AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಆರ್​ಆರ್ 50 ಮೂಲಾಂಕಗಳಷ್ಟು ಇಳಿಕೆ; ಶೇ. 4ಕ್ಕೆ ಇಳಿದ ಕ್ಯಾಷ್ ರಿಸರ್ವ್ ರೇಶಿಯೋ; ಆರ್ಥಿಕತೆಗೆ ಪುಷ್ಟಿ ಸಿಗುವ ನಿರೀಕ್ಷೆ

Cash Reserve Ratio cut down to 4pc: ಕ್ಯಾಷ್ ರಿಸರ್ವ್ ರೇಶಿಯೋವನ್ನು ಆರ್​ಬಿಐ ಶೇ. 4.5ರಿಂದ ಶೇ. 4ಕ್ಕೆ ಇಳಿಸಿದೆ. ಆರ್​ಬಿಐ ಎಂಪಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಸಿಆರ್​ಆರ್ ಎಂದರೆ ಒಂದು ಬ್ಯಾಂಕ್ ತನ್ನ ಗ್ರಾಹಕರ ಒಟ್ಟು ಠೇವಣಿಯಲ್ಲಿ ನಿರ್ದಿಷ್ಟ ಮೊತ್ತವನ್ನು ರಿಸರ್ವ್ ಆಗಿ ಪ್ರತ್ಯೇಕವಾಗಿ ಎತ್ತಿಡಬೇಕು. ಈಗ ಸಿಆರ್​ಆರ್ ಪ್ರಮಾಣವನ್ನು 50 ಮೂಲಾಂಕಗಳಷ್ಟು ಇಳಿಸಿರುವುದರಿಂದ ಹಣಕಾಸು ಹರಿವು 1.16 ಲಕ್ಷ ಕೋಟಿ ರೂನಷ್ಟು ಹೆಚ್ಚಲಿದೆ.

ಸಿಆರ್​ಆರ್ 50 ಮೂಲಾಂಕಗಳಷ್ಟು ಇಳಿಕೆ; ಶೇ. 4ಕ್ಕೆ ಇಳಿದ ಕ್ಯಾಷ್ ರಿಸರ್ವ್ ರೇಶಿಯೋ; ಆರ್ಥಿಕತೆಗೆ ಪುಷ್ಟಿ ಸಿಗುವ ನಿರೀಕ್ಷೆ
ಕ್ಯಾಷ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 06, 2024 | 11:04 AM

Share

ನವದೆಹಲಿ, ಡಿಸೆಂಬರ್ 6: ಆರ್​ಬಿಐನ ಹಣಕಾಸು ನೀತಿ ಸಮಿತಿಯು ರಿಪೋ ದರವನ್ನು ಇಳಿಸದೇ ಹೋದರೂ ನಿರೀಕ್ಷೆಯಂತೆ ಸಿಆರ್​ಆರ್ ಅಥವಾ ಕ್ಯಾಷ್ ರಿಸರ್ವ್ ರೇಶಿಯೋವನ್ನು 50 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಶೇ. 4.5ರಷ್ಟಿದ್ದ ಸಿಆರ್​ಆರ್ ಅನ್ನು ಶೇ. 4ಕ್ಕೆ ಇಳಿಸಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು ಶುಕ್ರವಾರ ಈ ನಿರ್ಧಾರ ಪ್ರಕಟಿಸಿದರು. ಸಿಆರ್​ಆರ್ ಅನ್ನು 50 ಬೇಸಿಸ್ ಪಾಯಿಂಟ್​ಗಳಷ್ಟು ಇಳಿಕೆ ಮಾಡಿದ್ದರಿಂದ ಹಣಕಾಸು ಮಾರುಕಟ್ಟೆಗೆ 1.16 ಲಕ್ಷ ಕೋಟಿ ರೂ ಹಣದ ಹರಿವು ಹೆಚ್ಚಲಿದೆ ಎಂದು ಆರ್​ಬಿಐ ಗವರ್ನರ್ ಈ ಸಂದರ್ಭದಲ್ಲಿ ಹೇಳಿದರು.

ಸಿಆರ್​ಆರ್ ಎಂದರೇನು?

ಸಿಆರ್​ಆರ್ ಎಂದರೆ ಕ್ಯಾಷ್ ರಿಸರ್ವ್ ರೇಶಿಯೋ. ಅಂದರೆ, ಮೀಸಲು ಹಣ ಪ್ರಮಾಣ. ಒಂದು ಬ್ಯಾಂಕ್ ತನ್ನ ಗ್ರಾಹಕರು ಇಡುವ ಒಟ್ಟು ಠೇವಣಿಗಳಲ್ಲಿ ನಿರ್ದಿಷ್ಟ ಭಾಗದ ಹಣವನ್ನು ಮೀಸಲು ನಿಧಿಯಾಗಿ ಇಟ್ಟುಕೊಳ್ಳಬೇಕು. ಈ ಹಣವನ್ನು ಬ್ಯಾಂಕ್​ನ ಸಂಗ್ರಹದಲ್ಲಿ ಇಡಬಹುದು ಅಥವಾ ರಿಸರ್ವ್ ಬ್ಯಾಂಕ್​ನಲ್ಲಿ ಇರಿಸಬಹುದು. ಠೇವಣಿದಾರರಿಗೆ ತುರ್ತಾಗಿ ಹಣ ಮರಳಿಸುವ ಸ್ಥಿತಿ ಬಂದಾಗ ಬ್ಯಾಂಕು ಈ ನಿಧಿಯನ್ನು ಬಳಸಿಕೊಳ್ಳಬಹುದು. ಗ್ರಾಹಕರ ಹಿತದೃಷ್ಟಿಯಿಂದ ಆರ್​ಬಿಐ ಸಿಆರ್​ಆರ್ ನಿಯಮವನ್ನು ರೂಪಿಸಿದೆ.

ಇದನ್ನೂ ಓದಿ: RBI MPC Updates: ರಿಪೋ ದರ ಇಳಿಸದ ಆರ್​ಬಿಐ; ಶೇ. 6.50ರಲ್ಲೇ ಬಡ್ಡಿದರ ಮುಂದುವರಿಕೆ

ಉದಾಹರಣೆಗೆ, ಬ್ಯಾಂಕ್​ನ ಗ್ರಾಹಕರು ಇಟ್ಟಿರುವ ಒಟ್ಟು ಠೇವಣಿ 10 ಲಕ್ಷ ಕೋಟಿ ರೂ ಎಂದಿದೆ ಎಂದು ಭಾವಿಸೋಣ. ಈಗ ಸಿಆರ್​​ಆರ್ ದರ ಶೇ. 4ಕ್ಕೆ ನಿಗದಿ ಮಾಡಲಾಗಿದೆ. ಈ ನಿಯಮದ ಪ್ರಕಾರ ಬ್ಯಾಂಕು 40,000 ಕೋಟಿ ರೂ ಹಣವನ್ನು ರಿಸರ್ವ್ ಆಗಿ ಎತ್ತಿ ಇಡಬೇಕಾಗುತ್ತದೆ.

ಈ ಮೊದಲಿನ ಸಿಆರ್​ಆರ್ ದರವನ್ನು ಇದೇ ನಿದರ್ಶನದಲ್ಲಿ ಪರಿಗಣಿಸಿದಲ್ಲಿ ಬ್ಯಾಂಕು 45,000 ಕೋಟಿ ರೂ ಎತ್ತಿಡಬೇಕಿತ್ತು. ಈಗ ಅದು 40,000 ಕೋಟಿ ರೂಗೆ ಇಳಿದಿದೆ. ಈ ಬ್ಯಾಂಕಿಗೆ 5,000 ಕೋಟಿ ರೂ ಹಣವನ್ನು ಸಾಲ ನೀಡಲು ಬಳಸಿಕೊಳ್ಳಬಹುದು.

ಇದನ್ನೂ ಓದಿ: ಮನೆಮನೆಗೆ ಸೌರಶಕ್ತಿ; ಪಿಎಂ ಸೂರ್ಯಘರ್ ಯೋಜನೆಯಲ್ಲಿ 1.45 ಲಕ್ಷ ನೊಂದಣಿ; ಅರ್ಜಿ ಸಲ್ಲಿಸುವ ಕ್ರಮಗಳ ವಿವರ

ಆರ್​ಬಿಐ ಕೊನೆಯದಾಗಿ ಸಿಆರ್​ಆರ್ ಅನ್ನು ಕಡಿಮೆ ಮಾಡಿದ್ದು ಕೋವಿಡ್ ಸಂದರ್ಭದಲ್ಲಿ. 2020ರ ಮಾರ್ಚ್​ನಲ್ಲಿ ಕ್ಯಾಷ್ ರಿಸರ್ವ್ ರೇಶಿಯೋವನ್ನು ಶೇ. 4.5ಕ್ಕೆ ಇಳಿಸಲಾಗಿತ್ತು. ನಾಲ್ಕು ವರ್ಷಗಳ ಬಳಿಕ ಈಗ ಮತ್ತೊಂದು ಸುತ್ತಿನ ಇಳಿಕೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌