ಅಶ್ವಿನ್​ರಂತೆಯೇ ವಿದಾಯದ ಪಂದ್ಯವನ್ನಾಡದ ಭಾರತದ ಸ್ಟಾರ್ ಕ್ರಿಕೆಟಿಗರಿವರು

Indian cricket legends: ಅನುಭವಿ ಸ್ಪಿನ್ನರ್ ಅಶ್ವಿನ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಇದಕ್ಕಿದಂತೆ ವಿದಾಯ ಹೇಳಿದ್ದಾರೆ. ಹೀಗಾಗಿ ಅವರಿಗೆ ವಿದಾಯದ ಪಂದ್ಯವನ್ನಾಡುವ ಅವಕಾಶ ಸಿಕ್ಕಿಲ್ಲ. ಅಶ್ವಿನ್​ರಂತೆಯೇ ತಂಡದ ಹಲವು ಸ್ಟಾರ್ ಆಟಗಾರರು ತಮ್ಮ ಕೊನೆಯ ಪಂದ್ಯವನ್ನು ಆಡದೆ ನಿವೃತ್ತರಾಗಿದ್ದಾರೆ.ಅವರುಗಳ ವಿವರ ಇಲ್ಲಿದೆ.

ಪೃಥ್ವಿಶಂಕರ
|

Updated on: Dec 18, 2024 | 8:34 PM

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ನಡುವೆಯೇ ಟೀಂ ಇಂಡಿಯಾದ ಲೆಜೆಂಡರಿ ಸ್ಪಿನ್ನರ್ ಆರ್​ ಅಶ್ವಿನ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಗಾಬಾ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಅಶ್ವಿನ್ ತಮ್ಮ ಮನದಾಳ ತೆರೆದಿಟ್ಟರು.

1 / 7
ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡದಲ್ಲಿ ಆಯ್ಕೆಯಾಗಿದ್ದ ಅಶ್ವಿನ್​ಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಆದರೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವರಿಗೆ ಆಡುವ ಸಿಕ್ಕಿರಲಿಲ್ಲ. ಆದಾಗ್ಯೂ ಇದಕ್ಕಿದಂತೆ ನಿವೃತ್ತಿಯ ನಿರ್ಧಾರ ಕೈಗೊಂಡ ಅಶ್ವಿನ್​ಗೆ ತಂಡದ ಪರ ವಿದಾಯದ ಪಂದ್ಯವನ್ನಾಡಲು ಸಾಧ್ಯವಾಗಲಿಲ್ಲ. ಈ ರೀತಿ ವಿದಾಯದ ಪಂದ್ಯವನ್ನಾಡದೆ ಅಂತ ವೃತ್ತಿಜೀವನಕ್ಕೆ ವಿದಾಯ ಹೇಳಿದ ಭಾರತದ ಐವರು ಸ್ಟಾರ್ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.

2 / 7
2014ರಲ್ಲಿ ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದರು. ಮಾಜಿ ನಾಯಕ ಎಂಎಸ್ ಧೋನಿ ಕೂಡ 2014 ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಮೂರನೇ ಪಂದ್ಯದ ನಂತರ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಆರು ವರ್ಷಗಳ ನಂತರ ಅಂದರೆ ಆಗಸ್ಟ್ 15 ರಂದು, ಕ್ಯಾಪ್ಟನ್ ಕೂಲ್ ಏಕದಿನ ಮತ್ತು ಟಿ20 ಕ್ರಿಕೆಟ್​ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದರು. ಧೋನಿಗೂ ಅಶ್ವಿನ್‌ನಂತೆ ವಿದಾಯ ಪಂದ್ಯ ಆಡುವ ಅವಕಾಶ ಸಿಗಲಿಲ್ಲ.

3 / 7
2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದ ಯುವರಾಜ್ ಸಿಂಗ್ ಕೂಡ ವಿದಾಯದ ಪಂದ್ಯವನ್ನಾಡುವ ಅವಕಾಶ ಪಡೆಯಲಿಲ್ಲ. ಆದಾಗ್ಯೂ, 2019 ರಲ್ಲಿ ಅವರು ನಿವೃತ್ತಿ ಘೋಷಿಸಿದರು. ತನ್ನ ಕೊನೆಯ ಏಕದಿನ ಪಂದ್ಯವನ್ನು ಆಡುವ ಮೊದಲು, ಯುವಿ ಸುಮಾರು ಎರಡು ವರ್ಷಗಳ ಕಾಲ ಭಾರತ ತಂಡದಲ್ಲಿ ಪುನರಾಗಮನ ಮಾಡಲು ಪ್ರಯತ್ನಿಸಿದರಾದರೂ ಅದರಲ್ಲಿ ಸಫಲರಾಗಲಿಲ್ಲ.

4 / 7
ಪಟ್ಟಿಯಲ್ಲಿ ಮೂರನೇ ಹೆಸರು ರಾಹುಲ್ ದ್ರಾವಿಡ್ ಅವರದ್ದು. ದಿ ವಾಲ್ ಎಂಬ ಹೆಸರಿನೊಂದಿಗೆ ವಿಶ್ವದಲ್ಲೇ ತನ್ನದೇ ಛಾಪು ಮೂಡಿಸಿದ್ದ ದ್ರಾವಿಡ್​ಗೂ ವಿದಾಯ ಪಂದ್ಯ ಆಡುವ ಅವಕಾಶವೂ ಸಿಕ್ಕಿರಲಿಲ್ಲ. 2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಿದ ಬಳಿಕ ರಾಹುಲ್ ದ್ರಾವಿಡ್ ಇದ್ದಕ್ಕಿದ್ದಂತೆ ಪತ್ರಿಕಾಗೋಷ್ಠಿ ನಡೆಸಿ ನಿವೃತ್ತಿ ಘೋಷಿಸಿದ್ದರು.

5 / 7
ಭಾರತದ ಅನುಭವಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಅವರಿಗೂ ವಿದಾಯದ ಪಂದ್ಯ ಆಡುವ ಅವಕಾಶ ಸಿಗಲಿಲ್ಲ. ಈ ಅನುಭವಿ ಆಟಗಾರ 18 ಆಗಸ್ಟ್ 2018 ರಂದು ಹೈದರಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದರು.

6 / 7
ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ವಿದಾಯ ಪಂದ್ಯ ಆಡುವ ಅವಕಾಶ ಪಡೆದಿರಲಿಲ್ಲ. ವಿದಾಯ ಪಂದ್ಯವನ್ನು ಆಡಲು ಬಯಸುತ್ತೇನೆ ಎಂದು ಸೆಹ್ವಾಗ್ ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರಾದರೂ ಅವರಿಗೆ ವಿದಾಯದ ಪಂದ್ಯವನ್ನು ಆಡುವ ಅವಕಾಶವನ್ನು ಮಂಡಳಿ ನೀಡಲಿಲ್ಲ. ಅಂತಿಮವಾಗಿ ಸೆಹ್ವಾಗ್ 20 ಅಕ್ಟೋಬರ್ 2015 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.

7 / 7
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ