GMS: ಚಿನ್ನ ನಗದೀಕರಣ ಯೋಜನೆಯಲ್ಲಿ ನೀವಿಡುವ ಆಭರಣ ಯಾವುದಕ್ಕೆ ಬಳಕೆ ಆಗುತ್ತದೆ? ಚಿನ್ನಕ್ಕೆ ಬಡ್ಡಿ ಕೊಡುವ ಜಿಎಂಎಸ್ ಸ್ಕೀಮ್ ಬಗ್ಗೆ ಎಲ್ಲಾ ಮಾಹಿತಿ

Gold Monetisation Scheme: ಬಳಕೆಯಾಗದೆ ಅನುಪಯುಕ್ತವಾಗಿ ಬಿದ್ದಿರುವ ಚಿನ್ನ ನಿಮ್ಮಲ್ಲಿದ್ದರೆ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ಅದನ್ನು ಠೇವಣಿ ಇರಿಸಬಹುದು. ಅದರ ಮೌಲ್ಯಕ್ಕೆ ಅನುಗುಣವಾಗಿ ನಿರ್ದಿಷ್ಟ ಬಡ್ಡಿ ಕೂಡ ಸಿಗುತ್ತದೆ.

GMS: ಚಿನ್ನ ನಗದೀಕರಣ ಯೋಜನೆಯಲ್ಲಿ ನೀವಿಡುವ ಆಭರಣ ಯಾವುದಕ್ಕೆ ಬಳಕೆ ಆಗುತ್ತದೆ? ಚಿನ್ನಕ್ಕೆ ಬಡ್ಡಿ ಕೊಡುವ ಜಿಎಂಎಸ್ ಸ್ಕೀಮ್ ಬಗ್ಗೆ ಎಲ್ಲಾ ಮಾಹಿತಿ
ಚಿನ್ನ
Follow us
|

Updated on:Apr 11, 2023 | 6:50 PM

ಬಳಕೆಯಾಗದೇ ಸುಮ್ಮನೆ ಬ್ಯಾಂಕ್ ಲಾಕರ್​ನಲ್ಲೋ, ಬೀರು ಪೆಟ್ಟಿಗೆಯಲ್ಲೋ ಚಿನ್ನ ಕೊಳೆಯುತ್ತಿರುತ್ತದೆ. ಇಂತಹ ಚಿನ್ನವನ್ನು ಲಾಭಕ್ಕೆ ಬಳಸಿಕೊಳ್ಳಲು ನಾಗರಿಕರಿಗೆ ಅವಕಾಶ ತರುವ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ (Gold Monetisation Scheme) ಅನ್ನು ಕೇಂದ್ರ ಸರ್ಕಾರ 2015ರಲ್ಲಿ ಹಿಂದೆ ಜಾರಿಗೆ ತಂದಿದೆ. ಇಂತಹ ಚಿನ್ನವನ್ನು ಠೇವಣಿ ಇರಿಸಿದರೆ ನಿರ್ದಿಷ್ಟ ಬಡ್ಡಿ ಸಿಗುತ್ತದೆ. ಈ ಮೂಲಕ ಬಳಕೆಯಲ್ಲಿಲ್ಲದ ಚಿನ್ನದಿಂದಲೂ ಜನರು ಹಣ ಸಂಪಾದನೆ ಮಾಡಬಹುದು. ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಬರುವ ಮುನ್ನವೂ ಕೆಲ ಗೋಲ್ಡ್ ಸ್ಕೀಮ್​ಗಳಿದ್ದವು. ಇವು ಜನರಿಂದ ಚಿನ್ನವನ್ನು ಸಂಗ್ರಹಿಸುವ ಸ್ಕೀಮ್​ಗಳಾಗಿದ್ದವೇ ಹೊರತು ಬಡ್ಡಿ ಕೊಡುವ ಯೋಜನೆಯಾಗಿರಲಿಲ್ಲ. ಜನರ ಅನುಪಯೋಗಿ ಚಿನ್ನಕ್ಕೆ ಬಡ್ಡಿ ಕೊಡುವ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ನಿರೀಕ್ಷಿತ ರೀತಿಯಲ್ಲಿ ಯಶಸ್ಸು ಕಂಡಿಲ್ಲ ಎಂಬುದು ಗಮನಾರ್ಹ. ಇದಕ್ಕೆ ಕೆಲ ಪ್ರಮುಖ ಕಾರಣವನ್ನು ಉಲ್ಲೇಖಿಸಬಹುದು. ಇದಕ್ಕೆ ಮುನ್ನ ಈ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಏನು ಎಂಬುದು ತಿಳಿದುಕೊಳ್ಳುವುದು ಅಗತ್ಯ.

ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ (ಜಿಎಂಎಸ್) ಎಂದರೇನು? ಬಡ್ಡಿ ಎಷ್ಟು ಸಿಗುತ್ತೆ?

ಗೋಲ್ಡ್ ಮಾನಿಟೈಸೆಶನ್ ಸ್ಕೀಮ್​ನಲ್ಲಿ ಚಿನ್ನವನ್ನು ಠೇವಣಿಯಾಗಿ ಇಡಬಹುದು. ಎಲ್ಲಾ ಬ್ಯಾಂಕುಗಳಲ್ಲೂ ಇದು ಲಭ್ಯ ಇರುತ್ತದೆ. ಕಿರು ಅವಧಿ, ಮಧ್ಯಮ ಅವಧಿ ಮತ್ತು ದೀರ್ಘ ಅವಧಿಯ ಠೇವಣಿ ವೈವಿಧ್ಯತೆ ಇರುತ್ತದೆ. ಮಧ್ಯಮ ಅವಧಿಯ ಠೇವಣಿಯಾದರೆ ಕನಿಷ್ಠ 3 ವರ್ಷ ಲಾಕ್ಇನ್ ಪೀರಿಯಡ್ ಇರುತ್ತದೆ. ಅಂದರೆ ಈ ಮೂರು ವರ್ಷ ಕಾಲ ಗ್ರಾಹಕರು ತಮ್ಮ ಚಿನ್ನವನ್ನು ವಾಪಸ್ ಪಡೆಯುವಂತಿಲ್ಲ. ಈ ಠೇವಣಿಗೆ ಶೇ. 2.25ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಇನ್ನು, ದೀರ್ಘಾವಧಿಯ ಠೇವಣಿಗೆ ಶೇ. 2.50ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿDabba Trading: ‘ಡಬ್ಬಾ’ ಟ್ರೇಡರ್ ಗಾಳಕ್ಕೆ ಸಿಕ್ಕಿಬಿದ್ದೀರಿ ಜೋಕೆ ಎಂದ ಎನ್​ಎಸ್​ಇ; ಹಣ ಗಳಿಸುವುದಿರಲಿ, ಇದ್ದ ಹಣವೂ ಹೋದೀತು; ಯಾರಿದು ಡಬ್ಬಾ ಟ್ರೇಡರ್?

ಠೇವಣಿ ಇಡುವ ಚಿನ್ನದಿಂದ ಸರ್ಕಾರಕ್ಕೆ ಏನು ಉಪಯೋಗ? ಚಿನ್ನ ಹೇಗೆ ಬಳಕೆ ಆಗುತ್ತದೆ?

ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ನೀವು ಉಪಯೋಗಿಸಬಹುದಾದ ಆಭರಣವನ್ನು ಠೇವಣಿಯಾಗಿ ಇಡಲು ಹೋಗಬೇಡಿ. ನೀವು ಇಡುವ ಆಭರಣ ಇತ್ಯಾದಿ ಯಾವುದೇ ಚಿನ್ನದ ಶುದ್ಧತೆಯನ್ನು ಬ್ಯಾಂಕ್ ಪರಿಶೀಲಿಸುತ್ತದೆ. ಆಭರಣ ಆಗಿದ್ದರೆ ಅದನ್ನು ಕರಗಿಸಿ ಚಿನ್ನದ ಗಟ್ಟಿ, ಗೋಲ್ಡ್ ಕಾಯಿನ್ ಆಗಿ ಪರಿವರ್ತಿಸಲಾಗುತ್ತೆ. ಹೀಗಾಗಿ, ನೀವು ಬಳಕೆ, ಸರ ಇತ್ಯಾದಿ ರೂಪದಲ್ಲಿರುವ ಚಿನ್ನವನ್ನು ಜಿಎಂಎಸ್ ಸ್ಕೀಮ್​ನಲ್ಲಿ ಠೇವಣಿ ಇಟ್ಟರೆ, ಸ್ಕೀಮ್ ಅವಧಿ ಬಳಿಕ ನಿಮಗೆ ಅವು ಚಿನ್ನದ ನಾಣ್ಯದ ರೂಪದಲ್ಲಿ ಮರಳಿರುತ್ತವೆ.

ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಯಾಕೆ ಸಫಲವಾಗಿಲ್ಲ?

ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ಜನರು ಠೇವಣಿಯಾಗಿ ಇರಿಸುವ ಆಭರಣವನ್ನು ಕರಗಿಸಿ ಚಿನ್ನದ ಗಟ್ಟಿಯಾಗಿ ಮಾಡುವುದರಿಂದ ಬಹಳ ಜನರು ಈ ಸ್ಕೀಮ್​ನಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಹೆಚ್ಚಿನ ಭಾರತೀಯರು ಚಿನ್ನವನ್ನು ಹೊಂದಿರುವುದು ಒಡವೆಗಳ ರೂಪದಲ್ಲೇ. ಗೋಲ್ಡ್ ಕಾಯಿನ್ ಇತ್ಯಾದಿ ಕಚ್ಛಾ ಚಿನ್ನವನ್ನು ಇಟ್ಟುಕೊಂಡಿರುವವರು ಕಡಿಮೆ. ಹೂಡಿಕೆಯಾಗಿ ಚಿನ್ನವನ್ನು ಖರೀದಿಸುವವರು ಮಾತ್ರ ಗೋಲ್ಡ್ ಬಿಸ್ಕತ್, ಕಾಯಿನ್ ಇತ್ಯಾದಿ ರೂಪದಲ್ಲಿ ಚಿನ್ನವನ್ನು ಇಟ್ಟುಕೊಂಡಿರುತ್ತಾರೆ. ಇಂತಹವರಿಗೆ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ತುಸು ವರ್ಕೌಟ್ ಅಗಬಹುದು.

ಇದನ್ನೂ ಓದಿTravel Insurance: ಪ್ರಯಾಣಕ್ಕೂ ಇನ್ಷೂರೆನ್ಸ್ ಸ್ಕೀಮ್; ಇದರಲ್ಲಿ ಏನೇನು ಕವರ್ ಆಗುತ್ತೆ? ಇಲ್ಲಿದೆ ಡೀಟೇಲ್ಸ್

ಅಲ್ಲದೇ, ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ನೀವು ಠೇವಣಿ ಇರಿಸುವ ಚಿನ್ನದ ಆಧಾರದ ಮೇಲೆ ಸಾಲವನ್ನೂ ಪಡೆಯಬಹುದು. ಇದು ಸೆಕ್ಯೂರ್ಡ್ ಲೋನ್ ಆಗಿರುವುದರಿಂದ ಶೇ. 12ಕ್ಕಿಂತ ಹೆಚ್ಚು ಬಡ್ಡಿ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Tue, 11 April 23

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು