Google Layoffs: ಗೂಗಲ್​​ನ ಆಂಡ್ರಾಯ್ಡ್, ಪಿಕ್ಸೆಲ್, ಕ್ರೋಮ್ ಟೀಮ್​​ಗಳಿಂದ ನೂರಾರು ಉದ್ಯೋಗಿಗಳ ಲೇಆಫ್

Hundreds of Google employees asked to resign: ಗೂಗಲ್​ನ ಪ್ಲಾಟ್​ಫಾರ್ಮ್ಸ್ ಮತ್ತು ಡಿವೈಸ್​​ಗಳ ಘಟಕದಿಂದ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಆಂಡ್ರಾಯ್ಡ್ ಸಾಫ್ಟ್​​ವೇರ್, ಪಿಕ್ಸೆಲ್ ಫೋನ್, ಕ್ರೋಮ್ ಬ್ರೌಸರ್ ಉತ್ಪನ್ನಗಳನ್ನು ನಿಭಾಯಿಸುವ ತಂಡಗಳಲ್ಲಿ ಈ ಲೇ ಆಫ್ ಆಗುತ್ತಿದೆ. ಆದರೆ, ಎಷ್ಟು ಮಂದಿಯನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎಂಬ ಮಾಹಿತಿ ಹೊರಬಂದಿಲ್ಲ.

Google Layoffs: ಗೂಗಲ್​​ನ ಆಂಡ್ರಾಯ್ಡ್, ಪಿಕ್ಸೆಲ್, ಕ್ರೋಮ್ ಟೀಮ್​​ಗಳಿಂದ ನೂರಾರು ಉದ್ಯೋಗಿಗಳ ಲೇಆಫ್
ಗೂಗಲ್

Updated on: Apr 11, 2025 | 2:22 PM

ಕ್ಯಾಲಿಫೋರ್ನಿಯಾ, ಏಪ್ರಿಲ್ 11: ಗೂಗಲ್ ಸಂಸ್ಥೆಯಲ್ಲಿ ಹೊಸ ಸುತ್ತಿನ ಲೇ ಆಫ್ (Google layoffs) ನಡೆಯುತ್ತಿದೆ. ಅದರ ಪ್ಲಾಟ್​ಫಾರ್ಮ್ಸ್ ಮತ್ತು ಡಿವೈಸ್ ಯೂನಿಟ್​​​ನಿಂದ (Google Platforms and Devices Unit) ನೂರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬಂದಿದೆ. ದಿ ಇನ್ಫಾರ್ಮೇಶನ್ ಎನ್ನುವ ವೆಬ್​​ಸೈಟ್​​ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಪ್ಲಾಟ್​​ಫಾರ್ಮ್ ಮತ್ತು ಡಿವೈಸ್ ಯೂನಿಟ್​​ನಲ್ಲಿರುವ ಉದ್ಯೋಗಿಗಳು ಆಂಡ್ರಾಯ್ಡ್ ಸಾಫ್ಟ್​​ವೇರ್, ಪಿಕ್ಸೆಲ್ ಫೋನ್, ಕ್ರೋಮ್ ಬ್ರೌಸರ್ ಇತ್ಯಾದಿ ಉತ್ಪನ್ನಗಳನ್ನು ನಿರ್ವಹಿಸುತ್ತಾರೆ. ಇವರಲ್ಲಿ ನೂರಾರು ಮಂದಿಯನ್ನು ಕೆಲಸ ಬಿಡುವಂತೆ ಗೂಗಲ್ ಮ್ಯಾನೇಜ್ಮೆಂಟ್ ತಿಳಿಸಿದೆಯಂತೆ.

ಆದರೆ, ಎಷ್ಟು ಮಂದಿಯ ಲೇ ಆಫ್ ಮಾಡಲಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಗೂಗಲ್​​ನಿಂದ ಅಧಿಕೃತವಾಗಿ ಯಾವ ಮಾಹಿತಿಯೂ ಬಂದಿಲ್ಲ. ಆದರೆ, ಉದ್ಯೋಗಿಗಳಿಗೆ ಸ್ವ ಇಚ್ಛೆಯಿಂದ ಕೆಲಸ ಬಿಡುವ ಅವಕಾಶವನ್ನು ಗೂಗಲ್ ಕೆಲ ತಿಂಗಳ ಹಿಂದೆ ಆಫರ್ ಮಾಡಿತ್ತು. ಆ ಸಂದರ್ಭದಲ್ಲಿ ಗೂಗಲ್​​ನಲ್ಲಿ ಹೆಚ್ಚುವರಿ ಲೇ ಆಫ್ ಮಾಡುವ ಸುಳಿವನ್ನು ಗೂಗಲ್ ವಕ್ತಾರರು ಹೊರಹಾಕಿದ್ದರು.

ಇದನ್ನೂ ಓದಿ: ನಿನ್ನಂಥ ಅಪ್ಪ ಇಲ್ಲ… ಮಕ್ಕಳಿಗೆ ನೂರಕ್ಕೆ ಒಂದು ರುಪಾಯಿಯೂ ಕೊಡದ ಬಿಲ್ ಗೇಟ್ಸ್; ಮಕ್ಕಳು ಏನಂತಾರೆ ನೋಡಿ…

ಇದನ್ನೂ ಓದಿ
ಮಕ್ಕಳಿಗೆ ಆಸ್ತಿ ಕೊಡದ ಬಿಲ್ ಗೇಟ್ಸ್
ಭಾರತೀಯರು ತಂತ್ರಜ್ಞಾನ ಕೀಳರಿಮೆ ಬಿಡಬೇಕು: ವಾಧವಾ
2024-25ರಲ್ಲಿ 820 ಬಿಲಿಯನ್ ಡಾಲರ್ ದಾಟಿದ ಭಾರತದ ರಫ್ತು
ಭಾರತದಲ್ಲಿ ಮೊಬೈಲ್, ಟಿವಿ ಬೆಲೆ ಕಡಿಮೆಯಾಗುತ್ತಾ?

‘ಪ್ಲಾಟ್​​ಫಾರ್ಮ್ಸ್ ಮತ್ತು ಡಿವೈಸಸ್ ತಂಡಗಳನ್ನು ಕಳೆದ ವರ್ಷ ಒಟ್ಟು ಸೇರಿಸಿದಾಗಿನಿಂದ ನಾವು ಹೆಚ್ಚು ಕ್ಷಮತೆ, ಕಡಿಮೆ ಗಾತ್ರಕ್ಕೆ ಒತ್ತು ಕೊಡುತ್ತಿದ್ದೇವೆ. ಜನವರಿಯಲ್ಲಿ ವಾಲಂಟರಿ ಎಕ್ಸಿಟ್ ಸ್ಕೀಮ್ ಜೊತೆಗೆ ಕೆಲ ಉದ್ಯೋಗಗಳನ್ನೂ ತೆಗೆಯುತ್ತಿದ್ದೇವೆ’ ಎಂದು ಗೂಗಲ್ ವಕ್ತಾರರು ಹೇಳಿದ್ದರು.

ಒಟ್ಟಾರೆ, ಗೂಗಲ್ ತನ್ನ ಕಾರ್ಯಾಚರಣೆ ಮರು ರಚಿಸಲು ಮತ್ತು ವೆಚ್ಚ ಕಡಿಮೆ ಮಾಡಲು ಇತ್ತೀಚಿನ ದಿನಗಳಿಂದ ಯೋಜನೆ ಹಾಕಿದೆ. ಅದರ ಭಾಗವಾಗಿ ವಾಲಂಟರಿ ಎಕ್ಸಿಟ್ ಪ್ರೋಗ್ರಾಮ್, ಲೇ ಆಫ್ ಇತ್ಯಾದಿಗಳು ನಡೆಯುತ್ತಿವೆ.

12,000 ಮಂದಿಯನ್ನು ಕೆಲಸದಿಂದ ತೆಗೆದಿದ್ದ ಗೂಗಲ್

2023ರಲ್ಲಿ ಟೆಕ್ ಕ್ಷೇತ್ರದಲ್ಲಿ ಇದ್ದ ಟ್ರೆಂಡ್​​ನಂತೆ ಗೂಗಲ್ ಸಂಸ್ಥೆ ಆ ವರ್ಷ ಒಮ್ಮೆಗೇ 12,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿತು. ಅದರ ನೂರಕ್ಕೆ ಆರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು. ಆ ವರ್ಷ ಗೂಗಲ್ ಮಾತ್ರವಲ್ಲ, ಮೆಟಾ ಮತ್ತು ಅಮೇಜಾನ್ ಕಂಪನಿಗಳೂ ಕೂಡ ಸಾವಿರಾರು ಮಂದಿಯನ್ನು ಲೇ ಆಫ್ ಮಾಡಿದ್ದುವು.

ಇದನ್ನೂ ಓದಿ: ಡಿಜಿಟಲ್ ಸೌಕರ್ಯ; ಭಾರತದ ಮುಂದೆ ಸಿಲಿಕಾನ್ ವ್ಯಾಲಿ ಏನೂ ಇಲ್ಲ: ವಿವೇಕ್ ವಾಧವಾ

2024 ಮತ್ತು ಈಗ 2025ರಲ್ಲೂ ಗೂಗಲ್ ಲೇ ಆಫ್ ಮಾಡಿದೆ. ಸಾವಿರಾರು ಸಂಖ್ಯೆಯಲ್ಲಲ್ಲವಾದರೂ, ನೂರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ