Gold Rates: ಚಿನ್ನ ಮತ್ತೆ ದುಬಾರಿ; ಎರಡು ದಿನದಲ್ಲಿ 1,300 ರೂನಷ್ಟು ಏರಿಕೆ; ಬೆಳ್ಳಿಯೂ ಹಿಂದುಳಿದಿಲ್ಲ; ಇವತ್ತಿನ ದರಗಳೆಷ್ಟು, ನೋಡಿ ವಿವರ

Bullion Market 2023, May 5th: ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,000 ರುಪಾಯಿ ಗಟಿ ದಾಟಿದೆ. 10 ಗ್ರಾಮ್​ಗೆ 800 ರೂನಷ್ಟು ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ ಮೇ 5ರಂದು ಇನ್ನೂ 500 ರೂ ಜಾಸ್ತಿಯಾಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,180 ರುಪಾಯಿಗೆ ಏರಿದೆ. ಬೆಳ್ಳಿ ಬೆಲೆಯೂ ಸದ್ಯ ಗ್ರಾಮ್​ಗೆ 77.10 ರು ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Rates: ಚಿನ್ನ ಮತ್ತೆ ದುಬಾರಿ; ಎರಡು ದಿನದಲ್ಲಿ 1,300 ರೂನಷ್ಟು ಏರಿಕೆ; ಬೆಳ್ಳಿಯೂ ಹಿಂದುಳಿದಿಲ್ಲ; ಇವತ್ತಿನ ದರಗಳೆಷ್ಟು, ನೋಡಿ ವಿವರ
ಚಿನ್ನ

Updated on: May 05, 2023 | 5:00 AM

ಮುಖ್ಯಾಂಶಗಳು

  • ಭಾರತದಲ್ಲಿ ಮೆ 5ರಂದು 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 57,000 ರುಪಾಯಿ. 100 ಗ್ರಾಮ್ ಬೆಳ್ಳಿ ಬೆಲೆ 7,710 ರೂ ಇದೆ.
  • ಅಮೆರಿಕ ಮತ್ತು ದುಬೈನಲ್ಲಿ ಚಿನ್ನದ ಬೆಲೆ 51,000 ರೂ ಗಡಿ ಸಮೀಪ ಹೋಗಿದೆ. ಕೆಲ ವಿದೇಶಗಳಲ್ಲಿ ಬೆಲೆ 53,000 ರೂ ಗಡಿ ದಾಟಿದೆ.
  • ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 57,050 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,280 ರೂ ಇದೆ.

ಬೆಂಗಳೂರು: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಸತತವಾಗಿ ಏರಿಕೆ ಕಾಣತೊಡಗಿದೆ. ಚಿನ್ನ ಅಗ್ಗಗೊಂಡ ಸಮಯ ಮೀರಿ ಹೋಗಿ ಈಗ ಬೆಲೆ ಏರಿಕೆ ಬಿಸಿ ಕಾಣುವ ಟೈಮ್ ಭಾರತೀಯರದ್ದು. ಅಕ್ಷಯ ತೃತೀಯ ದಿನದಿಂದಲೂ ಚಿನ್ನದ ಬೆಲೆ ಬಹುತೇಕ ಇಳಿಕೆಯ ಹಾದಿಯಲ್ಲಿತ್ತು. ಈಗ ಕಳೆದ ಕೆಲ ದಿನಗಳಿಂದ ತೀವ್ರ ಮಟ್ಟದಲ್ಲಿ ಚಿನ್ನಕ್ಕೆ ಬೇಡಿಕೆ ಬಂದಿದೆ. ಭಾರತದಲ್ಲಿ ಮಾತ್ರವಲ್ಲ ಬಹುತೇಕ ಎಲ್ಲಾ ದೇಶಗಳಲ್ಲೂ ಚಿನ್ನದ ಬೆಲೆ ಹೆಚ್ಚುತ್ತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,180 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,710 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,050 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,280 ರುಪಾಯಿಯಲ್ಲಿ ಇದೆ.

ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ.

ಚಿನ್ನದ ಬೆಲೆ ಏರಿಳಿತಕ್ಕೆ ಏನು ಕಾರಣ?

ಅಮೆರಿಕದಲ್ಲಿ ಅಲ್ಲಿನ ಫೆಡರಲ್ ಬ್ಯಾಂಕು ಈ ಬಾರಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ. ಉದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಗಳು ಬಂದಿವೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ತುಟ್ಟಿಯಾಗುತ್ತಾ ಹೋಗಬಹುದು. ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: SBI Rules: ಕ್ಯಾಷ್​ಬ್ಯಾಕ್ ಸರ್ವಿಸ್: ಎಸ್​ಬಿಐನ ವಿವಿಧ ಕ್ರೆಡಿಟ್ ಕಾರ್ಡ್​ಗಳಲ್ಲಿ ನಿಯಮಗಳು ಬದಲಾಗಿವೆ; ತಿಳಿದಿರಲಿ

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 5ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,180 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 771 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,050 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,230 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 828 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 57,050 ರೂ
  • ಚೆನ್ನೈ: 57,500 ರೂ
  • ಮುಂಬೈ: 57,000 ರೂ
  • ದೆಹಲಿ: 57,150 ರೂ
  • ಕೋಲ್ಕತಾ: 57,000 ರೂ
  • ಕೇರಳ: 57,000 ರೂ
  • ಅಹ್ಮದಾಬಾದ್: 57,050 ರೂ
  • ಜೈಪುರ್: 57,150 ರೂ
  • ಲಕ್ನೋ: 57,150 ರೂ
  • ಭುವನೇಶ್ವರ್: 57,000 ರೂ

ಇದನ್ನೂ ಓದಿ: How Scams Work?: ನಕಲಿ ರಿವ್ಯೂ ಬರೆಯಿಸಿ ಹಣವನ್ನೂ ಕೊಟ್ಟು ಖೆಡ್ಡಾ ತೋಡುವ ವಂಚಕರು; ನಿತಿನ್ ಕಾಮತ್ ಬಿಚ್ಚಿಟ್ಟ ಭಯಾನಕ ಕ್ರಿಪ್ಟೋ ವೃತ್ತಾಂತ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,900 ರಿಂಗಿಟ್ (53,247 ರುಪಾಯಿ)
  • ದುಬೈ: 2282.5 ಡಿರಾಮ್ (50,819 ರುಪಾಯಿ)
  • ಅಮೆರಿಕ: 620 ಡಾಲರ್ (50,693 ರುಪಾಯಿ)
  • ಸಿಂಗಾಪುರ: 843 ಸಿಂಗಾಪುರ್ ಡಾಲರ್ (51,946 ರುಪಾಯಿ)
  • ಕತಾರ್: 2,350 ಕತಾರಿ ರಿಯಾಲ್ (52,784 ರೂ)
  • ಓಮನ್: 249.50 ಒಮಾನಿ ರಿಯಾಲ್ (53,052 ರುಪಾಯಿ)
  • ಕುವೇತ್: 194 ಕುವೇತಿ ದಿನಾರ್ (51,794 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,280 ರೂ
  • ಚೆನ್ನೈ: 8,280 ರೂ
  • ಮುಂಬೈ: 7,710 ರೂ
  • ದೆಹಲಿ: 7,710 ರೂ
  • ಕೋಲ್ಕತಾ: 7,710 ರೂ
  • ಕೇರಳ: 8,280 ರೂ
  • ಅಹ್ಮದಾಬಾದ್: 7,710 ರೂ
  • ಜೈಪುರ್: 7,710 ರೂ
  • ಲಕ್ನೋ: 7,710 ರೂ
  • ಭುವನೇಶ್ವರ್: 8,280 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us