AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: 3 ಪಂದ್ಯಗಳಲ್ಲಿ 2 ಶತಕ..; ಟೀಂ ಇಂಡಿಯಾಗೆ ಕನ್ನಡಿಗನೇ ಕಂಟಕ

Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಪಂದ್ಯದಲ್ಲಿ ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರು ಭಾರತಕ್ಕೆ ಪ್ರಮುಖ ಸವಾಲಾಗಿದ್ದಾರೆ. ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರನಾಗಿರುವ ರಚಿನ್, ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಈಗಾಗಲೇ ಎರಡು ಶತಕಗಳನ್ನು ಬಾರಿಸಿದ್ದಾರೆ. ಅವರ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್ ಭಾರತ ತಂಡಕ್ಕೆ ದೊಡ್ಡ ಬೆದರಿಕೆಯಾಗಿದೆ. ಫೈನಲ್ ಪಂದ್ಯದಲ್ಲಿ ಅವರ ಪ್ರದರ್ಶನ ನಿರ್ಣಾಯಕವಾಗಲಿದೆ.

IND vs NZ: 3 ಪಂದ್ಯಗಳಲ್ಲಿ 2 ಶತಕ..; ಟೀಂ ಇಂಡಿಯಾಗೆ ಕನ್ನಡಿಗನೇ ಕಂಟಕ
ಭಾರತ Vs ನ್ಯೂಜಿಲೆಂಡ್
Follow us
ಪೃಥ್ವಿಶಂಕರ
|

Updated on: Mar 06, 2025 | 8:28 PM

2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ತಂಡಗಳ ನಡುವೆ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಸತತ ಎರಡನೇ ಐಸಿಸಿ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ. ಆದರೆ ಟೀಂ ಇಂಡಿಯಾಕ್ಕೆ ನ್ಯೂಜಿಲೆಂಡ್ ತಂಡವನ್ನು ಸೋಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರನೊಬ್ಬನಿದ್ದು, ಫೈನಲ್‌ನಲ್ಲಿ ಆತ ಟೀಂ ಇಂಡಿಯಾಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಬಹುದು. ಈ ಆಟಗಾರ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಕಳೆದ ಪಂದ್ಯದಲ್ಲಿ ಗೆಲುವಿನ ಶತಕ ಕೂಡ ಬಾರಿಸಿದ್ದಾನೆ.

ಕನ್ನಡಿಗನೇ ಟೀಂ ಇಂಡಿಯಾಕ್ಕೆ ಕಂಟಕ

ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಅತಿದೊಡ್ಡ ಬೆದರಿಕೆ ನ್ಯೂಜಿಲೆಂಡ್‌ನ ಯುವ ಆಟಗಾರ ರಚಿನ್ ರವೀಂದ್ರ. ರಚಿನ್ ರವೀಂದ್ರ ಮೂಲತಃ ಭಾರತೀಯ. ಅದರಲ್ಲೂ ನಮ್ಮ ಬೆಂಗಳೂರಿನ ಹುಡುಗ. ವಾಸ್ತವವಾಗಿ, ರಚಿನ್ ರವೀಂದ್ರ ನವೆಂಬರ್ 18, 1999 ರಂದು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ನಗರದಲ್ಲಿ ಜನಿಸಿದರು. ಆದರೆ ಅವರ ಪೋಷಕರು ಬೆಂಗಳೂರಿನವರು. ರಚಿನ್ ಜನಿಸುವ ಮೊದಲೇ ಅವರು ನ್ಯೂಜಿಲೆಂಡ್‌ನಲ್ಲಿ ನೆಲೆಸಿದರು. ಅವರ ತಂದೆ ವೃತ್ತಿಯಲ್ಲಿ ಸಾಫ್ಟ್‌ವೇರ್.

ರಚಿನ್ ರವೀಂದ್ರ ಪ್ರಸ್ತುತ ವಿಶ್ವದ ಅತ್ಯಂತ ಉದಯೋನ್ಮುಖ ಆಟಗಾರರಲ್ಲಿ ಒಬ್ಬರು. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಅವರು ಉತ್ತಮ ಲಯದಲ್ಲಿದ್ದಾರೆ. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ತಂಡಕ್ಕೆ ಅಮೋಘ ಕೊಡುಗೆ ನೀಡುತ್ತಿದ್ದಾರೆ. ಇದು ಟೀಂ ಇಂಡಿಯಾಕ್ಕೆ ದೊಡ್ಡ ಒತ್ತಡವಾಗಿದೆ. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ, ರಚಿನ್ ರವೀಂದ್ರ ಇದುವರೆಗೆ 3 ಪಂದ್ಯಗಳನ್ನು ಆಡಿದ್ದು 75.33 ರ ಸರಾಸರಿಯಲ್ಲಿ 226 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕಗಳು ಸೇರಿವೆ. ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿಯೇ ರಚಿನ್ ಬಾಂಗ್ಲಾದೇಶ ವಿರುದ್ಧ ಅದ್ಭುತ ಶತಕ ಬಾರಿಸಿದ್ದರು. ಆ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿಯೂ ಶತಕ ಸಿಡಿಸಿದ್ದರು. ಇದಲ್ಲದೆ ಅವರು ಬೌಲಿಂಗ್​ನಲ್ಲಿಯೂ 2 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ
Image
2017 ರಿಂದ ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರದರ್ಶನ ಹೇಗಿದೆ?
Image
ಚೋಕರ್ಸ್​ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡ ದಕ್ಷಿಣ ಆಫ್ರಿಕಾ
Image
ಬಾಂಗ್ಲಾ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು
Image
ಚಾಂಪಿಯನ್ಸ್ ಟ್ರೋಫಿ ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಶಮಿ

ಇದನ್ನೂ ಓದಿ: IND vs NZ: ಕ್ರಿಸ್ ಗೇಲ್ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಮುರಿಯುವ ತವಕದಲ್ಲಿ ವಿರಾಟ್ ಕೊಹ್ಲಿ

ಭಾರತದ ವಿರುದ್ಧ ಅಂಕಿಅಂಶಗಳು ಹೇಗಿವೆ?

ಟೀಂ ಇಂಡಿಯಾ ವಿರುದ್ಧ ರಚಿನ್ ರವೀಂದ್ರ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಅವರು ಇಲ್ಲಿಯವರೆಗೆ 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ರಚಿನ್ ರವೀಂದ್ರ 31.33 ಸರಾಸರಿಯಲ್ಲಿ 94 ರನ್ ಗಳಿಸಿದ್ದಾರೆ, ಇದರಲ್ಲಿ 1 ಅರ್ಧಶತಕವೂ ಸೇರಿದೆ. ಅಂದರೆ ರಚಿನ್ ರವೀಂದ್ರ ಇದುವರೆಗೆ ಭಾರತದ ವಿರುದ್ಧ ಏಕದಿನ ಪಂದ್ಯದಲ್ಲಿ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ