TCS: ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್: 7 ಲಕ್ಷ ರೂ ಮೇಲ್ಪಟ್ಟ ವೆಚ್ಚಕ್ಕೆ ಮಾತ್ರ ಶೇ. 20 ಟಿಸಿಎಸ್- ಸರ್ಕಾರ ಸ್ಪಷ್ಟನೆ

Indians Foreign Expense: ವಿದೇಶ ಪ್ರವಾಸಕ್ಕೆ ಹೋಗಿ ಅಲ್ಲಿ ಭಾರತೀಯರು ಮಾಡುವ ವೆಚ್ಚಕ್ಕೆ ಶೇ. 20ರಷ್ಟು ಟಿಸಿಎಸ್ ತೆರಿಗೆ ಹಾಕುವ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ವರ್ಷಕ್ಕೆ 7 ಲಕ್ಷ ರೂ ಒಳಗಿನ ವೆಚ್ಚಕ್ಕೆ ಟಿಸಿಎಸ್ ಇಲ್ಲ ಎಂದಿದೆ.

TCS: ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್: 7 ಲಕ್ಷ ರೂ ಮೇಲ್ಪಟ್ಟ ವೆಚ್ಚಕ್ಕೆ ಮಾತ್ರ ಶೇ. 20 ಟಿಸಿಎಸ್- ಸರ್ಕಾರ ಸ್ಪಷ್ಟನೆ
ವಿದೇಶ ಪ್ರವಾಸ
Follow us
|

Updated on:May 21, 2023 | 4:45 PM

ನವದೆಹಲಿ: ವಿದೇಶಗಳಲ್ಲಿ ಭಾರತೀಯರು ಮಾಡುವ ವೆಚ್ಚಕ್ಕೆ (Expense) ಶೇ. 20ರಷ್ಟು ಟಿಸಿಎಸ್ ತೆರಿಗೆ ವಿಧಿಸುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಇತ್ತೀಚೆಗೆ ಪ್ರಕಟಿಸಿದ್ದು, ಸಾಕಷ್ಟು ಟೀಕೆಗೆ ಒಳಗಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರಕಾರ ಇದೀಗ ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದೆ. ವಿದೇಶಗಳಲ್ಲಿ ಭಾರತೀಯರು 7 ಲಕ್ಷ ರೂವರೆಗೆ ಮಾಡುವ ಯಾವುದೇ ವೆಚ್ಚಕ್ಕೂ ಟಿಸಿಎಸ್ ಇರುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ.

ವಿದೇಶಗಳಲ್ಲಿ ಭಾರತೀಯರು ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚವನ್ನು ಎಲ್​ಆರ್​ಎಸ್ ವ್ಯಾಪ್ತಿಗೆ ತರಲಿರುವುದಾಗಿ ಕಳೆದ ಬಜೆಟ್​ನಲ್ಲಿ ತಿಳಿಸಲಾಗಿತ್ತು. ಇದರ ಪ್ರಕಾರ ವಿದೇಶಳಿಗೆ ಹೋಗಿ ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶ ಹೊರತುಪಡಿಸಿ ಮಾಡುವ ಇತರ ಎಲ್ಲಾ ವೆಚ್ಚಗಳಿಗೂ ಶೇ. 20ರಷ್ಟು ಟಿಸಿಎಸ್ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿತ್ತು. ಟಿಸಿಎಸ್ ಎಂದರೆ ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್. ಇದು ವಹಿವಾಟು ನಡೆಯುವಾಗಲೇ ಮುರಿದುಕೊಳ್ಳುವ ಹಣ. ತೆರಿಗೆಯಾದರೂ ಇದು ತೆರಿಗೆಯಲ್ಲ. ಈ ಹಣವನ್ನು ಐಟಿ ರಿಟರ್ನ್ಸ್ ಫೈಲ್ ಮಾಡುವಾಗ ಕ್ಲೈಮ್ ಮಾಡಬಹುದು. ಜನರ ವೆಚ್ಚವನ್ನ ಟ್ರ್ಯಾಕ್ ಮಾಡಲು ಈ ವ್ಯವಸ್ಥೆ ಮಾಡಲಾಗಿದೆ. ಈ ಮುಂಚೆ ಟಿಸಿಎಸ್ ದರ ಶೇ. 5 ಇತ್ತು.

ಇದನ್ನೂ ಓದಿTCS Confusion: ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ಶೇ. 20 ತೆರಿಗೆ; ಫಾರೀನ್ ಟ್ರಿಪ್ ಗಲಿಬಿಲಿ; ತಿಳಿದಿರಬೇಕಾದ ಕೆಲ ಸಂಗತಿಗಳು

ಇದೀಗ ವರ್ಷಕ್ಕೆ 7 ಲಕ್ಷ ರೂ ಮೇಲ್ಪಟ್ಟ ವೆಚ್ಚಗಳಿಗೆ ಮಾತ್ರ ಶೇ. 20ರಷ್ಟು ಟಿಸಿಎಸ್ ಇರುತ್ತದೆ. 7 ಲಕ್ಷ ರೂವರೆಗಿನ ವೆಚ್ಚಕ್ಕೆ ಯಾವುದೇ ಟಿಸಿಎಸ್ ಇರುವುದಿಲ್ಲ ಎನ್ನಲಾಗಿದೆ.

ಟ್ರ್ಯಾಕ್ ಮಾಡುವುದಕ್ಕೆ ಶೇ. 20 ಟಿಸಿಎಸ್ ಯಾಕೆ? ಟೀಕೆಗಳ ಮಳೆ

ವಿದೇಶಗಳಲ್ಲಿ ಭಾರತೀಯರು ಬಹಳ ಹೆಚ್ಚು ವೆಚ್ಚ ಮಾಡುತ್ತಿದ್ದಾರೆಂಬ ಹಿನ್ನೆಲೆಯಲ್ಲಿ ಅವರ ಆರ್ಥಿಕ ಚಟುವಟಿಕೆಯ ಮೇಲೆ ನಿಗಾ ಇಡಲು ಟಿಸಿಎಸ್ ವ್ಯವಸ್ಥೆ ಮಾಡಿರುವುದಾಗಿ ಸರ್ಕಾರ ನೀಡಿರುವ ಕಾರಣ ಬಹಳ ಮಂದಿಯ ಟೀಕೆಗೆ ಕಾರಣವಾಗಿದೆ. ಸರ್ಕಾರ ಟ್ರ್ಯಾಕ್ ಮಾಡುವುದಾದರೆ ಶೇ. 20 ಟಿಸಿಎಸ್ ಯಾಕೆ, ಶೇ. 1ಕ್ಕಿಂತಲೂ ಕಡಿಮೆ ದರ ಇಟ್ಟರೂ ಅಗಬಹುದಲ್ಲವಾ ಎಂದು ಹಲವರು ಪ್ರಶ್ನಿಸುತ್ತಿರುವುದು ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:41 pm, Sun, 21 May 23

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್