IND vs AUS: ಭಾರತ- ಆಸ್ಟ್ರೇಲಿಯಾ ನಡುವೆ ಏಕದಿನ, ಟಿ20 ಸರಣಿ; ವೇಳಾಪಟ್ಟಿ ಪ್ರಕಟ
Team India's Australia White-Ball Tour: ಭಾರತ ಕ್ರಿಕೆಟ್ ತಂಡವು 2025ರ ಅಕ್ಟೋಬರ್-ನವೆಂಬರ್‌ನಲ್ಲಿ 8 ಪಂದ್ಯಗಳ ವೈಟ್ ಬಾಲ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. 3 ಏಕದಿನ ಮತ್ತು 5 ಟಿ20 ಪಂದ್ಯಗಳು 8 ವಿಭಿನ್ನ ನಗರಗಳಲ್ಲಿ ನಡೆಯಲಿವೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ಮಾತ್ರ ಆಡಲಿದ್ದಾರೆ. ಈ ಪ್ರವಾಸದ ವೇಳಾಪಟ್ಟಿ ಮತ್ತು ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ಲೇಖನದಲ್ಲಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡಿ ಸರಣಿ ಸೋಲಿಗೆ ಪ್ರಮುಖ ಕಾರಣರಾಗಿದ್ದ ಟೀಂ ಇಂಡಿಯಾದ ಲೆಜೆಂಡರಿ ಆಟಗಾರರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಇನ್ನು ಮುಂದೆ ಆಸ್ಟ್ರೇಲಿಯಾ ಪ್ರವಾಸ ಮಾಡುವುದಿಲ್ಲ ಎಂದು ಭಾವಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ವಾಸ್ತವವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಮುಂದಿನ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಟೀಂ ಇಂಡಿಯಾದ ಪ್ರವಾಸವೂ (Team India’s Australia White-Ball Tour) ಸೇರಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಭಾರತ ತಂಡವು 8 ಪಂದ್ಯಗಳ ವೈಟ್ ಬಾಲ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸವು ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದ್ದು, ಇದರಲ್ಲಿ 3 ಏಕದಿನ ಪಂದ್ಯಗಳ ಸರಣಿಯಲ್ಲದೆ, 5 ಟಿ20 ಪಂದ್ಯಗಳ ಸರಣಿಯೂ ನಡೆಯಲಿದೆ.
8 ನಗರಗಳಲ್ಲಿ 8 ಪಂದ್ಯಗಳು
ಭಾರತದ ಆಸ್ಟ್ರೇಲಿಯಾ ಪ್ರವಾಸವು ಅಕ್ಟೋಬರ್ 19 ರಿಂದ ಪ್ರಾರಂಭವಾಗಿ ನವೆಂಬರ್ 8 ರವರೆಗೆ ನಡೆಯಲಿದೆ. ವೈಟ್ ಬಾಲ್ ಸರಣಿಯ ಎಲ್ಲಾ ಎಂಟು ಪಂದ್ಯಗಳು ಆಸ್ಟ್ರೇಲಿಯಾದ 8 ನಗರಗಳಲ್ಲಿ ನಡೆಯಲಿವೆ. ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳು ಪರ್ತ್, ಅಡಿಲೇಡ್ ಮತ್ತು ಸಿಡ್ನಿಯಲ್ಲಿ ನಡೆದರೆ, ಟಿ20 ಸರಣಿಯ ಪಂದ್ಯಗಳು ಕ್ಯಾನ್‌ಬೆರಾ, ಮೆಲ್ಬೋರ್ನ್, ಹೊಬಾರ್ಟ್, ಗೋಲ್ಡ್ ಕೋಸ್ಟ್ ಮತ್ತು ಬ್ರಿಸ್ಬೇನ್‌ನಲ್ಲಿ ನಡೆಯಲಿವೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 3 ಪಂದ್ಯಗಳ ಏಕದಿನ ಸರಣಿಯನ್ನು ಆಡುವುದನ್ನು ನಾವು ಕಾಣಬಹುದಾಗಿದೆ. ಏಕೆಂದರೆ ಟಿ20 ಮಾದರಿಗೆ ಈ ಇಬ್ಬರು ನಿವೃತ್ತಿ ಘೋಷಿಸಿರುವ ಕಾರಣ ಈ ಇಬ್ಬರು ಆಟಗಾರರು ಏಕದಿನ ಸರಣಿಯಲ್ಲಿ ಮಾತ್ರ ಆಡಲಿದ್ದಾರೆ.
ಭಾರತದ ಆಸ್ಟ್ರೇಲಿಯಾ ಪ್ರವಾಸ
ಏಕದಿನ ಸರಣಿ
- ಅಕ್ಟೋಬರ್ 19- ಮೊದಲ ಏಕದಿನ ಪಂದ್ಯ, ಪರ್ತ್ (ಹಗಲು-ರಾತ್ರಿ)
- ಅಕ್ಟೋಬರ್ 23 – 2ನೇ ಏಕದಿನ ಪಂದ್ಯ, ಅಡಿಲೇಡ್ (ಹಗಲು-ರಾತ್ರಿ)
- ಅಕ್ಟೋಬರ್ 25 – 3ನೇ ಏಕದಿನ ಪಂದ್ಯ, ಸಿಡ್ನಿ (ಹಗಲು-ರಾತ್ರಿ)
416 ವಿಕೆಟ್, 13 ಶತಕ ಸಿಡಿಸಿದ್ದ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ನಿಧನ
ಟಿ20 ಸರಣಿ
- ಅಕ್ಟೋಬರ್ 29 – ಮೊದಲ ಟಿ20 ಪಂದ್ಯ, ಕ್ಯಾನ್‌ಬೆರಾ
- ಅಕ್ಟೋಬರ್ 31 – 2ನೇ ಟಿ20 ಪಂದ್ಯ, ಮೆಲ್ಬೋರ್ನ್
- ನವೆಂಬರ್ 2 – 3ನೇ ಟಿ20 ಪಂದ್ಯ, ಹೋಬಾರ್ಟ್
- ನವೆಂಬರ್ 6 – 4ನೇ ಟಿ20 ಪಂದ್ಯ, ಗೋಲ್ಡ್ ಕೋಸ್ಟ್
- ನವೆಂಬರ್ 8 – 5ನೇ ಟಿ20 ಪಂದ್ಯ, ಬ್ರಿಸ್ಬೇನ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Sun, 30 March 25