Gold Silver Price on 6th December: ಚಿನ್ನ, ಬೆಳ್ಳಿ ಎರಡೂ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ

Bullion Market 2024 December 6th: ಚಿನ್ನದ ಬೆಲೆ ಕಳೆದ ನಾಲ್ಕು ದಿನದಲ್ಲಿ 50ರಿಂದ 55 ರೂನಷ್ಟು ಏರಿಕೆ ಆಗಿದೆ. ಇಂದು ಒಂದು ರೂನಷ್ಟು ಹೆಚ್ಚಳ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 7,790ರೂಗೆ ಏರಿದೆ. ಆಭರಣ ಚಿನ್ನದ ಬೆಲೆ 7,141 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ 92 ರೂ ಗಡಿ ದಾಟಿದೆ. ಚೆನ್ನೈ ಇತ್ಯಾದಿ ಕಡೆ ಅದು 101 ರೂ ದಾಟಿದೆ.

Gold Silver Price on 6th December: ಚಿನ್ನ, ಬೆಳ್ಳಿ ಎರಡೂ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Dec 06, 2024 | 9:43 AM

ಬೆಂಗಳೂರು, ಡಿಸೆಂಬರ್ 6: ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ ಮುಂದುವರಿದಿದೆ. ನಿನ್ನೆ ಗುರುವಾರ 10 ರೂ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಒಂದು ರೂ ಅಲ್ಪ ಹೆಚ್ಚಳ ಕಂಡಿದೆ. ಈ ವಾರ ಈ ಹಳದಿ ಲೋಹದ ಬೆಲೆ ಸತತವಾಗಿ ಏರುತ್ತಿರುವುದು ಇಂದೂ ಮುಂದುವರಿದಿದೆ. ಬೆಳ್ಳಿ ಬೆಲೆಯೂ ಇದೇ ರೀತಿ ಏರಿಕೆ ಕಾಣುತ್ತಿದೆ. ಇಂದು 10 ಪೈಸೆಯಷ್ಟು ಬೆಳ್ಳಿ ಬೆಲೆ ದುಬಾರಿಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 71,410 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 77,900 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,210 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 71,410 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,210 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಡಿಸೆಂಬರ್ 6ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,410 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,900 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,640 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 92.10 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,410 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 77,900 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 92.10 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 71,410 ರೂ
  • ಚೆನ್ನೈ: 71,410 ರೂ
  • ಮುಂಬೈ: 71,410 ರೂ
  • ದೆಹಲಿ: 71,560 ರೂ
  • ಕೋಲ್ಕತಾ: 71,410 ರೂ
  • ಕೇರಳ: 71,410 ರೂ
  • ಅಹ್ಮದಾಬಾದ್: 71,460 ರೂ
  • ಜೈಪುರ್: 71,560 ರೂ
  • ಲಕ್ನೋ: 71,560 ರೂ
  • ಭುವನೇಶ್ವರ್: 71,410 ರೂ

ಇದನ್ನೂ ಓದಿ: Petrol Diesel Price on December 06: 72 ಡಾಲರ್​ ದಾಟಿದ ಕಚ್ಚಾತೈಲ ಬೆಲೆ, ದೇಶದಲ್ಲಿ ಇಂಧನ ದರ ಎಷ್ಟಿದೆ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (69,500 ರುಪಾಯಿ)
  • ದುಬೈ: 2,970 ಡಿರಾಮ್ (68,470 ರುಪಾಯಿ)
  • ಅಮೆರಿಕ: 780 ಡಾಲರ್ (66,050 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,670 ರುಪಾಯಿ)
  • ಕತಾರ್: 3,000 ಕತಾರಿ ರಿಯಾಲ್ (69,690 ರೂ)
  • ಸೌದಿ ಅರೇಬಿಯಾ: 3,020 ಸೌದಿ ರಿಯಾಲ್ (68,080 ರುಪಾಯಿ)
  • ಓಮನ್: 316 ಒಮಾನಿ ರಿಯಾಲ್ (69,500 ರುಪಾಯಿ)
  • ಕುವೇತ್: 241 ಕುವೇತಿ ದಿನಾರ್ (66,400 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,210 ರೂ
  • ಚೆನ್ನೈ: 10,110 ರೂ
  • ಮುಂಬೈ: 9,210 ರೂ
  • ದೆಹಲಿ: 9,210 ರೂ
  • ಕೋಲ್ಕತಾ: 9,210 ರೂ
  • ಕೇರಳ: 10,110 ರೂ
  • ಅಹ್ಮದಾಬಾದ್: 9,210 ರೂ
  • ಜೈಪುರ್: 9,210 ರೂ
  • ಲಕ್ನೋ: 9,210 ರೂ
  • ಭುವನೇಶ್ವರ್: 10,110 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 9:42 am, Fri, 6 December 24