ದೇಶದ ಸಣ್ಣ ವ್ಯಾಪಾರಿಗಳಿಗೆ ಗೂಗಲ್ ಪೇ (Google Pay) ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಗೂಗಲ್ ಪೇ ಮೂಲಕವು ಸಾಲ ಪಡೆಯಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ. ಗೂಗಲ್ ಇಂಡಿಯಾ ಇಂದು ಒಂದು ಮಹತ್ವದ ಘೋಷಣೆಯನ್ನು ಮಾಡಿದೆ. ಇನ್ನು ಮುಂದೆ ಭಾರತದಲ್ಲಿನ ವ್ಯಾಪಾರಿಗಳಿಗೆ ಸಾಮಾನ್ಯವಾಗಿ ಸಣ್ಣ ಮಟ್ಟದ ಸಾಲಗಳನ್ನು ನೀಡಲಾಗುವುದು. ಹಣ ವರ್ಗಾವಣೆ ತಂತ್ರಗಳಲ್ಲಿ ಒಂದಾದ ಜಿಪೇ ಅಪ್ಲಿಕೇಶನ್‌ನಲ್ಲಿ ಸ್ಯಾಚೆಟ್ ಸಾಲಗಳನ್ನು ನೀಡಲು ಆರಂಭಿಸಿದೆ. ಸ್ಯಾಚೆಟ್ ಸಾಲ ಎಂದರೆ ನ್ಯಾನೊ-ಕ್ರೆಡಿಟ್ ಅಥವಾ ಬೈಟ್-ಗಾತ್ರದ ಸಾಲಗಳ ಒಂದು ರೂಪವಾಗಿದ್ದು, ಇದು ತಕ್ಷಣದಲ್ಲಿ ಸಿಗುವ ಲೋನ್ ಆಗಿರುತ್ತದೆ. ಈ ಸ್ಯಾಚೆಟ್ ಲೋನ್ನ್ನು 10 ಸಾವಿರದಿಂದ 1ಲಕ್ಷದವರೆಗೆ ಪಡೆಯಬಹುದು. ಆದರೆ ಗೂಗಲ್ ಪೇನಲ್ಲಿ ₹ 15,000ದವರೆಗೆ ಪಡೆಯಬಹುದು.
ಗೂಗಲ್ ಪೇ ನೀಡುವ ₹ 15,000 ಸಾಲವನ್ನು ತಿಂಗಳಿಗೆ 111 ರೂ.ನಂತೆ ಮರುಪಾವತಿ ಮಾಡಬೇಕು. ಇನ್ನು ಸಾಲ ನೀಡಲು ಗೂಗಲ್ ಪೇ DMI ಫೈನಾನ್ಸ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಸಣ್ಣ ವ್ಯಾಪಾರಿಗಳಿಗೆ ಸ್ವಂತ ಉದ್ಯೋಗವನ್ನು ಮಾಡಲು ಅಥವಾ ಅವರ ಸಂಕಷ್ಟ ಕಾಲಕ್ಕೆ ಇದು ಸಹಾಯವಾಗಿದೆ ಎಂದು ಹೇಳಿದೆ. ಇದರ ಜತೆಗೆ ಗೂಗಲ್ ಪೇ ePayLater ಸಹಭಾಗಿತ್ವದಲ್ಲಿ ವ್ಯಾಪಾರಿಗಳಿಗೆ ಕ್ರೆಡಿಟ್ ಲೈನ್‌ಗಳನ್ನು ಸಕ್ರೀಯಗೊಳಿಸಲಿದೆ.
ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಪಡೆಯಲು ಆನ್‌ಲೈನ್ ಮತ್ತು ಆಫ್‌ಲೈನ್ ವಿತರಕರಲ್ಲಿ ಈ ಸಾಲವನ್ನು ಬಳಸಿಕೊಳ್ಳಬಹುದು. ಇದರ ಜತೆಗೆ ಈಗಾಗಲೇ ಗೂಗಲ್ ಇಂಡಿಯಾ ICICI ಬ್ಯಾಂಕ್ ಸಹಯೋಗದೊಂದಿಗೆ UPI ಮೇಲೆ ಕ್ರೆಡಿಟ್ ಲೈನ್‌ಗಳನ್ನು ಪ್ರಾರಂಭಿಸಿದೆ. ಇನ್ನು Axis ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದುವ ಮೂಲಕ ಗೂಗಲ್ ಪೇ ವೈಯಕ್ತಿಕ ಸಾಲಗಳ ಪೋರ್ಟ್‌ಫೋಲಿಯೊವನ್ನು ನೀಡುತ್ತದೆ. ಇನ್ನು ಗೂಗಲ್ ಪೇ ವೈಯಕ್ತಿಕ ಸಾಲಗಳ ಪೋರ್ಟ್‌ಫೋಲಿಯೊವನ್ನು ಗೂಗಲ್ ಇಂಡಿಯಾಕ್ಕೂ ವಿಸ್ತರಿಸಿದೆ.
ಇದನ್ನೂ ಓದಿ: ಗೂಗಲ್ ಪೇ ಯುಪಿಐ ಲೈಟ್ನಲ್ಲಿ ಪಿನ್ ಇಲ್ಲದೇ ಹಣ ಪಾವತಿಸಿ
ಗೂಗಲ್ ಪೇ 12 ತಿಂಗಳಲ್ಲಿ ಯುಪಿಐ ಮೂಲಕ ₹ 167 ಲಕ್ಷ ಕೋಟಿ ಮೌಲ್ಯಗಳ ವ್ಯವಹಾರ ನಡೆಸಿದೆ ಎಂದು ಗೂಗಲ್ ಪೇ ಉಪಾಧ್ಯಕ್ಷ ಅಂಬರೀಶ್ ಕೆಂಗೆ ತಿಳಿಸಿದ್ದಾರೆ. ಈ ಲೋನ್ ಪಡೆಯಲು ಮಾಸಿಕ ಆದಾಯದ ₹ 30,000 ಕ್ಕಿಂತ ಕಡಿಮೆ ಇರಬೇಕು. ಜತೆಗೆ ಎರಡು ಶ್ರೇಣಿಗಳಲ್ಲಿ ನೀಡಲಾಗುತ್ತದೆ. ಒಂದು ಪಟ್ಟಣದ ಒಳಗೆ ವ್ಯಾಪಾರ ಮಾಡುವವರು ಹಾಗೂ ಅದರಿಂದ ಹೊರಗೆವ್ಯಾಪಾರ ಮಾಡುವವರು. ಹೀಗೆ ಎರಡು ಶ್ರೇಣಿಗಳಲ್ಲಿ ನೀಡಲಾಗುವುದು. ಇನ್ನು ಗೂಗಲ್ ಇಂಡಿಯಾ ಸಣ್ಣ ವ್ಯಾಪರಿಗಳಿಗೆ ಹಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Thu, 19 October 23