RBI MPC Updates: ರಿಪೋ ದರ ಇಳಿಸದ ಆರ್​ಬಿಐ; ಶೇ. 6.50ರಲ್ಲೇ ಬಡ್ಡಿದರ ಮುಂದುವರಿಕೆ

RBI governor Shaktikanta Das Press Meet: ಆರ್​ಬಿಐ ಮಾನಿಟರಿ ಪಾಲಿಸಿ ಸಮಿತಿಯು ರಿಪೋ ದರ ಅಥವಾ ಬಡ್ಡಿದರವನ್ನು ಶೇ. 6.50ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ನಿರೀಕ್ಷೆಯನ್ನು ಆರ್​ಬಿಐ ಶೇ. 7.2ರಿಂದ ಶೇ. 6.6ಕ್ಕೆ ಇಳಿಸಿದೆ. ಇನ್ನು, ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.8ರಷ್ಟಿರಬಹುದು ಎಂದೂ ಎಂಪಿಸಿ ಅಂದಾಜಿಸಿರುವುದನ್ನು ದಾಸ್ ತಿಳಿಸಿದ್ದಾರೆ.

RBI MPC Updates: ರಿಪೋ ದರ ಇಳಿಸದ ಆರ್​ಬಿಐ; ಶೇ. 6.50ರಲ್ಲೇ ಬಡ್ಡಿದರ ಮುಂದುವರಿಕೆ
ಶಕ್ತಿಕಾಂತ ದಾಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 06, 2024 | 10:31 AM

ನವದೆಹಲಿ, ಡಿಸೆಂಬರ್ 6: ನಿರೀಕ್ಷೆಯಂತೆ ಆರ್​ಬಿಐ ಮಾನಿಟರಿ ಪಾಲಿಸಿ ಕಮಿಟಿ ಈ ಬಾರಿಯೂ ಬಡ್ಡಿದರ ಇಳಿಸುವ ಸಾಹಸಕ್ಕೆ ಕೈಹಾಕಲಿಲ್ಲ. ಬಡ್ಡಿದರ ಶೇ. 6.50ರಲ್ಲೇ ಇರಲಿದೆ. ಸತತ 11ನೇ ಬಾರಿ ರಿಪೋ ದರ ಯಥಾಸ್ಥಿತಿ ಮುಂದುವರಿಸಲು ಎಂಪಿಸಿ ನಿರ್ಧರಿಸಿದೆ. ಮೂರು ದಿನಗಳ ಆರ್​ಬಿಐ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ಇಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿಯಲ್ಲಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ರಿಪೋ ದರವನ್ನು ಸದ್ಯಕ್ಕೆ ಇಳಿಸದಿರುವ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. 2023ರ ಫೆಬ್ರುವರಿಯಲ್ಲಿ ರಿಪೋ ದರವನ್ನು ಶೇ. 6.50ಕ್ಕೆ ಹೆಚ್ಚಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ವ್ಯತ್ಯಯವಾಗದೇ ಅದೇ ದರದಲ್ಲಿ ಮುಂದುವರಿದಿದೆ. ಎಂಪಿಸಿ ಸಮಿತಿಯ ಆರು ಸದಸ್ಯರಲ್ಲಿ 4:2ರ ಬಹುಮತದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಏನಿದು ರಿಪೋ ದರ?

ರಿಪೋ ದರ ಎಂದರೆ ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐನಿಂದ ಸಾಲ ಪಡೆಯಲು ನೀಡಬೇಕಾದ ಬಡ್ಡಿಯಾಗಿರುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ವಿಧಿಸುವ ಬಡ್ಡಿಗೆ ಈ ರಿಪೋ ದರದ ಪ್ರಭಾವ ಅಥವಾ ಆಧಾರ ಆಗಿರಬಹುದು. ಇನ್ನು, ರಿವರ್ಸ್ ರಿಪೋ ದರ ಎಂದರೆ, ಬ್ಯಾಂಕುಗಳು ಆರ್​ಬಿಐನಲ್ಲಿ ಹಣದ ಠೇವಣಿ ಇಟ್ಟರೆ ಸಿಗುವ ಬಡ್ಡಿ.

ಇದನ್ನೂ ಓದಿ: ತೈಲ, ಅನಿಲ ಅನ್ವೇಷಣಾ ವಲಯಕ್ಕೆ ಪುಷ್ಟಿ ನೀಡಲು ಸರ್ಕಾರದಿಂದ ತಿದ್ದುಪಡಿ ಕಾಯ್ದೆ

ಈ ವರ್ಷದ ಜಿಡಿಪಿ ಶೇ. 6.6: ಆರ್​​ಬಿಐ

ಈ ಹಣಕಾಸು ವರ್ಷದಲ್ಲಿ (2024-25) ಭಾರತದ ಜಿಡಿಪಿ ಶೇ. 6.6ರಷ್ಟಿರಬಹುದು ಎಂದು ಆರ್​ಬಿಐ ನಿರೀಕ್ಷಿಸಿರುವುದನ್ನು ಶಕ್ತಿಕಾಂತ್ ದಾಸ್ ತಿಳಿಸಿದರು. ಹಿಂದಿನ ಎಂಪಿಸಿ ಸಭೆಯಲ್ಲಿ ಈ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ. 7.2ರಷ್ಟು ಹೆಚ್ಚಬಹುದು ಎಂದು ಹೇಳಲಾಗಿತ್ತು. ಆದರೆ, ಈ ಬಾರಿ ಅಂದಾಜನ್ನು ಪರಿಷ್ಕರಿಸಲಾಗಿದೆ. ಈ ಹಣಕಾಸು ವರ್ಷದ ಕೊನೆಯ ಎರಡು ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 6.8 ಮತ್ತು ಶೇ. 7.2ರಷ್ಟು ಹೆಚ್ಚಬಹುದು ಎಂದು ಅವರು ಅಂದಾಜು ಮಾಡಿದರು.

  • ಅಕ್ಟೋಬರ್​ನಿಂದ ಡಿಸೆಂಬರ್ ಕ್ವಾರ್ಟರ್: ಶೇ. 6.8
  • 2025ರ ಜನವರಿಯಿಂದ ಮಾರ್ಚ್ ಕ್ವಾರ್ಟರ್: ಶೇ. 7.2
  • ಏಪ್ರಿಲ್​ನಿಂದ ಜೂನ್ ಕ್ವಾರ್ಟರ್: ಶೇ. 6.9
  • ಜುಲೈನಿಂದ ಸೆಪ್ಟೆಂಬರ್ ಕ್ವಾರ್ಟರ್: ಶೇ. 7.3

ಇದನ್ನೂ: ಮನೆಮನೆಗೆ ಸೌರಶಕ್ತಿ; ಪಿಎಂ ಸೂರ್ಯಘರ್ ಯೋಜನೆಯಲ್ಲಿ 1.45 ಲಕ್ಷ ನೊಂದಣಿ; ಅರ್ಜಿ ಸಲ್ಲಿಸುವ ಕ್ರಮಗಳ ವಿವರ

ಹಣದುಬ್ಬರ ಕಡಿಮೆ ಆಗುವ ಸಾಧ್ಯತೆ: ದಾಸ್

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಅಕ್ಟೋಬರ್​ನಲ್ಲಿ ಹಣದುಬ್ಬರ ಏರಿರುವ ರೀತಿಗೆ ಆತಂಕ ವ್ಯಕ್ತಪಡಿಸಿದರು. ಕೋರ್ ಇನ್​ಫ್ಲೇಶನ್ ಹೆಚ್ಚಿರುವುದು ಅವರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಆದರೆ, ಈ ಬಾರಿ ಮುಂಗಾರು ಬೆಳೆಯ ಫಸಲು ಉತ್ತಮವಾಗಿದ್ದು ಆಹಾರ ಬೆಲೆಗಳು ಕಡಿಮೆ ಆಗಬಹುದು. ಇದರಿಂದ ಒಟ್ಟಾರೆ ಹಣದುಬ್ಬರ ಕಡಿಮೆ ಆಗಬಹುದು ಎಂಬುದು ಅವರ ಆಶಯ. 2024-25ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.8ರಷ್ಟಿರಬಹುದು ಎಂಬುದು ಎಂಪಿಸಿ ಮಾಡಿರುವ ಅಂದಾಜು. ಮುಂದಿನ ಹಣಕಾಸು ವರ್ಷವಾದ 2025-26ರ ಮೊದಲೆರಡು ಕ್ವಾರ್ಟರ್​ಗಳಲ್ಲಿ ಹಣದುಬ್ಬರ ಶೇ. 4.6 ಮತ್ತು ಶೇ. 4ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:11 am, Fri, 6 December 24

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?