ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೂ ಯುಪಿಐ ಕ್ರೆಡಿಟ್ ಲೈನ್ ಅವಕಾಶ ವಿಸ್ತರಣೆ; ಎಸ್​ಎಫ್​ಬಿಗಳಿಗೆ ಒಳ್ಳೆಯ ಲಾಭದ ನಿರೀಕ್ಷೆ

RBI extends UPI credit line facility to SFB customers: ಯುಪಿಐ ಗ್ರಾಹಕರಿಗೆ ಬ್ಯಾಂಕುಗಳು ನೀಡುವ ಪೂರ್ವನಿಗದಿತ ಕ್ರೆಡಿಟ್ ಲೈನ್ ಅವಕಾಶವನ್ನು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೂ ವಿಸ್ತರಿಸಲಾಗದೆ. ಈಗ ಎಸ್​ಎಫ್​ಬಿಗಳೂ ಕೂಡ ತಮ್ಮ ಗ್ರಾಹಕರಿಗೆ ಯುಪಿಐನಲ್ಲಿ ಕ್ರೆಡಿಟ್ ಲೈನ್ ನೀಡಬಹುದು. ಇದೇ ವೇಳೆ, ಆರ್​ಬಿಐ ಯುಪಿಐ ಲೈಟ್​ನ ವಹಿವಾಟು ಮಿತಿಯನ್ನು 500 ರೂನಿಂದ 1,000 ರೂಗೆ ಏರಿಸಿದೆ.

ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೂ ಯುಪಿಐ ಕ್ರೆಡಿಟ್ ಲೈನ್ ಅವಕಾಶ ವಿಸ್ತರಣೆ; ಎಸ್​ಎಫ್​ಬಿಗಳಿಗೆ ಒಳ್ಳೆಯ ಲಾಭದ ನಿರೀಕ್ಷೆ
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 06, 2024 | 12:20 PM

ನವದೆಹಲಿ, ಡಿಸೆಂಬರ್ 6: ಸಣ್ಣ ಹಣಕಾಸು ಬ್ಯಾಂಕುಗಳಾದ ಎಸ್​ಎಫ್​ಬಿಗಳು ತಮ್ಮ ಗ್ರಾಹಕರಿಗೆ ಯುಪಿಐನಲ್ಲಿ ಕ್ರೆಡಿಟ್ ಲೈನ್ ಕೊಡುವ ಅವಕಾಶ ಪಡೆದಿವೆ. ಅಂದರೆ, ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಖಾತೆಗಳನ್ನು ಯುಪಿಐಗೆ ಜೋಡಿಸಿಕೊಂಡಿರುವ ಗ್ರಾಹಕರು, ಪೂರ್ವನಿಗದಿತ ಮೊತ್ತದ ಕ್ರೆಡಿಟ್ ಲೈನ್ ಪಡೆಯಬಹುದು. ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ನಿರ್ದಿಷ್ಟ ಮೊತ್ತವನ್ನು ಸಾಲವಾಗಿ ಬಳಸಿಕೊಳ್ಳಬಹುದು. ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಆರ್​ಬಿಐನ ಈ ನಿರ್ಧಾರವು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೆ ಬಹಳ ಅನುಕೂಲವಾಗಲಿದೆ. ಬ್ಯಾಂಕುಗಳು ಮಾತ್ರವಲ್ಲ, ಅವುಗಳ ಗ್ರಾಹಕರಿಗೂ ಇದು ಅನುಕೂಲ ತರಲಿದೆ. ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಗ್ರಾಹಕರಾಗಿರುವವರು ಸಾಮಾನ್ಯವಾಗಿ ಸಣ್ಣ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರು, ಹಾಗೂ ಪಟ್ಟಣ ಮತ್ತು ಗ್ರಾಮೀಣ ಭಾಗದ ವ್ಯಕ್ತಿಗಳು ಹೆಚ್ಚಿದ್ದಾರೆ. ಇವರಿಗೆ ಯುಪಿಐನಲ್ಲಿ ಹೆಚ್ಚು ಕ್ರೆಡಿಟ್ ಲೈನ್ ಸಿಗಲಿದೆ. ಎಸ್​ಎಫ್​ಬಿಗಳಿಗೂ ಕೂಡ ಹೊಸ ಆದಾಯ ಮಾರ್ಗ ಸಿಕ್ಕಂತಾಗುತ್ತದೆ.

ಕಮರ್ಷಿಯಲ್ ಬ್ಯಾಂಕುಗಳು ಯುಪಿಐನಲ್ಲಿ ಪೂರ್ಣನಿಗದಿತ ಕ್ರೆಡಿಟ್ ಲೈನ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿವೆ. ಈಗ ಇದನ್ನು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೆ ವಿಸ್ತರಿಸಲಾಗಿದೆ. ಕೆಲ ಎಸ್​ಎಫ್​ಬಿಗಳು ಕ್ರೆಡಿಟ್ ಕಾರ್ಡ್​ಗಳನ್ನೂ ನೀಡುತ್ತಿವೆ. ಯುಪಿಐನಲ್ಲಿ ಕ್ರೆಡಿಟ್ ಲೈನ್ ಕೊಡುವುದು ಈಗ ಈ ಎಸ್​ಎಫ್​ಬಿಗಳಿಗೆ ಮತ್ತಷ್ಟು ಹುರಿದುಂಬಿಸಿದಂತಾಗಬಹುದು.

ಇದನ್ನೂ ಓದಿ: ಸಿಆರ್​ಆರ್ 50 ಮೂಲಾಂಕಗಳಷ್ಟು ಇಳಿಕೆ; ಶೇ. 4ಕ್ಕೆ ಇಳಿದ ಕ್ಯಾಷ್ ರಿಸರ್ವ್ ರೇಶಿಯೋ; ಆರ್ಥಿಕತೆಗೆ ಪುಷ್ಟಿ ಸಿಗುವ ನಿರೀಕ್ಷೆ

ಯುಪಿಐ ಲೈಟ್​ನ ವಹಿವಾಟು ಮಿತಿ ಹೆಚ್ಚಳ

ಆರ್​ಬಿಐ ನಿನ್ನೆ ತೆಗೆದುಕೊಂಡ ಮಹತ್ವದ ನಿರ್ಧಾರವೊಂದರಲ್ಲಿ ಯುಪಿಐ ಲೈಟ್ ವಹಿವಾಟು ಮಿತಿಯನ್ನು ಹೆಚ್ಚಿಸಿದೆ. ಪಿನ್ ಇಲ್ಲದೇ ಹಣ ಪಾವತಿಸಲು ಯುಪಿಐ ಲೈಟ್ ಅವಕಾಶ ಕೊಡುತ್ತದೆ. 500 ರೂವರೆಗಿನ ಹಣವನ್ನು ಒಂದು ವಹಿವಾಟಿನಲ್ಲಿ ಪಾವತಿಸಬಹುದು. ಈಗ ಈ ಮಿತಿಯನ್ನು 1,000 ರೂಗೆ ಏರಿಸಲಾಗಿದೆ. ಹಾಗೆಯೇ, ಯುಪಿಐ ಲೈಟ್ ಅಕೌಂಟ್​ನಲ್ಲಿ ಇಡಬಹುದಾದ ಗರಿಷ್ಠ ಹಣದ ಮಿತಿಯನ್ನು 2,000 ರೂನಿಂದ 5,000 ರೂಗೆ ಏರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?