Please Note: 2,000 ರೂ ನೋಟು ಸೆಪ್ಟಂಬರ್ 30ರ ಬಳಿಕ ಅಮಾನ್ಯಗೊಳ್ಳುತ್ತಾ? ಇಲ್ಲಿದೆ ಕೆಲ ವಾಸ್ತವ ಸಂಗತಿಗಳು
Rs 2,000 Note, MyGovIndia Clarification: 2,000 ರೂ ನೋಟನ್ನು ಚಲಾವಣೆಯಿಂದ ಹಿಂಪಡೆದದ್ದು ಮತ್ತು ಸೆಪ್ಟಂಬರ್ 30ರವರೆಗೆ ಈ ನೋಟುಗಳ ಜಮೆಗೆ ಕಾಲಾಕಾಶ ಕೊಟ್ಟಿದ್ದು ಗೊಂದಲಕ್ಕೆ ಕಾರಣ. ಆದರೆ, ಸೆಪ್ಟಂಬರ್ 30ರ ನಂತರ ಈ ನೋಟು ಅಮಾನ್ಯ ಅಥವಾ ಅಸಿಂಧುಗೊಳ್ಳುತ್ತದೆ ಎಂದು ಆರ್ಬಿಐ ಎಲ್ಲಿಯೂ ಹೇಳಿಲ್ಲ.
ನವದೆಹಲಿ: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಕೇಂದ್ರ ಸರ್ಕಾರ ಮೊನ್ನೆ ಚಲಾವಣೆಯಿಂದ ಹಿಂತೆಗೆದುಕೊಂಡಿರುವುದಾಗಿ ಘೋಷಿಸಿತು. ಸೆಪ್ಟಂಬರ್ 30ರಷ್ಟರಲ್ಲಿ 2,000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಅಥವಾ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ಸರ್ಕಾರ ಹೇಳಿದೆ. 2016 ರ ನೋಟ್ ಬ್ಯಾನ್ ಕ್ರಮ ಸ್ಮರಣೆಯಲ್ಲಿರುವ ಹಿನ್ನೆಲೆಯಲ್ಲಿ ಬಹಳ ಜನರು ಸಹಜವಾಗಿಯೇ ಆತಂಕಗೊಂಡಿದ್ದರು. ಇದಕ್ಕೆ ಇಂಬುಕೊಡುವಂತೆ, 2,000 ರೂ ನೋಟು ಸೆಪ್ಟಂಬರ್ 30ರ ಬಳಿಕ ಅಮಾನ್ಯಗೊಳ್ಳುತ್ತದೆ ಎಂಬಂತೆ ಹಲವರು ರೀತಿಯ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ರೆಕ್ಕೆಪುಕ್ಕಗಳೊಂದಿಗೆ ಸೇರಿ ಶೇರ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ 2,000 ರೂ ನೋಟು ವಿಚಾರದಲ್ಲಿ ಕೆಲವೊಂದಿಷ್ಟು ಸ್ಪಷ್ಟನೆ ನೀಡಿದೆ. ಅದರ ಪ್ರಕಾರ ಸೆಪ್ಟಂಬರ್ 30ರ ಬಳಿಕವೂ ನೋಟು ಲೀಗಲ್ ಟೆಂಡರ್ ಆಗಿ ಮುಂದುವರಿಯುತ್ತದೆ ಎಂದು ಹೇಳಿದೆ.
ಸೆಪ್ಟಂಬರ್ 30ರ ಬಳಿಕ 2,000 ರೂ ನೋಟು ಏನಾಗುತ್ತದೆ? ವಾಸ್ತವ ಏನು?
2,000 ರೂ ನೋಟನ್ನು ಚಲಾವಣೆಯಿಂದ ಹಿಂಪಡೆದದ್ದು ಮತ್ತು ಸೆಪ್ಟಂಬರ್ 30ರವರೆಗೆ ಈ ನೋಟುಗಳ ಜಮೆಗೆ ಕಾಲಾಕಾಶ ಕೊಟ್ಟಿದ್ದು ಗೊಂದಲಕ್ಕೆ ಕಾರಣ. ಆದರೆ, ಸೆಪ್ಟಂಬರ್ 30ರ ನಂತರ ಈ ನೋಟು ಅಮಾನ್ಯ ಅಥವಾ ಅಸಿಂಧುಗೊಳ್ಳುತ್ತದೆ ಎಂದು ಆರ್ಬಿಐ ಎಲ್ಲಿಯೂ ಹೇಳಿಲ್ಲ. ಸೆಪ್ಟಂಬರ್ 30ರ ಬಳಿಕವೂ ಆ ನೋಟು ಸಕ್ರಮವಾಗಿಯೇ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: 2000 ರೂ. ನೋಟು ಬದಲಾವಣೆಗೆ ಫಾರ್ಮ್ ಬಿಡುಗಡೆ: ಇಲ್ಲಿದೆ ಭರ್ತಿ ಪ್ರಕ್ರಿಯೆ
ಆದರೆ, ಆ ಗಡುವಿನ ಒಳಗೆ ಯಾರಾದರೂ ತಮ್ಮಲ್ಲಿರುವ 2,000 ರೂ ನೋಟನ್ನು ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡದೇ ಹಾಗೇ ಇಟ್ಟುಕೊಂಡಿದ್ದರೆ ಏನಾಗುತ್ತದೆ ಎಂಬುದು ಪ್ರಶ್ನೆ. ಇದಕ್ಕೆ ಸರ್ಕಾರ ಅಥವಾ ಆರ್ಬಿಐ ಸ್ಪಷ್ಟಪಡಿಸಿಲ್ಲ. ನೋಟು ಅಸಿಂಧುಗೊಳ್ಳುವುದಿಲ್ಲ ಎಂದಷ್ಟೇ ಸ್ಪಷ್ಟಪಡಿಸಿರುವುದು. ಹೀಗಾಗಿ, 2,000 ರೂ ನೋಟನ್ನು ಹೊಂದಿರುವವರು ಅತಂಕಕ್ಕೆ ಒಳಗಾಗುವ ಪ್ರಮೇಯ ಇಲ್ಲ.
2,000 ರೂ ನೋಟು ಚಲಾವಣೆಯಿಂದ ಹಿಂಪಡೆದದ್ದು ಯಾಕೆ? ಏನು ಕಾರಣ?
2016ರಲ್ಲಿ 500 ರೂ ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಸರ್ಕಾರ ಅಮಾನ್ಯಗೊಳಿಸಿದಾಗ ದೇಶದಲ್ಲಿ ಕರೆನ್ಸಿ ಕೊರತೆ ಸೃಷ್ಟಿಯಾಗದಿರಲೆಂದು 2,000 ರೂ ನೋಟನ್ನು ಮುದ್ರಿಸಲಾಗಿತ್ತು. ಅದಾದ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಹೊಸ 500 ರೂ ಮುಖಬೆಲೆಯ ನೋಟುಗಳನ್ನು ನೋಟುಗಳನ್ನು ಮುದ್ರಿಸಲಾಗಿದೆ. ಇದರೊಂದಿಗೆ 2,000 ರೂ ನೋಟುಗಳ ಅವಶ್ಯಕತೆ ಕಡಿಮೆ ಅಗಿದೆ.
ಸರ್ಕಾರ 2018-19ರಲ್ಲೇ 2,000 ರೂ ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿತ್ತು. ಸಾರ್ವಜನಿಕರಿಗೂ ಕೂಡ 2,000 ರೂ ನೋಟುಗಳ ಅವಶ್ಯಕತೆ ತೋರಿಲ್ಲ. ಅಲ್ಲದೇ ಆ ನೋಟುಗಳ ಚಲಾವಣೆಯಿಂದ ಸಣ್ಣ ವ್ಯಾಪಾರಿಗಳಿಗೆ ಚಿಲ್ಲರೆ ಸಮಸ್ಯೆಯೂ ತಲೆದೋರಿತ್ತು.
With the ₹2000 denomination bank notes set to be withdrawn from circulation, there are several misconceptions surrounding it & we are here to shed light on the facts with our myth-busting series!#MythsVsFacts #MythBusters @PMOIndia @FinMinIndia @nsitharaman @RBI @PIB_India pic.twitter.com/CPRRDblhAL
— MyGovIndia (@mygovindia) May 21, 2023
ಇದರ ಜೊತೆಗೆ ಯುಪಿಐ ಈಗ ಹೆಚ್ಚು ವ್ಯಾಪಕವಾಗಿರುವುದರಿಂದ 2,000 ರೂ ನೋಟಿನ ಪ್ರಸ್ತುತೆಯೂ ಹೊರಟುಹೋಗಿದೆ. ಸರ್ಕಾರ 2,000 ರೂ ನೋಟು ಮುದ್ರಣ ನಿಲ್ಲಿಸಿದಾಗಲೇ ಈ ನೋಟನ್ನು ಹಿಂಪಡೆಯಬಹುದು ಎಂದು ಭಾವಿಸಲಾಗಿತ್ತು.