Note Exchange: ಫಾರ್ಮ್ ಬೇಡ, ಆಧಾರ್ ಬೇಡ, ಅಕೌಂಟ್ ಬೇಡ; ಯಾರೇ ಬಂದ್ರೂ ನೋಟು ಎಕ್ಸ್​ಚೇಂಜ್ ಮಾಡಿಕೊಡಿ: ಎಲ್ಲಾ ಎಸ್​ಬಿಐ ಬ್ರ್ಯಾಂಚ್​ಗಳಿಗೂ ಸೂಚನೆ

SBI Clarification On Note Exchange: 2,000 ರೂ ಮುಖಬೆಲೆಯ ನೋಟುಗಳನ್ನು ಯಾರೇ ತಂದರೂ ಬದಲಾವಣೆ ಮಾಡಿಕೊಡಬೇಕು. ಖಾತೆ ಇಲ್ಲದಿದ್ದವರಿಗೂ ನೋಟು ಎಕ್ಸ್​ಚೇಂಜ್ ಆಗಬೇಕು. ಸ್ಲಿಪ್ ಬರೆದುಕೊಡಬೇಕೆಂದು ಕೇಳಬಾರದು ಎಂದು ಎಸ್​ಬಿಐ ತನ್ನ ಎಲ್ಲಾ ಬ್ರ್ಯಾಂಚುಗಳಿಗೆ ತಿಳಿಸಿದೆ.

Note Exchange: ಫಾರ್ಮ್ ಬೇಡ, ಆಧಾರ್ ಬೇಡ, ಅಕೌಂಟ್ ಬೇಡ; ಯಾರೇ ಬಂದ್ರೂ ನೋಟು ಎಕ್ಸ್​ಚೇಂಜ್ ಮಾಡಿಕೊಡಿ: ಎಲ್ಲಾ ಎಸ್​ಬಿಐ ಬ್ರ್ಯಾಂಚ್​ಗಳಿಗೂ ಸೂಚನೆ
2,000 ರೂ ನೋಟು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2023 | 5:33 PM

ನವದೆಹಲಿ: ಈಗ ಬಹಳ ಮಂದಿಗೆ 2,000 ರೂ ನೋಟಿನ ವಿಚಾರ ಗೊಂದಲದ ಗೂಡಾಗಿದೆ. ಸರ್ಕಾರ 2,000 ರೂ ಮುಖಬೆಲೆಯ ನೋಟಿನ ಚಲಾವಣೆಯನ್ನು ಹಿಂಪಡೆದುಕೊಂಡಿದ್ದು, ಮೇ 23ರಿಂದ ಈ ನೋಟುಗಳ ವಿನಿಮಯಕ್ಕೆ ಅವಕಾಶ ಮಾಡಲಾಗಿದೆ. ಆದರೆ, ನೋಟು ಎಕ್ಸ್​ಚೇಂಜ್​ಗೆ ಪ್ರತ್ಯೇಕ ಫಾರ್ಮ್ ಅಥವಾ ಸ್ಲಿಪ್ ಭರ್ತಿ ಮಾಡಬೇಕು, ಆಧಾರ್ ಇತ್ಯಾದಿ ಕೆವೈಸಿ ದಾಖಲೆ ಸಲ್ಲಿಸಬೇಕು ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿವೆ. ಇದು ಜನರಿಗೆ ಆತಂಕ ಉಂಟು ಮಾಡಿರುವುದು ಹೌದು. ಇದೇ ವೇಳೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,000 ರೂ ಮುಖಬೆಲೆಯ ನೋಟುಗಳ ವಿನಿಮಯ ವ್ಯವಸ್ಥೆಯನ್ನು ಬಹಳ ಸರಳಗೊಳಿಸಿದೆ.

2,000 ರೂ ಮುಖಬೆಲೆಯ ನೋಟುಗಳನ್ನು ಯಾರೇ ತಂದರೂ ಬದಲಾವಣೆ ಮಾಡಿಕೊಡಬೇಕು. ಖಾತೆ ಇಲ್ಲದಿದ್ದವರಿಗೂ ನೋಟು ಎಕ್ಸ್​ಚೇಂಜ್ ಆಗಬೇಕು. ಸ್ಲಿಪ್ ಬರೆದುಕೊಡಬೇಕೆಂದು ಕೇಳಬಾರದು. ಆಧಾರ್ ಕಾರ್ಡ್ ಇತ್ಯಾದಿ ಐಡಿ ದಾಖಲೆಗಳನ್ನು ಕೇಳಬಾರದು ಎಂದು ಎಸ್​ಬಿಐ ತನ್ನ ಎಲ್ಲಾ ಬ್ರ್ಯಾಂಚ್ ಅಧಿಕಾರಿಗಳಿಗೂ ಸೂಚಿಸಿದೆ. ಈ ಸಂಬಂಧ ಎಸ್​ಬಿಐ ನಿನ್ನೆ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.

ಇದನ್ನೂ ಓದಿPlease Note: 2,000 ರೂ ನೋಟು ಸೆಪ್ಟಂಬರ್ 30ರ ಬಳಿಕ ಅಮಾನ್ಯಗೊಳ್ಳುತ್ತಾ? ಇಲ್ಲಿದೆ ಕೆಲ ವಾಸ್ತವ ಸಂಗತಿಗಳು

2,000 ರೂ ನೋಟುಗಳ ವಿನಿಮಯಕ್ಕೆ ಫಾರ್ಮ್ ತುಂಬಿಸಿಕೊಡಬೇಕು. ಐಡಿ ಪ್ರೂಫ್ ಸಲ್ಲಿಸಬೇಕು ಎಂಬಂತಹ ಸಂದೇಶಗಳು ಮತ್ತು ಪೋಸ್ಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಎಸ್​ಬಿಐ ಈ ಸ್ಪಷ್ಟನೆ ನೀಡಿದೆ.

ಎಷ್ಟು ಬೇಕಾದರೂ ನೋಟು ಬದಲಾವಣೆ ಮಾಡಿಕೊಳ್ಳಬಹುದು; ಆದರೆ, ಒಮ್ಮೆಗೆ 10 ನೋಟು ಮಾತ್ರ

ಎಸ್​ಬಿಐ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ ಯಾವುದೇ ವ್ಯಕ್ತಿ 2,000 ರೂ ಮುಖಬೆಲೆಯ ನೋಟುಗಳನ್ನು ಎಷ್ಟು ಬೇಕಾದರೂ ಬದಲಾಯಿಸಿಕೊಳ್ಳಬಹುದು. ಆದರೆ, ಒಮ್ಮೆಗೆ 10 ನೋಟು ಮಾತ್ರ, ಅಂದರೆ 20,000 ರೂಗಳವರೆಗೆ ಮಾತ್ರ ಎಕ್ಸ್​ಚೇಂಜ್ ಮಾಡಿಕೊಳ್ಳಬಹುದು. 10ಕ್ಕಿಂತ ಹೆಚ್ಚು ನೋಟು ಇದ್ದರೆ, ಅ ವ್ಯಕ್ತಿ ಇನ್ನೊಮ್ಮೆ ಸರದಿಯಲ್ಲಿ ನಿಂತು ಹಣ ವಿನಿಮಯ ಮಾಡಿಕೊಳ್ಳಬೇಕು ಎಂದು ಎಸ್​ಬಿಐ ಹೇಳಿದೆ.

ಇದನ್ನೂ ಓದಿCompetition: ಮೇಲ್ಮನವಿಗೆ ಶೇ. 25 ಠೇವಣಿ, ಸುಳ್ಳು ಸ್ಟೇಟ್ಮೆಂಟ್​ಗೆ 5ಕೋಟಿ ದಂಡ; ಸ್ಪರ್ಧಾ ಕಾಯ್ದೆ ತಿದ್ದುಪಡಿಗೆ ಹೊಸ ಅಂಶಗಳು

ಮೇ 23ರಿಂದ 2,000 ರೂ ನೋಟುಗಳ ವಿನಿಮಯ ಮಾಡಿಕೊಳ್ಳಬಹುದು. ಎಲ್ಲಾ ಬ್ಯಾಂಕ್​ಗಳಲ್ಲೂ ನೋಟು ಎಕ್ಸ್​ಚೇಂಜ್ ಇರುತ್ತದೆ. ಸೆಪ್ಟಂಬರ್ 30ರವರೆಗೂ ಅವಕಾಶ ಇದೆ. ಅದಾದ ಬಳಿಕವೂ 2,000 ರೂ ನೋಟು ಅಮಾನ್ಯವಾಗುವುದಿಲ್ಲ. ಲೀಗಲ್ ಟೆಂಡರ್ ಆಗಿ ಮುಂದುವರಿಯುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸೆಪ್ಟಂಬರ್ 30ರ ಬಳಿಕ ಸರ್ಕಾರ ಕಾಲಾವಧಿಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ