Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ, ಆಫ್ರಿಕಾ, ಲಂಕಾ ನಡುವೆ ತ್ರಿಕೋನ ಸರಣಿ; 15 ದಿನಗಳಲ್ಲಿ 7 ಪಂದ್ಯಗಳು

Tri-Nation ODI series: ಭಾರತ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಏಪ್ರಿಲ್ 27 ರಿಂದ ತ್ರಿಕೋನ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ 15 ದಿನಗಳಲ್ಲಿ 7 ಪಂದ್ಯಗಳು ನಡೆಯಲಿವೆ. ಈ ಸರಣಿಯು ಮಹಿಳಾ ವಿಶ್ವಕಪ್‌ಗೆ ಮುನ್ನ ತಯಾರಿಯ ಭಾಗವಾಗಿದೆ.

ಭಾರತ, ಆಫ್ರಿಕಾ, ಲಂಕಾ ನಡುವೆ ತ್ರಿಕೋನ ಸರಣಿ; 15 ದಿನಗಳಲ್ಲಿ 7 ಪಂದ್ಯಗಳು
ಭಾರತ ಮಹಿಳಾ ತಂಡ
Follow us
ಪೃಥ್ವಿಶಂಕರ
|

Updated on:Mar 07, 2025 | 2:59 PM

ಒಂದೆಡೆ ಪಾಕಿಸ್ತಾನ ಹಾಗೂ ದುಬೈ ಆತಿಥ್ಯದಲ್ಲಿ 2025 ರ ಚಾಂಪಿಯನ್ಸ್ ಟ್ರೋಫಿ (Champions Trophy 2025) ನಡೆಯುತ್ತಿದ್ದರೆ, ಮತ್ತೊಂದೆಡೆ ಭಾರತದಲ್ಲಿ ಮಹಿಳಾ ಪ್ರೀಮಿಯರ್ ಲೀಗ್‌ (WPL 2025) ನಡೆಯುತ್ತಿದೆ. ಈಗಾಗಲೇ ಈ ಉಭಯ ಟೂರ್ನಿಗಳು ಫೈನಲ್ ಹಂತ ತಲುಪಿವೆ. ಇದಾದ ನಂತರ ವಿಶ್ವದ ಅತಿದೊಡ್ಡ ಟಿ20 ಲೀಗ್ ಐಪಿಎಲ್ ಆರಂಭವಾಗಲಿದೆ. ಇದರ ನಡುವೆಯೇ ಟೀಂ ಇಂಡಿಯಾ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದ್ದು, ಮೂರು ದೇಶಗಳ ನಡುವೆ ತ್ರಿಕೋನ ಸರಣಿ ನಡೆಯಲ್ಲಿದೆ. ಹೌದು, ಶೀಘ್ರದಲ್ಲೇ ಮೂರು ದೇಶಗಳ ನಡುವೆ ಏಕದಿನ ಸರಣಿ ನಡೆಯಲಿದ್ದು, ಭಾರತ ಮಹಿಳಾ ಕ್ರಿಕೆಟ್ ತಂಡ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

15 ದಿನಗಳಲ್ಲಿ 7 ಪಂದ್ಯಗಳು

WPL 2025 ಸೀಸನ್ ಈ ತಿಂಗಳು ಮಾರ್ಚ್ 15 ರಂದು ಕೊನೆಗೊಳ್ಳಲಿದ್ದು, ಇದರ ನಂತರ ಭಾರತ ತಂಡಕ್ಕೆ ಕೆಲವು ದಿನಗಳ ವಿರಾಮ ಸಿಗಲಿದೆ. ಈ ವಿರಾಮದ ನಂತರ, ಭಾರತ ತಂಡವು ಏಪ್ರಿಲ್ ಅಂತ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಮೂರು ರಾಷ್ಟ್ರಗಳ ನಡುವಿನ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಇದೀಗ ಶ್ರೀಲಂಕಾ ಕ್ರಿಕೆಟ್ ಈ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪಂದ್ಯಾವಳಿ ಏಪ್ರಿಲ್ 27 ರಿಂದ ಪ್ರಾರಂಭವಾಗಿ 15 ದಿನಗಳ ಕಾಲ ನಡೆಯಲಿದ್ದು, ಒಟ್ಟು 7 ಪಂದ್ಯಗಳು ನಡೆಯಲಿವೆ.

ಈ ಪಂದ್ಯಾವಳಿಯನ್ನು ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಆಯೋಜಿಸಲಾಗುವುದು. ಫೈನಲ್ ಸೇರಿದಂತೆ ಎಲ್ಲಾ 7 ಪಂದ್ಯಗಳು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ. ಈ ತ್ರಿಕೋನ ಸರಣಿ ಏಪ್ರಿಲ್ 27 ರಂದು ಭಾರತ ಮತ್ತು ಆತಿಥೇಯ ಶ್ರೀಲಂಕಾ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ನಂತರ ಏಪ್ರಿಲ್ 29 ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಒಟ್ಟಾರೆಯಾಗಿ, ಪ್ರತಿ ತಂಡವು ನಾಲ್ಕು ಪಂದ್ಯಗಳನ್ನು ಆಡಲಿದೆ. ಇದರರ್ಥ ಮೂರೂ ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿದ್ದು, ನಂತರ ಮೇ 11 ರಂದು ಫೈನಲ್ ಪಂದ್ಯ ನಡೆಯಲಿದೆ. ಅಂದರೆ ಈ ಸಂಪೂರ್ಣ ಸರಣಿಯು 15 ದಿನಗಳಲ್ಲಿ ಮುಗಿಯುತ್ತದೆ. ಈ ಎಲ್ಲಾ ಪಂದ್ಯಗಳು ಹಗಲು ಪಂದ್ಯಗಳಾಗಿರುತ್ತವೆ ಎಂದು ಶ್ರೀಲಂಕಾ ಕ್ರಿಕೆಟ್ ತಿಳಿಸಿದೆ.

ಇದನ್ನೂ ಓದಿ
Image
ಗುಜರಾತ್ ವಿರುದ್ಧವೂ ಸೋತ ಆರ್​ಸಿಬಿ
Image
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
Image
ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್​ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳುತ್ತಾ?

ಈ ಸರಣಿ ಏಕೆ ಮುಖ್ಯ?

ಈ ವರ್ಷ ಮಹಿಳಾ ಏಕದಿನ ವಿಶ್ವಕಪ್ ಕೂಡ ನಡೆಯಲಿದ್ದು, ಭಾರತ ಈ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. ಹೀಗಾಗಿ ಏಕದಿನ ವಿಶ್ವಕಪ್ ದೃಷ್ಟಿಯಿಂದ ಈ ತ್ರಿಕೋನ ಸರಣಿ ಬಹಳ ಮುಖ್ಯವಾಗಿದೆ. ಆದಾಗ್ಯೂ ಏಕದಿನ ವಿಶ್ವಕಪ್​ನ ಕೆಲವು ಪಂದ್ಯಗಳನ್ನು ಭಾರತದ ಹೊರಗೆ, ಬಹುಶಃ ಶ್ರೀಲಂಕಾದಲ್ಲಿ ನಡೆಸಲಾಗುವುದು. ಏಕೆಂದರೆ ಚಾಂಪಿಯನ್ಸ್ ಟ್ರೋಫಿ ವಿವಾದದ ನಂತರ, ಭಾರತ ಮತ್ತು ಪಾಕಿಸ್ತಾನ ಪರಸ್ಪರರ ದೇಶದಲ್ಲಿ ಆಡಲು ಸ್ಪಷ್ಟವಾಗಿ ನಿರಾಕರಿಸಿವೆ. ಈ ನಿಟ್ಟಿನಲ್ಲಿ, ಭಾರತ ಸೇರಿದಂತೆ ಇತರ ತಂಡಗಳು ಪಾಕಿಸ್ತಾನವನ್ನು ಎದುರಿಸಲು ತಟಸ್ಥ ಸ್ಥಳದಲ್ಲಿ (ಬಹುಶಃ ಶ್ರೀಲಂಕಾ) ಆಡಬೇಕಾಗುತ್ತದೆ.

ಇದನ್ನೂ ಓದಿ: T20 World Cup 2025: ಸತತ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಭಾರತ ವನಿತಾ ಪಡೆ

ಕಳೆದ 3 ತಿಂಗಳಲ್ಲಿ ಭಾರತ ತಂಡ ಸತತ ಎರಡು ಏಕದಿನ ಸರಣಿಗಳನ್ನು ಆಡಿ ಗೆದ್ದಿದೆ. ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 3-0 ಅಂತರದಿಂದ ಸೋಲಿಸಿದ್ದ ಭಾರತ ತಂಡ, ಜನವರಿಯಲ್ಲಿ ಐರ್ಲೆಂಡ್ ವಿರುದ್ಧವೂ ಅದೇ ರೀತಿ ಜಯ ಸಾಧಿಸಿತ್ತು. ಈ ತ್ರಿಕೋನ ಸರಣಿಯ ನಂತರ, ಭಾರತ ತಂಡವು ಜೂನ್-ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 3 ಏಕದಿನ ಪಂದ್ಯಗಳನ್ನು ಮತ್ತು ಟಿ20 ಸರಣಿಯನ್ನು ಸಹ ಆಡಲಾಗುವುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Fri, 7 March 25