Cheap Gold: ಯಾವ್ಯಾವ ದೇಶಗಳಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ? ಭಾರತಕ್ಕಿಂತ ಬಹಳ ಅಗ್ಗ ಇಲ್ಲಿನ ಚಿನ್ನ

Countries With Low Gold Rates: ಭಾರತದಲ್ಲಿ ಚಿನ್ನದ ಬೆಲೆ (22 ಕ್ಯಾರಟ್) 10 ಗ್ರಾಮ್​ಗೆ 55,000 ರೂ ಆಸುಪಾಸಿನಲ್ಲಿದೆ. 50,000 ರೂಗಿಂತ ಕಡಿಮೆ ಬೆಲೆಗೆ ಚಿನ್ನ ಸಿಗುವ ಹಲವು ದೇಶಗಳಿವೆ. ಅಂಥ ಕೆಲ ದೇಶಗಳತ್ತ ಒಂದು ನೋಟ.

Cheap Gold: ಯಾವ್ಯಾವ ದೇಶಗಳಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ? ಭಾರತಕ್ಕಿಂತ ಬಹಳ ಅಗ್ಗ ಇಲ್ಲಿನ ಚಿನ್ನ
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 12, 2023 | 6:57 PM

ಶತಶತಮಾನಗಳಿಂದ ಚಿನ್ನ ಮತ್ತು ಮನುಷ್ಯರ ಮಧ್ಯೆ ಗಾಢ ಬಂಧ ಇದೆ. ಚಿನ್ನ ಸೌಂದರ್ಯ ಹೆಚ್ಚಿಸುವ ವಸ್ತು. ಹೀಗಾಗಿ, ಚಿನ್ನವೆಂದರೆ ಮನುಷ್ಯನಿಗೆ ಹೆಚ್ಚು ಪ್ರೀತಿ. ಅದರಲ್ಲೂ ಭಾರತ ಮತ್ತು ಚೀನಾ ಜನರಿಗೆ ಚಿನ್ನ ಅಂದರೆ ಅತೀವ ಪ್ರೇಮ. ಭೂಮಿಯಲ್ಲಿ ಸೀಮಿತ ಪ್ರಮಾಣದಲ್ಲಿ ಚಿನ್ನ ಇರುವುದರಿಂದ ಅದಕ್ಕೆ ಇರುವ ಬೇಡಿಕೆ ದಿನೇದಿನೇ ಹೆಚ್ಚುತ್ತಲೇ ಹೋಗುತ್ತದೆ. ಭಾರತದಲ್ಲಿ 22 ಕೆರಟ್​ನ ಆಭರಣ ಚಿನ್ನದ ಬೆಲೆ (Gold Rates) ಇದೀಗ 55,000 ರೂ ಆಸುಪಾಸಿನಲ್ಲಿದೆ. ಭಾರತದಲ್ಲಿ ತೆರಿಗೆ ಹೆಚ್ಚು ಇರುವ ಕಾರಣ ಚಿನ್ನ ದುಬಾರಿಯಾಗಿದೆ. ಬೇರೆ ಕೆಲ ದೇಶಗಳಲ್ಲಿ ಚಿನ್ನದ ಬೆಲೆ ಬಹಳ ಕಡಿಮೆ ಇದೆ.

ಕಾಂಬೋಡಿಯಾದಲ್ಲಿ ಚಿನ್ನ ಬಹಳ ಅಗ್ಗ:

ಅಗ್ಗದ ಚಿನ್ನದ ವಿಷಯಕ್ಕೆ ಬಂದರೆ, ಕಾಂಬೋಡಿಯಾದಲ್ಲಿ ಬೆಲೆ ಬಹಳ ಕಡಿಮೆ. ಈಶಾನ್ಯ ಏಷ್ಯನ್ ಭಾಗದಲ್ಲಿ ಥಾಯ್ಲೆಂಡ್ ಮತ್ತು ವಿಯೆಟ್ನಾಂ ನಡುವೆ ಬರುವ, ಹಾಗೂ ವಿಶ್ವದ ಅತಿದೊಡ್ಡ ಹಿಂದೂ ದೇವಸ್ಥಾನ ಇರುವ ಕಾಂಬೋಡಿಯಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 45,735.46 ರೂ ಇದೆ.

ಇದನ್ನೂ ಓದಿGold Silver Price on 12 July: ದುಬೈನಲ್ಲಿ ತುಸು ಏರಿಕೆ, ಕೆಲವೆಡೆ ಇಳಿಕೆ; ಭಾರತ ಹಾಗೂ ವಿವಿಧೆಡೆ ಎಷ್ಟಿದೆ ಚಿನ್ನ ಮತ್ತು ಬೆಳ್ಳಿ ಬೆಲೆ

ಹಾಂಕಾಂಗ್​ನಲ್ಲಿ ಚಿನ್ನದ ಬೆಲೆ 47,000 ರೂಗಿಂತ ಕಡಿಮೆ

ಭಾರತೀಯರು ಸಾಕಷ್ಟು ಪ್ರಮಾಣದಲ್ಲಿ ಇರುವ ಹಾಗೂ ಬಹಳಷ್ಟು ಭಾರತೀಯ ಪ್ರವಾಸಿಗರು ಹೋಗಿ ಬರುವ ಹಾಂಕಾಂಗ್​ನಲ್ಲಿ ಚಿನ್ನದ ಬೆಲೆ ಕಡಿಮೆ ಇದೆ. ವಿಶ್ವದ ಅತ್ಯಂತ ಸಕ್ರಿಯ ಬುಲಿಯನ್ ಮಾರುಕಟ್ಟೆ ಇಲ್ಲಿನದು. ಸದ್ಯ ಇಲ್ಲಿನ ಬೆಲೆಯನ್ನು ಭಾರತೀಯ ರೂಪಾಯಿಯಲ್ಲಿ ಪರಿಗಣಿಸಿದಾಗ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನ 46,867 ರೂಕ ಆಗುತ್ತದೆ.

ಸ್ವಿಟ್ಜರ್ಲೆಂಡ್ ವಾಚಿಗಷ್ಟೇ ಅಲ್ಲ ಚಿನ್ನಕ್ಕೂ ಫೇಮಸ್

ಸ್ವಿಟ್ಜರ್ಲೆಂಡ್‌ನ ಚಿನ್ನದ ವಿನ್ಯಾಸಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಪ್ರಪಂಚದಾದ್ಯಂತ ಅದರ ವಿನ್ಯಾಸಕಾರರ ಕೈಗಡಿಯಾರಗಳಿಗೆ ಇದು ಬಹಳ ಪ್ರಸಿದ್ಧವಾಗಿದೆ. ಈ ದೇಶದಲ್ಲಿ ಉತ್ತಮ ಚಿನ್ನದ ವ್ಯಾಪಾರವಿದೆ. ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ನಗರದಲ್ಲಿ ಜನರು ಉತ್ತಮ ಮತ್ತು ಉತ್ತಮವಾದ ಚಿನ್ನವನ್ನು ಕಾಣಬಹುದು. ಇಲ್ಲಿ ಕೈಯಿಂದ ತಯಾರಿಸಿದ ಡಿಸೈನರ್ ಆಭರಣಗಳ ಜೊತೆಗೆ ನಿಮಗೆ ಸಾಕಷ್ಟು ವೈವಿಧ್ಯತೆಗಳು ಸಿಗುತ್ತವೆ. ಸ್ವಿಟ್ಜರ್ಲೆಂಡ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 46,899 ರೂ.

ಇದನ್ನೂ ಓದಿTCS: ಟಿಸಿಎಸ್​ಗೆ ಮೊದಲ ಕ್ವಾರ್ಟರ್​ನಲ್ಲಿ ನಿರೀಕ್ಷೆಮೀರಿದ ಲಾಭ; ಷೇರಿಗೆ 9 ರೂ ಡಿವಿಡೆಂಡ್ ಘೋಷಣೆ

ಯುಎಇಯಲ್ಲಿ ಚಿನ್ನದ ಬೆಲೆ ಬಹಳ ಕಡಿಮೆ

ದುಬೈ, ಅಬುಧಾಬಿ, ಶಾರ್ಜಾ ಒಳಗೊಂಡಿರುವ ಯುಎಇ ದೇಶದಲ್ಲಿ ಚಿನ್ನ ಗುಣಮಟ್ಟದಲ್ಲಿ ಮತ್ತು ಬೆಲೆಯಲ್ಲಿ ಬೆಸ್ಟ್. ದುಬೈನಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದೆಲ್ಲಾ ದುಬೈನಿಂದ ಭಾರತಕ್ಕೆ ಬರುವ ಜನರು ಕೈಯಲ್ಲಿ ಒಂದಿಷ್ಟು ಚಿನ್ನ ತಂದೇ ತರುತ್ತಿದ್ದರು. ಅಷ್ಟರಮಟ್ಟಿಗೆ ದುಬೈ ಚಿನ್ನ ಫೇಮಸ್. ದುಬೈ ಚಿನ್ನದ ಶುದ್ಧತೆ ಹೆಚ್ಚು ಎಂದು ಪರಿಗಣಿಸಲಾಗಿದೆ. ಅಂದರೆ, ದುಬೈನ ಚಿನ್ನವು ಇತರ ದೇಶಗಳಿಗಿಂತ ಉತ್ತಮವಾಗಿದೆ ಎಂದು ನಂಬಲಾಗಿದೆ. ಅದರಲ್ಲೂ ದುಬೈನಲ್ಲಿರುವ ಡೇರಾ ಎಂಬ ಪ್ರದೇಶವು ಚಿನ್ನದ ಅಡ್ಡೆ ಎಂದೇ ಖ್ಯಾತವಾಗಿದೆ. ಅಲ್ಲಿರುವ ಕೆಲವು ಪ್ಲಾಟ್‌ಫಾರ್ಮ್‌ಗಳಿಂದ ನೀವು ಉತ್ತಮ ಮತ್ತು ಅಗ್ಗದ ಚಿನ್ನವನ್ನು ಖರೀದಿಸಬಹುದು. ನಿಯಮದ ಪ್ರಕಾರ, ಪುರುಷರು 20 ಗ್ರಾಂ ಮತ್ತು ಮಹಿಳೆಯರು 40 ಗ್ರಾಂ ಚಿನ್ನವನ್ನು ಯುಎಇಯಿಂದ ತರಬಹುದು. ಯುಎಇ ಚಿನ್ನದ ಬೆಲೆಯ ಬಗ್ಗೆ ಮಾತನಾಡುವುದಾದರೆ, ಭಾರತೀಯ ರೂಪಾಯಿಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ₹ 48,793 ರೂ ಇದೆ.

ಥಾಯ್ಲೆಂಡ್​ನಲ್ಲೂ ಚಿನ್ನದ ಬೆಲೆ ಕಡಿಮೆ

ದುಬೈ ನಂತರ ನೀವು ಥೈಲ್ಯಾಂಡ್‌ನಲ್ಲಿ ಅಗ್ಗದ ಚಿನ್ನವನ್ನು ಕಾಣಬಹುದು. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನೀವು ಉತ್ತಮ ಗುಣಮಟ್ಟದ ಚಿನ್ನವನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಇಲ್ಲಿ ನೀವು ತುಂಬಾ ಕಡಿಮೆ ಮಾರ್ಜಿನ್ ಮತ್ತು ಉತ್ತಮ ವೈವಿಧ್ಯತೆಯಲ್ಲಿ ಚಿನ್ನವನ್ನು ಪಡೆಯುತ್ತೀರಿ. ಥಾಯ್ಲೆಂಡ್‌ನ ಚೈನಾಟೌನ್‌ನಲ್ಲಿರುವ ಯಾವೋರತ್ ರಸ್ತೆ ಚಿನ್ನವನ್ನು ಖರೀದಿಸಲು ಹೆಚ್ಚು ಆದ್ಯತೆಯ ಸ್ಥಳಗಳಲ್ಲಿ ಒಂದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ