Vinod Sehwag Arrested: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹೋದರನ ಬಂಧನ
Vinod Sehwag Arrested: ವೀರೇಂದ್ರ ಸೆಹ್ವಾಗ್ ಅವರ ಸಹೋದರ ವಿನೋದ್ ಸೆಹ್ವಾಗ್ ಅವರನ್ನು 7 ಕೋಟಿ ರೂಪಾಯಿಗಳ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಅವರನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಲಾಗಿತ್ತು. ಬಂಧನದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ವಿಚಾರಣೆ ನಡೆಯಲಿದೆ.

ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag) ಅವರ ಕಿರಿಯ ಸಹೋದರ ವಿನೋದ್ ಸೆಹ್ವಾಗ್ (Vinod Sehwag) ಅವರನ್ನು ಚಂಡೀಗಢ ಪೊಲೀಸರು ಬಂಧಿಸಿದ್ದಾರೆ. ವಾಸ್ತವವಾಗಿ ವಿನೋದ್ ಸೆಹ್ವಾಗ್ ಅವರ ವಿರುದ್ಧ 7 ಕೋಟಿ ರೂ.ಗಳ ಚೆಕ್ ಬೌನ್ಸ್ (Check bounce) ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೆ ವಿಚಾರಣೆಗೆ ವಿನೋದ್ ಸೆಹ್ವಾಗ್ ಹಾಜರಾಗದ ಕಾರಣ ಅವರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ನ್ಯಾಯಾಲಯವು ಘೋಷಿಸಿತ್ತು. ಹೀಗಾಗಿ ಸೆಹ್ವಾಗ್ ಅವರ ಸಹೋದರನನ್ನು ಚಂಡೀಗಢದ ಮಣಿಮಾಜ್ರಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಮೇಲೆ ಹೇಳಿದಂತೆ ವೀರೇಂದ್ರ ಸೆಹ್ವಾಗ್ ಅವರ ಸಹೋದರ ವಿನೋದ್ ಸೆಹ್ವಾಗ್ ವಿರುದ್ಧ ನ್ಯಾಯಾಲಯದಲ್ಲಿ 7 ಕೋಟಿ ರೂ.ಗಳ ಚೆಕ್ ಬೌನ್ಸ್ ಪ್ರಕರಣ ನಡೆಯುತ್ತಿದೆ. ಈ ಪ್ರಕರಣದಲ್ಲಿ ಅವರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. ಆದರೆ ಅವರು ಹಾಜರಾಗದ ಕಾರಣ, ನ್ಯಾಯಾಲಯ ಅವರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಿತು. ನ್ಯಾಯಾಲಯವು ವಿನೋದ್ ಸೆಹ್ವಾಗ್ ಅವರನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಿದ ತಕ್ಷಣ, ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯಕ್ಕೆ ಹಾಜರಾದ ನಂತರ ವಿನೋದ್ ಸೆಹ್ವಾಗ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ವಿನೋದ್ ಸೆಹ್ವಾಗ್ ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಶೀಘ್ರದಲ್ಲೇ ವಿಚಾರಣೆ ನಡೆಯಲಿದೆ.
ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಸಹೋದರ ವಿನೋದ್ ಸೆಹ್ವಾಗ್ ಹರಿಯಾಣದ ರೋಹ್ಟಕ್‌ನಲ್ಲಿರುವ ಬಹದ್ದೂರ್‌ಗಢ ಬಳಿ ತಂಪು ಪಾನೀಯಗಳ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ. ವಿನೋದ್ ಹೊರತಾಗಿ, ಈ ಕಾರ್ಖಾನೆಯಲ್ಲಿ ಸುಧೀರ್ ಮಲ್ಹೋತ್ರಾ ಮತ್ತು ವಿಷ್ಣು ಮಿತ್ತಲ್ ಎಂಬ ಇಬ್ಬರು ವ್ಯಾಪಾರ ಪಾಲುದಾರರಿದ್ದಾರೆ. ಈ ಮೂವರೂ ದೆಹಲಿ ನಿವಾಸಿಗಳಾಗಿದ್ದು, ಹಿಮಾಚಲ ಪ್ರದೇಶದ ಬಡ್ಡಿಯಲ್ಲಿರುವ ನೈನಾ ಪ್ಲಾಸ್ಟಿಕ್ ಕಾರ್ಖಾನೆಯಿಂದ ತಂಪು ಪಾನೀಯಗಳನ್ನು ತುಂಬುವ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸಿತ್ತು.
ಈ ವಸ್ತುವಿನ ಬೆಲೆ ಸುಮಾರು 7 ಕೋಟಿ ರೂ.ಗಳಷ್ಟಿತ್ತು. ಪ್ರತಿಯಾಗಿ, ಜಲ್ಟಾ ಕಂಪನಿಯು ಜೂನ್ 2018 ರಲ್ಲಿ ದೂರುದಾರ ಕಂಪನಿಗೆ ತಲಾ 1 ಕೋಟಿ ರೂ.ಗಳ 7 ಬ್ಯಾಂಕ್ ಚೆಕ್‌ಗಳನ್ನು ನೀಡಿತು. ಆದರೆ ದೂರುದಾರ ಕಂಪನಿಯು ಈ ಚೆಕ್‌ಗಳನ್ನು ಖಾತೆಗೆ ಜಮಾ ಮಾಡಿದಾಗ, ಹಣದ ಕೊರತೆಯಿಂದಾಗಿ ಅವು ಬೌನ್ಸ್ ಆಗಿದ್ದವು. ಆ ಬಳಿಕ ದೂರುದಾರ ಕಂಪನಿಯು ಜಲ್ಟಾ ಕಂಪನಿಗೆ ಚೆಕ್ ಬೌನ್ಸ್ ಆಗಿರುವ ಬಗ್ಗೆ ಮಾಹಿತಿ ನೀಡಿತ್ತು. ಆದರೆ ಎರಡು ತಿಂಗಳ ನಂತರವೂ ಚೆಕ್‌ಗಳು ಕ್ಲಿಯರ್ ಆಗದಿದ್ದಾಗ, ಕಂಪನಿ ಮತ್ತು ನಿರ್ದೇಶಕರ ವಿರುದ್ಧ ಕಾನೂನು ನೋಟಿಸ್ ನೀಡಿ 15 ದಿನಗಳಲ್ಲಿ ಪಾವತಿ ಮಾಡುವಂತೆ ಒತ್ತಾಯಿಸಲಾಯಿತು. ಕಾನೂನು ನೋಟಿಸ್ ನಂತರವೂ ಕಂಪನಿಯು ಪಾವತಿ ಮಾಡದಿದ್ದಾಗ, ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಲಾಗಿತ್ತು.
ಇದನ್ನೂ ಓದಿ: IND vs NZ: ಸಿಕ್ಸ್ ಸಿಡಿಸುವುದರಲ್ಲಿ ಸೆಹ್ವಾಗ್ ದಾಖಲೆ ಮುರಿದ ಟಿಮ್ ಸೌಥಿ
ಸೆಹ್ವಾಗ್ ಸಹೋದರ ಜಾಮೀನು ಪಡೆದಿದ್ದರು
ಈ ಹಿಂದೆ, ಕೆಳ ನ್ಯಾಯಾಲಯವು ವಿನೋದ್ ಸೆಹ್ವಾಗ್ ಸೇರಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಆದರೆ ಇದರ ಹೊರತಾಗಿಯೂ, ಅವರು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಹೀಗಾಗಿ ನ್ಯಾಯಾಲಯ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತು. ಇದಾದ ನಂತರವೂ, ಅವರು ನ್ಯಾಯಾಲಯಕ್ಕೆ ಬರದಿದ್ದಾಗ, ಅವರನ್ನು ಪರಾರಿಯಾಗಿರುವ ಆರೋಪಿ ಎಂದು ಘೋಷಿಸುವ (ಪಿಒ ಪ್ರೊಸೀಡಿಂಗ್) ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಆ ನಂತರ ವಿನೋದ್ ಸೆಹ್ವಾಗ್ ಜುಲೈ 22, 2019 ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆ ಬಳಿಕ ಅವರಿಗೆ 2 ಲಕ್ಷ ರೂ.ಗಳ ಶ್ಯೂರಿಟಿಯ ಮೇಲೆ ನ್ಯಾಯಾಲಯ ಜಾಮೀನು ನೀಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ