AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Competition: ಮೇಲ್ಮನವಿಗೆ ಶೇ. 25 ಠೇವಣಿ, ಸುಳ್ಳು ಸ್ಟೇಟ್ಮೆಂಟ್​ಗೆ 5ಕೋಟಿ ದಂಡ; ಸ್ಪರ್ಧಾ ಕಾಯ್ದೆ ತಿದ್ದುಪಡಿಗೆ ಹೊಸ ಅಂಶಗಳು

Competition Amendment Act 2023: ಎನ್​ಸಿಎಲ್​ಎಟಿಗೆ ಮೇಲ್ಮನವಿ ಹೋಗುವ ಮುನ್ನ ಸಿಸಿಐ ವಿಧಿಸಿರುವ ದಂಡದ ಮೊತ್ತದ ಶೇ. 25ರಷ್ಟು ಹಣವನ್ನು ಠೇವಣಿ ಇಡಬೇಕೆಂದು ಸರ್ಕಾರ ಕಡ್ಡಾಯಗೊಳಿಸಿದೆ. ಅಲ್ಲದೇ, ಸುಳ್ಳು ದಾಖಲೆ ಅಥವಾ ಹೇಳಿಕೆಗಳನ್ನು ನೀಡಿದರೆ ಈಗಿರುವ 1 ಕೋಟಿ ರೂ ಬದಲು 5 ಕೋಟಿ ರೂ ದಂಡ ವಿಧಿಸಲು ನಿರ್ಧರಿಸಲಾಗಿದೆ.

Competition: ಮೇಲ್ಮನವಿಗೆ ಶೇ. 25 ಠೇವಣಿ, ಸುಳ್ಳು ಸ್ಟೇಟ್ಮೆಂಟ್​ಗೆ 5ಕೋಟಿ ದಂಡ; ಸ್ಪರ್ಧಾ ಕಾಯ್ದೆ ತಿದ್ದುಪಡಿಗೆ ಹೊಸ ಅಂಶಗಳು
ಸಿಸಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2023 | 3:08 PM

Share

ನವದೆಹಲಿ: ಭಾರತೀಯ ಸ್ಪರ್ಧಾ ಆಯೋಗ (CCI- Competition Commission of India) ಇದೀಗ ಹೆಚ್ಚೆಚ್ಚ ಪ್ರಕರಣಗಳ ಮೇಲೆ ನಿಗಾ ವಹಿಸುತ್ತಿದೆ. ಹಲವು ಕಂಪನಿಗಳಿಗೆ ದಂಡವನ್ನೂ ವಿಧಿಸಿದೆ. ಇತ್ತೀಚೆಗೆ ಗೂಗಲ್ ಮೇಲೆಯೂ ದಂಡ ವಿಧಿಸಿದ್ದು ನೆನಪಿರಬಹುದು. ಸಿಸಿಐ ಆದೇಶ ಪ್ರಶ್ನಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮಮನವಿ ನ್ಯಾಯಮಂಡಳಿ (NCLAT) ಮುಂದೆ ಮೇಲ್ಮನವಿಗೆ ಹೋಗುವ ಅವಕಾಶ ಇದೆ. ಇದೀಗ ಇಂಥ ಮೇಲ್ಮನವಿಗಳ ಅವಕಾಶವನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ತಡೆಯಲು ಸರಕಾರ ಕೆಲ ಕ್ರಮಗಳನ್ನು ಕೈಗೊಂಡಿದೆ. ಅದರಂತೆ, ಎನ್​ಸಿಎಲ್​ಎಟಿಗೆ ಮೇಲ್ಮನವಿ ಹೋಗುವ ಮುನ್ನ ಸಿಸಿಐ ವಿಧಿಸಿರುವ ದಂಡದ ಮೊತ್ತದ ಶೇ. 25ರಷ್ಟು ಹಣವನ್ನು ಠೇವಣಿ ಇಡಬೇಕೆಂದು ಸರ್ಕಾರ ಕಡ್ಡಾಯಗೊಳಿಸಿದೆ. ಅಲ್ಲದೇ, ಸುಳ್ಳು ದಾಖಲೆ ಅಥವಾ ಹೇಳಿಕೆಗಳನ್ನು ನೀಡಿದರೆ ಈಗಿರುವ 1 ಕೋಟಿ ರೂ ಬದಲು 5 ಕೋಟಿ ರೂ ದಂಡ ವಿಧಿಸಲು ನಿರ್ಧರಿಸಲಾಗಿದೆ.

ಇವು 2023ರ ಸ್ಪರ್ಧಾ ತಿದ್ದುಪಡಿ ಕಾಯ್ದೆ (Competition Amendment Act) ಅಡಿ ಪ್ರಸ್ತುತಪಡಿಸಲಾಗಿರುವ ಕೆಲ ಹೊಸ ಕಾನೂನುಗಳು. ಕಾರ್ಪೊರೇಟ್ ಅಫೇರ್ಸ್ ಸಚಿವಾಲಯ ಇದರ ಅಧಿಸೂಚನೆ ಹೊರಡಿಸಿದೆ. ಮೇಲೆ ತಿಳಿಸಿದ ಎರಡು ನಿಯಮಗಳು ಸೇರಿದಂತೆ ಇನ್ನೂ ಕೆಲವೊಂದಿಷ್ಟು ತಿದ್ದುಪಡಿಗಳನ್ನು ಕಾಯ್ದೆಗೆ ತರಲಾಗಿದೆ. ಈ ತಿದ್ದುಪಡಿ ಕಾಯ್ದೆ ಈ ಬಜೆಟ್ ಅಧಿವೇಶನದ ವೇಳೆ ಸಂಸತ್​ನಲ್ಲಿ ಅನುಮೋದನೆ ಪಡೆದಿತ್ತು. ಏಪ್ರಿಲ್ 11ರಿಂದಲೇ ಕಾಯ್ದೆ ಜಾರಿಯಲ್ಲಿದೆಯಾದರೂ ಮೇ 18ರಿಂದ ಹೊಸ ನಿಯಮಗಳು ಚಾಲ್ತಿಗೆ ಬಂದಿವೆ.

ಇದನ್ನೂ ಓದಿPlease Note: 2,000 ರೂ ನೋಟು ಸೆಪ್ಟಂಬರ್ 30ರ ಬಳಿಕ ಅಮಾನ್ಯಗೊಳ್ಳುತ್ತಾ? ಇಲ್ಲಿದೆ ಕೆಲ ವಾಸ್ತವ ಸಂಗತಿಗಳು

2023ರ ಸ್ಪರ್ಧಾ ತಿದ್ದುಪಡಿ ಕಾಯ್ದೆಯನ್ನು ಬಹಳ ತಜ್ಞರು ಸ್ವಾಗತಿಸಿದ್ದಾರೆ. ಸ್ಪರ್ಧಾತ್ಮಕತೆಗೆ ವಿರುದ್ಧವಾಗಿ ಮಾರುಕಟ್ಟೆಯಲ್ಲಿ ಬಿಗಿಹಿಡಿತ ಹೊಂದುವವರನ್ನು ಹೆಡೆಮುರಿ ಕಟ್ಟಲು ಸರ್ಕಾರಕ್ಕೆ ಈ ಕಾಯ್ದೆ ಒಳ್ಳೆಯ ಅಸ್ತ್ರವಾಗಿದೆ. ಈಗ ಸೇರಿಸಿರುವ ಹೊಸ ನಿಯಮಗಳೂ ಕೂಡ ಸ್ವಾಗತಾರ್ಹವಾಗಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸಿಸಿಐ ವಿಧಿಸಿದ ಶೇ. 25ರಷ್ಟು ದಂಡಮೊತ್ತವನ್ನು ಎನ್​ಸಿಎಲ್​ಟಿಗೆ ಮೇಲ್ಮನವಿ ಸಲ್ಲಿಸುವ ಮುನ್ನ ಠೇವಣಿ ಇಡಬೇಕೆಂದು ಮಾಡಲಾಗಿರುವ ನಿಯಮದಿಂದ ಅನಗತ್ಯ ಮೇಲ್ಮನವಿಗಳು ತಪ್ಪಲಿದೆ ಎಂದು ಟ್ಯಾಕ್ಸ್​ಮ್ಯಾನ್ ಕಂಪನಿಯ ಡಿಜಿಎಂ ರಚಿತ್ ಶರ್ಮಾ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿರೇಂದ್ರ ಪಪ್ಪಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ
ವಿರೇಂದ್ರ ಪಪ್ಪಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ
‘ತುಂಬಾ ಸಣ್ಣ ಜೀವನ, ಪಾಸಿಟಿವ್ ಆಗಿರೋಣ’; ರಾಗಿಣಿ ದ್ವಿವೇದಿ ಹೀಗ್ಯಾಕಂದ್ರು?
‘ತುಂಬಾ ಸಣ್ಣ ಜೀವನ, ಪಾಸಿಟಿವ್ ಆಗಿರೋಣ’; ರಾಗಿಣಿ ದ್ವಿವೇದಿ ಹೀಗ್ಯಾಕಂದ್ರು?
ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್​ಗೆ ಭರ್ಜರಿ ಜಯ
ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್​ಗೆ ಭರ್ಜರಿ ಜಯ
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!