಟವು ಮತ್ತು ತರುವಾಯ ಅದನ್ನು ಮೇಲಾಧಾರವಾಗಿ ಬಳಸಿಕೊಂಡು ಸಾಲಗಳನ್ನು ಮಂಜೂರು ಮಾಡಿದವು. ಶೋಧದ ವೇಳೆ ವಶಪಡಿಸಿಕೊಂಡ ಪುರಾವೆಗಳು ಕೆಲವು ವ್ಯಕ್ತಿಗಳು/ಗ್ರಾಹಕರಿಗೆ 15 ಕೋಟಿ ರೂ.ಗೂ ಅಧಿಕ ಲೆಕ್ಕಕ್ಕೆ ಬಾರದ ನಗದು ಸಾಲವನ್ನು ನೀಡಿರುವುದು ಬೆಳಕಿಗೆ ಬಂದಿದೆ.

ಈ ಸಹಕಾರಿ ಬ್ಯಾಂಕ್‌ಗಳ ನಿರ್ವಹಣೆಯು ತಮ್ಮ ರಿಯಲ್ ಎಸ್ಟೇಟ್ ಮತ್ತು ಇತರ ವ್ಯವಹಾರಗಳ ಮೂಲಕ ಲೆಕ್ಕದ ವ್ಯಾಪ್ತಿಗೆ ಬಾರದ ಹಣ ಗಳಿಸಿರುವುದನ್ನು ಶೋಧ ಕಾರ್ಯದ ಸಂದರ್ಭದಲ್ಲಿ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಈ ಲೆಕ್ಕಕ್ಕೆ ಸಿಗದ ಹಣವನ್ನು ಮತ್ತೆ ಖಾತೆ ಪುಸ್ತಕಕ್ಕೆ ತರಲಾಗಿದೆ. ಬಹು ಹಂತಗಳ ಮೂಲಕ ಈ ಬ್ಯಾಂಕುಗಳು ಇಂತಹ ಕೃತ್ರಿಮ ನಡೆ ನಡೆಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Wed, 12 April 23

ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ