Gold Silver Price on 03 August: ಕಡಿಮೆಗೊಂಡ ಚಿನ್ನದ ಬೆಲೆಗೆ ಈಗ ಮತ್ತೆ ಡಿಮ್ಯಾಂಡ್; ಇಲ್ಲಿದೆ ಇವತ್ತಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ

Bullion Market 2023, August 3rd: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,110 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 77.30 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price on 03 August: ಕಡಿಮೆಗೊಂಡ ಚಿನ್ನದ ಬೆಲೆಗೆ ಈಗ ಮತ್ತೆ ಡಿಮ್ಯಾಂಡ್; ಇಲ್ಲಿದೆ ಇವತ್ತಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ
ಚಿನ್ನ

Updated on: Aug 03, 2023 | 5:05 AM

ಬೆಂಗಳೂರು, ಆಗಸ್ಟ್ 3: ಸತತವಾಗಿ ಏರಿಕೆಯಾಗುವ ಸುಳಿವು ನೀಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ (Gold Rates) ಇಳಿಕೆಯಾಗಿ ಅಚ್ಚರಿ ಹುಟ್ಟಿಸಿದೆ. ಆದರೆ, ಅಮೆರಿಕದ ಆರ್ಥಿಕತೆ ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿ ಬೆಳೆಯುವ ಸಾಧ್ಯತೆ ಇದೆ ಎಂದು ಫಿಚ್ ರೇಟಿಂಗ್ಸ್ ಅಂದಾಜು ಮಾಡಿದ ಬೆನ್ನಲ್ಲೇ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗುತ್ತಿದೆ. ಪರಿಣಾಮವಾಗ ಇಂದು ಚಿನ್ನಕ್ಕೆ ಭರ್ಜರಿ ಬೇಡಿಕೆ ಸೃಷ್ಟಿಯಾಗಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 60,110 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,730 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 55,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,650 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 3ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,110 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 773 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,110 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 55,100 ರೂ
  • ಚೆನ್ನೈ: 55,500 ರೂ
  • ಮುಂಬೈ: 55,100 ರೂ
  • ದೆಹಲಿ: 55,250 ರೂ
  • ಕೋಲ್ಕತಾ: 55,100 ರೂ
  • ಕೇರಳ: 55,100 ರೂ
  • ಅಹ್ಮದಾಬಾದ್: 55,150 ರೂ
  • ಜೈಪುರ್: 55,250 ರೂ
  • ಲಕ್ನೋ: 55,250 ರೂ
  • ಭುವನೇಶ್ವರ್: 55,100 ರೂ

ಇದನ್ನೂ ಓದಿ: DA Hike: ಸರ್ಕಾರಿ ನೌಕರರಿಗೆ ಮತ್ತೆ ಗುಡ್ ನ್ಯೂಸ್; ಈ ಬಾರಿಯೂ ಶೇ. 4 ಡಿಎ ಹೆಚ್ಚಳ ಸಾಧ್ಯತೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,830 ರಿಂಗಿಟ್ (51,440 ರುಪಾಯಿ)
  • ದುಬೈ: 2185 ಡಿರಾಮ್ (49,133 ರುಪಾಯಿ)
  • ಅಮೆರಿಕ: 595 ಡಾಲರ್ (49,138 ರುಪಾಯಿ)
  • ಸಿಂಗಾಪುರ: 810 ಸಿಂಗಾಪುರ್ ಡಾಲರ್ (49,997 ರುಪಾಯಿ)
  • ಕತಾರ್: 2,250 ಕತಾರಿ ರಿಯಾಲ್ (51,033 ರೂ)
  • ಓಮನ್: 238 ಒಮಾನಿ ರಿಯಾಲ್ (50,993 ರುಪಾಯಿ)
  • ಕುವೇತ್: 187 ಕುವೇತಿ ದಿನಾರ್ (50,130 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,650 ರೂ
  • ಚೆನ್ನೈ: 8,030 ರೂ
  • ಮುಂಬೈ: 7,730 ರೂ
  • ದೆಹಲಿ: 7,730 ರೂ
  • ಕೋಲ್ಕತಾ: 7,730 ರೂ
  • ಕೇರಳ: 8,030 ರೂ
  • ಅಹ್ಮದಾಬಾದ್: 7,730 ರೂ
  • ಜೈಪುರ್: 7,730 ರೂ
  • ಲಕ್ನೋ: 7,730 ರೂ
  • ಭುವನೇಶ್ವರ್: 8,030 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us