AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates: ವೀಕೆಂಡ್​ನಲ್ಲಿ ಭರ್ಜರಿ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಈಗ ಯಥಾಸ್ಥಿತಿ; ದೇಶ ವಿದೇಶಗಳಲ್ಲಿ ಈಗೆಷ್ಟಿದೆ ದರ, ಇಲ್ಲಿದೆ ಡೀಟೇಲ್ಸ್

Bullion Market 2023, May 22nd: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,420 ರುಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮ್​ಗೆ 75.30 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Rates: ವೀಕೆಂಡ್​ನಲ್ಲಿ ಭರ್ಜರಿ ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಈಗ ಯಥಾಸ್ಥಿತಿ; ದೇಶ ವಿದೇಶಗಳಲ್ಲಿ ಈಗೆಷ್ಟಿದೆ ದರ, ಇಲ್ಲಿದೆ ಡೀಟೇಲ್ಸ್
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2023 | 5:00 AM

Share

ಬೆಂಗಳೂರು: ಕಳೆದ ವಾರ ಬಹುತೇಕ ಇಳಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Price) ವೀಕೆಂಡ್​ನಲ್ಲಿ ದಿಢೀರ್ ಏರಿಕೆ ಆಗಿ ಅಚ್ಚರಿ ಹುಟ್ಟಿಸಿತ್ತು. ಇದೀಗ ಮೇ 22ರಂದು ಯಥಾಸ್ಥಿತಿ ಇದ್ದರೂ ಬೆಲೆ ಏರಿಕೆಯಾಗುವ ಮುನ್ಸೂಚನೆ ಇದೆ. ಒಂದು ತಿಂಗಳಿಂದಲೂ ಬಹುತೇಕ ಇಳಿಯುತ್ತಿರುವ ಬೆಳ್ಳಿ ಬೆಲೆ ವೀಕೆಂಡ್​ನಲ್ಲಿ 100 ಗ್ರಾಮ್​ಗೆ 100 ರುನಷ್ಟು ಏರಿತ್ತು. ಚಿನ್ನದ ಬೆಲೆ 10 ಗ್ರಾಮ್​ಗೆ 500 ರೂನಷ್ಟು ಹೆಚ್ಚಳ ಆಗಿತ್ತು. ಕಳೆದ 10 ದಿನದಲ್ಲಿ ಚಿನ್ನದ ಬೆಲೆ 3 ಬಾರಿ ಮಾತ್ರ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ 10 ದಿನದಲ್ಲಿ ಏರಿಕೆಯಾಗಿರುವುದು ಒಮ್ಮೆ ಮಾತ್ರ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,420 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,530 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,900 ರುಪಾಯಿಯಲ್ಲಿ ಇದೆ.

ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ.

ಚಿನ್ನದ ಬೆಲೆ ಏರಿಳಿತಕ್ಕೆ ಏನು ಕಾರಣ?

ಅಮೆರಿಕದಲ್ಲಿ ಅಲ್ಲಿನ ಫೆಡರಲ್ ಬ್ಯಾಂಕು ಈ ಬಾರಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ. ಉದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಗಳು ಬಂದಿವೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ತುಟ್ಟಿಯಾಗುತ್ತಾ ಹೋಗಬಹುದು. ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿTCS: ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್: 7 ಲಕ್ಷ ರೂ ಮೇಲ್ಪಟ್ಟ ವೆಚ್ಚಕ್ಕೆ ಮಾತ್ರ ಶೇ. 20 ಟಿಸಿಎಸ್- ಸರ್ಕಾರ ಸ್ಪಷ್ಟನೆ

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 22ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,300 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,420 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 753 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,470 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 790 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 56,350 ರೂ
  • ಚೆನ್ನೈ: 56,800 ರೂ
  • ಮುಂಬೈ: 56,300 ರೂ
  • ದೆಹಲಿ: 56,450 ರೂ
  • ಕೋಲ್ಕತಾ: 56,300 ರೂ
  • ಕೇರಳ: 56,300 ರೂ
  • ಅಹ್ಮದಾಬಾದ್: 56,350 ರೂ
  • ಜೈಪುರ್: 56,450 ರೂ
  • ಲಕ್ನೋ: 56,450 ರೂ
  • ಭುವನೇಶ್ವರ್: 56,300 ರೂ

ಇದನ್ನೂ ಓದಿNote Exchange: ಫಾರ್ಮ್ ಬೇಡ, ಆಧಾರ್ ಬೇಡ, ಅಕೌಂಟ್ ಬೇಡ; ಯಾರೇ ಬಂದ್ರೂ ನೋಟು ಎಕ್ಸ್​ಚೇಂಜ್ ಮಾಡಿಕೊಡಿ: ಎಲ್ಲಾ ಎಸ್​ಬಿಐ ಬ್ರ್ಯಾಂಚ್​ಗಳಿಗೂ ಸೂಚನೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,830 ರಿಂಗಿಟ್ (51,603 ರುಪಾಯಿ)
  • ದುಬೈ: 2217.50 ಡಿರಾಮ್ (50,021 ರುಪಾಯಿ)
  • ಅಮೆರಿಕ: 600 ಡಾಲರ್ (49,743 ರುಪಾಯಿ)
  • ಸಿಂಗಾಪುರ: 822 ಸಿಂಗಾಪುರ್ ಡಾಲರ್ (50,690 ರುಪಾಯಿ)
  • ಕತಾರ್: 2,285 ಕತಾರಿ ರಿಯಾಲ್ (52,029 ರೂ)
  • ಓಮನ್: 241.50 ಒಮಾನಿ ರಿಯಾಲ್ (52,315 ರುಪಾಯಿ)
  • ಕುವೇತ್: 189 ಕುವೇತಿ ದಿನಾರ್ (51,185 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,900 ರೂ
  • ಚೆನ್ನೈ: 7,900 ರೂ
  • ಮುಂಬೈ: 7,530 ರೂ
  • ದೆಹಲಿ: 7,530 ರೂ
  • ಕೋಲ್ಕತಾ: 7,530 ರೂ
  • ಕೇರಳ: 7,900 ರೂ
  • ಅಹ್ಮದಾಬಾದ್: 7,530 ರೂ
  • ಜೈಪುರ್: 7,530 ರೂ
  • ಲಕ್ನೋ: 7,530 ರೂ
  • ಭುವನೇಶ್ವರ್: 7,900 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ