AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price on 01 August: ಚಿನ್ನ ತುಸು ಅಗ್ಗ; ಬೆಳ್ಳಿ ಬೆಲೆಯಲ್ಲಿ ವ್ಯತ್ಯಯ ಇಲ್ಲ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ಬೆಲೆ ವಿವರ

Bullion Market 2023, August 1st: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,280 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 77 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 01 August: ಚಿನ್ನ ತುಸು ಅಗ್ಗ; ಬೆಳ್ಳಿ ಬೆಲೆಯಲ್ಲಿ ವ್ಯತ್ಯಯ ಇಲ್ಲ; ಇಲ್ಲಿದೆ ಇವತ್ತಿನ ಚಿನ್ನ, ಬೆಳ್ಳಿ ಬೆಲೆ ವಿವರ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 01, 2023 | 5:00 AM

Share

ಬೆಂಗಳೂರು, ಆಗಸ್ಟ್ 1: ಚಿನ್ನದ ಬೆಲೆ (Gold Rates) ಎಲ್ಲೆಡೆ ತುಸು ಇಳಿಕೆಯಾಗಿದೆ. ವರದಿಗಳ ಪ್ರಕಾರ, ಈ ಇಳಿಕೆ ಅಪರೂಪವೆಂದು ಪರಿಗಣಿಸಬಹುದು. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಏರುವ ಸಾಧ್ಯತೆ ಇದೆ. ಚಿನ್ನದ ಬೆಲೆ ಏರಿದರೂ ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಅಮೆರಿಕದಲ್ಲಿ ಅಲ್ಲಿನ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರ ಮತ್ತೆ ಏರಿಸುವ ಸಾಧ್ಯತೆ ತೋರದೇ ಇರುವುದರಿಂದ ಚಿನ್ನಕ್ಕೆ ಬೇಡಿಕೆ ಕುದುರಬಹುದು. ಒಂದು ವೇಳೆ ಅಲ್ಲಿ ಬಡ್ಡಿ ದರ ಏರಿಸಿದರೆ ಹೂಡಿಕೆದಾರರು ಚಿನ್ನದಿಂದ ದೂರ ಉಳಿಯಬಹುದು. ಆಗ ಚಿನ್ನದ ಬೆಲೆ ಇಳಿಯುತ್ತದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,550 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 1ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,250 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,280 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 770 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,250 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,280 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 755 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 55,250 ರೂ
  • ಚೆನ್ನೈ: 55,500 ರೂ
  • ಮುಂಬೈ: 55,250 ರೂ
  • ದೆಹಲಿ: 55,400 ರೂ
  • ಕೋಲ್ಕತಾ: 55,250 ರೂ
  • ಕೇರಳ: 55,250 ರೂ
  • ಅಹ್ಮದಾಬಾದ್: 55,300 ರೂ
  • ಜೈಪುರ್: 55,400 ರೂ
  • ಲಕ್ನೋ: 55,400 ರೂ
  • ಭುವನೇಶ್ವರ್: 55,250 ರೂ

ಇದನ್ನೂ ಓದಿ: ತರಕಾರಿ, ಹಾಲು ಇತ್ಯಾದಿ ದುಬಾರಿ; ಆಗಸ್ಟ್​ನಿಂದ ಬೆಲೆ ಹೆಚ್ಚಳ ಕಾಣುವ ವಸ್ತುಗಳ ಪಟ್ಟಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,850 ರಿಂಗಿಟ್ (52,002 ರುಪಾಯಿ)
  • ದುಬೈ: 2192.50 ಡಿರಾಮ್ (49,122 ರುಪಾಯಿ)
  • ಅಮೆರಿಕ: 600 ಡಾಲರ್ (49,361 ರುಪಾಯಿ)
  • ಸಿಂಗಾಪುರ: 811 ಸಿಂಗಾಪುರ್ ಡಾಲರ್ (50,190 ರುಪಾಯಿ)
  • ಕತಾರ್: 2,260 ಕತಾರಿ ರಿಯಾಲ್ (51,059 ರೂ)
  • ಓಮನ್: 239 ಒಮಾನಿ ರಿಯಾಲ್ (51,404 ರುಪಾಯಿ)
  • ಕುವೇತ್: 188 ಕುವೇತಿ ದಿನಾರ್ (50,600 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,550 ರೂ
  • ಚೆನ್ನೈ: 8,000 ರೂ
  • ಮುಂಬೈ: 7,700 ರೂ
  • ದೆಹಲಿ: 7,700 ರೂ
  • ಕೋಲ್ಕತಾ: 7,700 ರೂ
  • ಕೇರಳ: 8,000 ರೂ
  • ಅಹ್ಮದಾಬಾದ್: 7,700 ರೂ
  • ಜೈಪುರ್: 7,700 ರೂ
  • ಲಕ್ನೋ: 7,700 ರೂ
  • ಭುವನೇಶ್ವರ್: 8,000 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?