AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market: ಭಾರತದ ಷೇರು ಮಾರುಕಟ್ಟೆಯಲ್ಲಿ ಇವತ್ತು ಭರ್ಜರಿ ಗೂಳಿ ಓಟ; ಏನು ಕಾರಣ?

Reasons for rising of Indian stock market today: ಭಾರತದ ಷೇರು ಮಾರುಕಟ್ಟೆಯ ಬಹುತೇಕ ಎಲ್ಲಾ ಸೂಚ್ಯಂಕಗಳೂ ಇದು ಶುಕ್ರವಾರ ಹಸಿರು ಬಣ್ಣಕ್ಕೆ ತಿರುಗಿವೆ. ಸೂಚ್ಯಂಕಗಳು ಇವತ್ತಿನ ಬೆಳಗಿನ ವಹಿವಾಟಿನಲ್ಲಿ ಶೇ. 2.50ರವರೆಗೂ ಏರಿಕೆ ಕಂಡಿವೆ. ಆರ್​​ಬಿಐ ರಿಪೋ ದರ ಕಡಿತ, ಅಮೆರಿಕದ ಸುಂಕ ವಿರಾಮ ಇತ್ಯಾದಿ ಕ್ರಮಗಳು ಭಾರತದ ಮಾರುಕಟ್ಟೆಗೆ ಬೇಡಿಕೆ ಸಿಗುವಂತೆ ಮಾಡಿರಬಹುದು.

Stock Market: ಭಾರತದ ಷೇರು ಮಾರುಕಟ್ಟೆಯಲ್ಲಿ ಇವತ್ತು ಭರ್ಜರಿ ಗೂಳಿ ಓಟ; ಏನು ಕಾರಣ?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 11, 2025 | 11:14 AM

ಮುಂಬೈ, ಏಪ್ರಿಲ್ 11: ಭಾರತದ ಷೇರು ಮಾರುಕಟ್ಟೆ (Stock Market) ಇವತ್ತು ಗರಿಗೆದರಿ ನಿಂತಂತಿದೆ. ಬೆಳಗಿನ ವಹಿವಾಟಿನಲ್ಲಿ ಗೂಳಿ ಆಟ ನಡೆಯುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇ. 1ರಿಂದ 2ರಷ್ಟು ಏರಿಕೆ ಕಂಡಿವೆ. ಬೆಳಗ್ಗೆ 11 ಗಂಟೆಗೆ ಸೆನ್ಸೆಕ್ಸ್ 1,200 ಅಂಕಗಳನ್ನು ಹೆಚ್ಚಿಸಿಕೊಂಡಿತು. ಬಹುತೇಕ ಇತರೆಲ್ಲಾ ಸೂಚ್ಯಂಕಗಳೂ ಕೂಡ ಏರಿಕೆ ಕಂಡಿವೆ. ಬಿಎಸ್​​ಇ ಸ್ಮಾಲ್​ಕ್ಯಾಪ್ ಇಂಡೆಕ್ಸ್ ಶೇ. 2.13ರಷ್ಟು ಲಾಭ ಮಾಡಿದೆ. ಎನ್​​ಎಸ್​​ಇನಲ್ಲಿ ವಿವಿಧ ನಿಫ್ಟಿ ಸೂಚ್ಯಂಕಗಳು ಭರ್ಜರಿ ಏರಿಕೆ ಕಂಡಿವೆ. ಟ್ಯಾರಿಫ್ ಸಮರದ ಮಧ್ಯೆ ಭಾರತದ ಮಾರುಕಟ್ಟೆ ಗರಿಗೆದರಲು ಏನು ಕಾರಣ?

ಅಮೆರಿಕದ ಸುಂಕ ಏರಿಕೆ ಕ್ರಮಕ್ಕೆ ಅಲ್ಪವಿರಾಮ

ಡೊನಾಲ್ಡ್ ಟ್ರಂಪ್ ಅವರು ಚೀನಾ ಹೊರತುಪಡಿಸಿ ಉಳಿದ ದೇಶಗಳಿಗೆ ಸುಂಕ ಏರಿಕೆಯ ಕ್ರಮವನ್ನು 90 ದಿನಗಳವರೆಗೆ ಹಿಂಪಡೆದುಕೊಂಡಿದ್ದಾರೆ. ಹಿಂದೆ ಇದ್ದ ಶೇ 10ರ ಮೂಲ ಸಂಕ ಮಾತ್ರವೇ ಇರಲಿದೆ. ಭಾರತಕ್ಕೆ ಟ್ರಂಪ್ ಅವರು ಶೇ. 26ರಷ್ಟು ಆಮದು ಸುಂಕ ಹಾಕುವುದಾಗಿ ಹೇಳಿದ್ದರು. ಈಗ ಮೂರು ತಿಂಗಳು ಈ ಹೊಸ ದರ ಜಾರಿ ಇರುವುದಿಲ್ಲ.

ಇದನ್ನೂ ಓದಿ: ಗಮನಿಸಿ, ನೀವು ಒಡವೆ ಇಟ್ಟರೆ ಶೇ. 90 ಅಲ್ಲ, ಶೇ. 75 ಸಾಲ ಸಿಗುವುದೂ ಕಷ್ಟವಾಗಬಹುದು

ಇದನ್ನೂ ಓದಿ
Image
ಸೆನ್ಸೆಕ್ಸ್ ಇತಿಹಾಸದಲ್ಲೇ 5 ಅತಿದೊಡ್ಡ ಆಘಾತಗಳು
Image
ಮಾರುಕಟ್ಟೆ ಅಲುಗಾಟದಲ್ಲೂ ವಾರನ್ ಬಫೆಟ್ ಆಸ್ತಿ ಹೆಚ್ಚಿದ್ದು ಹೇಗೆ?
Image
ಷೇರು ಯಾವಾಗ ಮಾರಬೇಕು? ದೀರ್ಘಾವಧಿ ಇಟ್ಟುಕೊಳ್ಳಬೇಕಾ?
Image
ಇತಿಹಾಸದಲ್ಲೇ ಅತಿದೊಡ್ಡ ಮಾರುಕಟ್ಟೆ ಕುಸಿತವಾ ಇದು?

ಚೀನಾ ಬಿಟ್ಟು ಭಾರತಕ್ಕೆ ಬರುತ್ತಿರುವ ಎಫ್​​ಐಐಗಳು

ಚೀನಾ ಮೇಲೆ ಅಮೆರಿಕ ಒಂದೂವರೆ ಪಟ್ಟು ಸುಂಕ ವಿಧಿಸಲು ನಿರ್ಧರಿಸಿದೆ. ಭಾರತವೂ ಸೇರಿ ಬೇರೆ ದೇಶಗಳಿಗೆ ಅಮೆರಿಕ ವಿನಾಯಿತಿ ನೀಡಿದೆ. ಇದರಿಂದ ವಿದೇಶೀ ಹೂಡಿಕೆಗಳು ಚೀನಾ ಮಾರುಕಟ್ಟೆಯಿಂದ ಹೊರನಡೆದು ಭಾರತಕ್ಕೆ ಬರುತ್ತಿರಬಹುದು.

ಆರ್​​ಬಿಐ ಬಡ್ಡಿದರ ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರವನ್ನು 25 ಮೂಲಾಂಕಗಳಷ್ಟು ಇಳಿಕೆ ಮಾಡಿರುವುದು ಹೂಡಿಕೆದಾರರಲ್ಲಿ ಭಾರತದ ಮಾರುಕಟ್ಟೆ ಬಗ್ಗೆ ಆತ್ಮವಿಶ್ವಾಸ ಮೂಡುವಂತೆ ಮಾಡಿದೆ. ಹಾಗೆಯೇ, ಆರ್​​ಬಿಐನ ನೀತಿ ನಿಲುವನ್ನು ನ್ಯೂಟ್ರಲ್​​ನಿಂದ ಅಕಾಮೊಡೇಟಿವ್​​ಗೆ ಬದಲಾಯಿಸಿರುವುದೂ ಕೂಡ ಮಾರುಕಟ್ಟೆಗೆ ಸಕಾರಾತ್ಮಕ ನಿರ್ಧಾರ ಎನಿಸಿದೆ.

ಇದನ್ನೂ ಓದಿ: ಚಾಣಕ್ಷ್ಯ ವಾರನ್ ಬಫೆಟ್; ಊರೆಲ್ಲಾ ತೋಪೆದ್ದರೂ ಕರಗಲಿಲ್ಲ ಇವರ ಶ್ರೀಮಂತಿಕೆ; ಇದು ಹೇಗೆ ಸಾಧ್ಯ?

ಹಣದುಬ್ಬರ ನಿಯಂತ್ರಣದಲ್ಲಿರುವ ಖುಷಿ

2025-26ರಲ್ಲಿ ಹಣದುಬ್ಬರ ಆರ್​​ಬಿಐ ನಿಗದಿ ಮಾಡಿಕೊಂಡ ಗುರಿಯ ಪರಿಧಿಯಲ್ಲೇ ಇರುವ ಸಾಧ್ಯತೆ ಇದೆ. ಆರ್​ಬಿಐನ ಎಂಪಿಸಿ ಸಭೆಯಲ್ಲಿ ಮಾಡಲಾದ ಅಂದಾಜು ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4ರಷ್ಟು ಮಾತ್ರವೇ ಇರುವ ಸಾಧ್ಯತೆ ಇದೆ. ಇದು ಭಾರತದ ಆರ್ಥಿಕತೆಗೆ ಶುಭ ಸೂಚನೆ ಎನಿಸಿದೆ. ಜಿಡಿಪಿ ದರ ಕೂಡ ಶೇ. 6ಕ್ಕಿಂತ ಮೇಲ್ಪಟ್ಟೇ ಇರಬಹುದು ಎಂಬುದು ಆರ್​​ಬಿಐ ಅಂದಾಜು.

ಇವೆಲ್ಲಾ ಅಂಶಗಳು ಭಾರತದ ಆರ್ಥಿಕತೆ ಹಾಗೂ ಬಂಡವಾಳ ಮಾರುಕಟ್ಟೆ ಮೇಲೆ ಹೂಡಿಕೆದಾರರಿಗೆ ವಿಶ್ವಾಸ ಮೂಡಿಸಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಆರ್ ಮಾರ್ಕೆಟ್ ರಸ್ತೆಗಳೂ ಅಧ್ವಾನ, ವಾಹನ ಓಡಿಸಲು ಕಸರತ್ತು ಬೇಕು
ಕೆಆರ್ ಮಾರ್ಕೆಟ್ ರಸ್ತೆಗಳೂ ಅಧ್ವಾನ, ವಾಹನ ಓಡಿಸಲು ಕಸರತ್ತು ಬೇಕು
ರವಿವಾರದವರೆಗೆ ಪರದಾಟ ತಪ್ಪಿದ್ದಲ್ಲ, ಹವಾಮಾನ ಇಲಾಖೆ ಮುನ್ಸೂಚನೆ
ರವಿವಾರದವರೆಗೆ ಪರದಾಟ ತಪ್ಪಿದ್ದಲ್ಲ, ಹವಾಮಾನ ಇಲಾಖೆ ಮುನ್ಸೂಚನೆ
ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ
ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ