AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price on 24th November: 8,000 ರೂ ಸಮೀಪಕ್ಕೆ ದೌಡಾಯಿಸಿದ ಚಿನ್ನದ ಬೆಲೆ

Bullion Market 2024 November 24th: ಚಿನ್ನದ ಬೆಲೆ ವಾರಾಂತ್ಯದಲ್ಲೂ ಹೆಚ್ಚಳವಾಗಿದೆ. ಗ್ರಾಮ್​ಗೆ 75 ರೂನಷ್ಟು ಬೆಲೆ ಏರಿಕೆ ಆಗಿದೆ. ಚಿನ್ನದ ಬೆಲೆ 10 ದಿನಗಳ ಹಿಂದೆ 6,935 ರೂ ಇತ್ತು. ಈಗ 7,300 ರೂ ಆಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಏರಿಕೆ ಆಗಿರುವುದು ಗ್ರಾಮ್​ಗೆ ಒಂದು ರೂ ಮಾತ್ರವೇ.

Gold Silver Price on 24th November: 8,000 ರೂ ಸಮೀಪಕ್ಕೆ ದೌಡಾಯಿಸಿದ ಚಿನ್ನದ ಬೆಲೆ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2024 | 10:07 AM

Share

ಬೆಂಗಳೂರು, ನವೆಂಬರ್ 24: ಚಿನ್ನದ ಬೆಲೆಯ ಏರಿಕೆ ವಾರಾಂತ್ಯದಲ್ಲೂ ಮುಂದುವರಿದಿದೆ. ಮೂರು ವಾರಗಳ ಬಳಿಕ ಚಿನ್ನದ ಬೆಲೆ 7,300 ರೂ ಗಡಿ ಮುಟ್ಟಿದೆ. ಅಪರಂಜಿ ಚಿನ್ನದ ಬೆಲೆ 8,000 ಗಡಿ ಸಮೀಪಕ್ಕೆ ನುಗ್ಗುತ್ತಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,000 ರೂ ಸಮೀಪಕ್ಕೆ ಹೋಗಿದೆ. ಇದೇ ವೇಳೆ, ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 73,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 79,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 73,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 24ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,640 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 59,730 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 92 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 79,640 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 92 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 73,000 ರೂ
  • ಚೆನ್ನೈ: 73,000 ರೂ
  • ಮುಂಬೈ: 73,000 ರೂ
  • ದೆಹಲಿ: 73,150 ರೂ
  • ಕೋಲ್ಕತಾ: 73,000 ರೂ
  • ಕೇರಳ: 73,000 ರೂ
  • ಅಹ್ಮದಾಬಾದ್: 73,050 ರೂ
  • ಜೈಪುರ್: 73,150 ರೂ
  • ಲಕ್ನೋ: 73,150 ರೂ
  • ಭುವನೇಶ್ವರ್: 73,000 ರೂ

ಇದನ್ನೂ ಓದಿ: Petrol Diesel Price on November 24: ಭಾರತದೆಲ್ಲೆಡೆ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,630 ರಿಂಗಿಟ್ (68,590 ರುಪಾಯಿ)
  • ದುಬೈ: 3,050 ಡಿರಾಮ್ (70,110 ರುಪಾಯಿ)
  • ಅಮೆರಿಕ: 780 ಡಾಲರ್ (65,860 ರುಪಾಯಿ)
  • ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (68,100 ರುಪಾಯಿ)
  • ಕತಾರ್: 3,075 ಕತಾರಿ ರಿಯಾಲ್ (71,200 ರೂ)
  • ಸೌದಿ ಅರೇಬಿಯಾ: 3,100 ಸೌದಿ ರಿಯಾಲ್ (69,710 ರುಪಾಯಿ)
  • ಓಮನ್: 323.50 ಒಮಾನಿ ರಿಯಾಲ್ (70,940 ರುಪಾಯಿ)
  • ಕುವೇತ್: 248.60 ಕುವೇತಿ ದಿನಾರ್ (68,180 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 9,200 ರೂ
  • ಚೆನ್ನೈ: 10,100 ರೂ
  • ಮುಂಬೈ: 9,200 ರೂ
  • ದೆಹಲಿ: 9,200 ರೂ
  • ಕೋಲ್ಕತಾ: 9,200 ರೂ
  • ಕೇರಳ: 10,100 ರೂ
  • ಅಹ್ಮದಾಬಾದ್: 9,200 ರೂ
  • ಜೈಪುರ್: 9,200 ರೂ
  • ಲಕ್ನೋ: 9,200 ರೂ
  • ಭುವನೇಶ್ವರ್: 10,100 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮತ್ತೆ ಭೂಕಂಪನ; ಸ್ಥಳೀಯರಲ್ಲಿ ಆತಂಕ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ