Gold Silver Price on 5th September: ಚಿನ್ನದ ಬೆಲೆ ಮತ್ತೆ ಅಲ್ಪ ಇಳಿಕೆ; ಬೆಳ್ಳಿ ಗ್ರಾಮ್​ಗೆ 85 ರೂ; ಇಲ್ಲಿದೆ ಪೂರ್ಣ ಪಟ್ಟಿ

Bullion Market 2024 September 5th: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಇಂದು ಅಪರಂಜಿ ಚಿನ್ನದ ಬೆಲೆ 7,275 ರೂಗೆ ಇಳಿದಿದೆ. ಬೆಳ್ಳಿ ಬೆಲೆ 85 ರೂನಲ್ಲಿ ಮುಂದುವರಿದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 83 ರೂ ಇದೆ. ವಿದೇಶಗಳ ಕೆಲವೆಡೆ ಚಿನ್ನದ ಬೆಲೆಯಲ್ಲಿ ತುಸು ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಚಿನ್ನ, ಬೆಳ್ಳಿ ದರ ಏರಿಕೆ ಸಾಧ್ಯತೆ ಇದೆ.

Gold Silver Price on 5th September: ಚಿನ್ನದ ಬೆಲೆ ಮತ್ತೆ ಅಲ್ಪ ಇಳಿಕೆ; ಬೆಳ್ಳಿ ಗ್ರಾಮ್​ಗೆ 85 ರೂ; ಇಲ್ಲಿದೆ ಪೂರ್ಣ ಪಟ್ಟಿ
ಚಿನ್ನ

Updated on: Sep 05, 2024 | 10:18 AM

ಬೆಂಗಳೂರು, ಸೆಪ್ಟಂಬರ್ 5: ಭಾರತದ ವಿವಿಧೆಡೆ ಚಿನ್ನದ ಬೆಲೆ ಇಳಿಕೆ ಮುಂದುವರಿದಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. ನಿನ್ನೆ ಗ್ರಾಮ್​ಗೆ ಒಂದು ರೂನಷ್ಟು ಕಡಿಮೆ ಆಗಿದ್ದ ಚಿನ್ನದ ಬೆಲೆ ಇಂದು ಅಷ್ಟೇ ಪ್ರಮಾಣದಲ್ಲಿ ಬೆಲೆ ಇಳಿಕೆ ಕಂಡಿದೆ. ವಿದೇಶಗಳಲ್ಲಿ ಕೆಲವೆಡೆ ಬೆಲೆ ಇಳಿಕೆಯಾದರೆ, ಇನ್ನೂ ಕೆಲವೆಡೆ ತುಸು ದುಬಾರಿಗೊಂಡಿದೆ. ತಜ್ಞರ ಪ್ರಕಾರ ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರ ಇಳಿಸುವ ಖಚಿತ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಬಹುದು. ಪರಿಣಾಮವಾಗಿ ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಏರಿಕೆ ನಿರೀಕ್ಷಿಸಬಹುದು ಎನ್ನಲಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,680 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,680 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,300 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಸೆಪ್ಟೆಂಬರ್ 5ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,690 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,760 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 850 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,680 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,750 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 830 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 66,680 ರೂ
  • ಚೆನ್ನೈ: 66,680 ರೂ
  • ಮುಂಬೈ: 66,680 ರೂ
  • ದೆಹಲಿ: 66,830 ರೂ
  • ಕೋಲ್ಕತಾ: 66,680 ರೂ
  • ಕೇರಳ: 66,680 ರೂ
  • ಅಹ್ಮದಾಬಾದ್: 66,730 ರೂ
  • ಜೈಪುರ್: 66,830 ರೂ
  • ಲಕ್ನೋ: 66,830 ರೂ
  • ಭುವನೇಶ್ವರ್: 66,680 ರೂ

ಇದನ್ನೂ ಓದಿ: Petrol Diesel Price on September 05: ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 3,450 ರಿಂಗಿಟ್ (66,870 ರುಪಾಯಿ)
  • ದುಬೈ: 2,785 ಡಿರಾಮ್ (63,670 ರುಪಾಯಿ)
  • ಅಮೆರಿಕ: 760 ಡಾಲರ್ (63,820 ರುಪಾಯಿ)
  • ಸಿಂಗಾಪುರ: 1,017 ಸಿಂಗಾಪುರ್ ಡಾಲರ್ (65,530 ರುಪಾಯಿ)
  • ಕತಾರ್: 2,845 ಕತಾರಿ ರಿಯಾಲ್ (65,530 ರೂ)
  • ಸೌದಿ ಅರೇಬಿಯಾ: 2,860 ಸೌದಿ ರಿಯಾಲ್ (63,980 ರುಪಾಯಿ)
  • ಓಮನ್: 297.50 ಒಮಾನಿ ರಿಯಾಲ್ (64,890 ರುಪಾಯಿ)
  • ಕುವೇತ್: 227.40 ಕುವೇತಿ ದಿನಾರ್ (62,540 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,300 ರೂ
  • ಚೆನ್ನೈ: 9,000 ರೂ
  • ಮುಂಬೈ: 8,500 ರೂ
  • ದೆಹಲಿ: 8,500 ರೂ
  • ಕೋಲ್ಕತಾ: 8,500 ರೂ
  • ಕೇರಳ: 9,000 ರೂ
  • ಅಹ್ಮದಾಬಾದ್: 8,500 ರೂ
  • ಜೈಪುರ್: 8,500 ರೂ
  • ಲಕ್ನೋ: 8,500 ರೂ
  • ಭುವನೇಶ್ವರ್: 9,000 ರೂ

ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us