AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates 29 October: ಬೆಳ್ಳಿ ಬೆಲೆ 5 ರೂ ಕುಸಿತ; ಸತತ ನಾಲ್ಕು ಏರಿಕೆ ಬಳಿಕ ಶಾಂತಗೊಂಡ ಚಿನ್ನದ ಬೆಲೆ

Gold Price 29 October 2026: ಚಿನ್ನದ ಬೆಲೆ ಇವತ್ತು ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆಯಲ್ಲಿ 5 ರೂ ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ 13,195 ರೂ ಇದೆ. ಅಪರಂಜಿ ಚಿನ್ನದ ಬೆಲೆ 14,395 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 215 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 220 ರೂ ಇದೆ.

Gold Rates 29 October: ಬೆಳ್ಳಿ ಬೆಲೆ 5 ರೂ ಕುಸಿತ; ಸತತ ನಾಲ್ಕು ಏರಿಕೆ ಬಳಿಕ ಶಾಂತಗೊಂಡ ಚಿನ್ನದ ಬೆಲೆ
ಚಿನ್ನImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2026 | 1:38 PM

Share

ನವದೆಹಲಿ, ಅಕ್ಟೋಬರ್ 29: ಭಾರತದಲ್ಲಿ ಚಿನ್ನದ ಬೆಲೆಯ ಸತತ ಏರಿಕೆಗೆ ಇವತ್ತು ಬ್ರೇಕ್ ಬಿದ್ದಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಕುಸಿತವಾಗಿದೆ. ಚಿನ್ನದ ಬೆಲೆ ಇವತ್ತು ಯಾವ ಬದಲಾವಣೆ ಹೊಂದಿಲ್ಲ. ವಿದೇಶಗಳಲ್ಲಿ ಹಲವೆಡೆ ಇದರ ಬೆಲೆ ಇಳಿದಿದೆ. ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಲ್ಪ ಇಳಿಕೆ ಪಡೆದಿವೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,31,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,43,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 21,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,31,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 21,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 22,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 29ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,395
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,195
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,796
  • ಬೆಳ್ಳಿ ಬೆಲೆ 1 ಗ್ರಾಂಗೆ: 215 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,195 ರೂ
  • ಚೆನ್ನೈ: 13,195 ರೂ
  • ಮುಂಬೈ: 13,195 ರೂ
  • ದೆಹಲಿ: 13,210
  • ಕೋಲ್ಕತಾ: 13,195 ರೂ
  • ಕೇರಳ: 13,195 ರೂ
  • ಅಹ್ಮದಾಬಾದ್: 13,200 ರೂ
  • ಜೈಪುರ್: 13,210
  • ಲಕ್ನೋ: 13,210
  • ಭುವನೇಶ್ವರ್: 13,195 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 129.52 ಡಾಲರ್ (12,344 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.698 ಡಾಲರ್ (162 ರುಪಾಯಿ)

ಇದನ್ನೂ ಓದಿ: ಬಿಎಲ್​ಎಸ್ ಪಾಲಿಮರ್ಸ್ ಐಪಿಒ; ಇವತ್ತು ಕೊನೆಯ ದಿನ; 1.7 ಕೋಟಿ ಷೇರು ವಿತರಣೆ, 60ಕ್ಕೂ ಅಧಿಕ ಪಟ್ಟು ಸಬ್​ಸ್ಕ್ರಿಪ್ಷನ್ಸ್

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 14,345 ರುಪಾಯಿ
  • ಮಲೇಷ್ಯಾ: 544 ರಿಂಗಿಟ್ (12,777 ರುಪಾಯಿ)
  • ದುಬೈ: 488 ಡಿರಾಮ್ (12,670 ರುಪಾಯಿ)
  • ಅಮೆರಿಕ: 133.50 ಡಾಲರ್ (12,729 ರುಪಾಯಿ)
  • ಸಿಂಗಾಪುರ: 177.30 ಸಿಂಗಾಪುರ್ ಡಾಲರ್ (13,198 ರುಪಾಯಿ)
  • ಕತಾರ್: 488.50 ಕತಾರಿ ರಿಯಾಲ್ (12,776 ರೂ)
  • ಸೌದಿ ಅರೇಬಿಯಾ: 501 ಸೌದಿ ರಿಯಾಲ್ (12,728 ರುಪಾಯಿ)
  • ಓಮನ್: 51.90 ಒಮಾನಿ ರಿಯಾಲ್ (12,852 ರುಪಾಯಿ)
  • ಕುವೇತ್: 40.82 ಕುವೇತಿ ದಿನಾರ್ (12,626 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 215 ರೂ
  • ಚೆನ್ನೈ: 220 ರೂ
  • ಮುಂಬೈ: 215 ರೂ
  • ದೆಹಲಿ: 215 ರೂ
  • ಕೋಲ್ಕತಾ: 215 ರೂ
  • ಕೇರಳ: 220 ರೂ
  • ಅಹ್ಮದಾಬಾದ್: 215 ರೂ
  • ಜೈಪುರ್: 215 ರೂ
  • ಲಕ್ನೋ: 215 ರೂ
  • ಭುವನೇಶ್ವರ್: 220 ರೂ
  • ಪುಣೆ: 215

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More