ಗೂಗಲ್ ಪೇನಿಂದ ಲಕ್ಷ ಲಕ್ಷ ಸಾಲ ಪಡೆಯಬಹುದು, ಹೀಗೆ ಅಪ್ಲೈ ಮಾಡಿ

ಡಿಜಿಟಲ್ ವಹಿವಾಟು ಪ್ರಾರಂಭವಾದ ಬಳಿಕ ಗೂಗಲ್ ಪೇ ಜನಪ್ರಿಯತೆ ಪಡೆದುಕೊಂಡಿದೆ. ಈ ಅಪ್ಲಿಕೇಶನ್ ನಲ್ಲಿ ಹಣ ವರ್ಗಾವಣೆ ಜತೆಗೆ ಸುಲಭವಾಗಿ ಸಾಲ ಪಡೆಯಬಹುದು. ಗೂಗಲ್ ಪೇ ಆಪ್ ನೇರವಾಗಿ ಸಾಲ ನೀಡುವುದಿಲ್ಲ. ಆದರೆ ಡಿಎಂಐ ಫೈನಾನ್ಸ್, ಕ್ಯಾಶ್ ಅಥವಾ ಮನಿ ವ್ಯೂ ಮುಂತಾದ ಅಧಿಕೃತ ಬ್ಯಾಂಕ್ ಮತ್ತು ಹಣಕಾಸು ಪಾಲುದಾರರೊಂದಿಗೆ ನಿಮ್ಮನ್ನು ಕೈ ಜೋಡಿಸಿ ಸಾಲ ಪಡೆಯಲು ಅವಕಾಶ ಮಾಡಿಕೊಡುತ್ತದೆ.

ಗೂಗಲ್ ಪೇನಿಂದ ಲಕ್ಷ ಲಕ್ಷ ಸಾಲ ಪಡೆಯಬಹುದು, ಹೀಗೆ ಅಪ್ಲೈ ಮಾಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 27, 2026 | 4:21 PM

ಮುಖ್ಯಾಂಶಗಳು

  • ಗೂಗಲ್ ಪೇ, ಫೋನ್ ಪೇ ಮೂಲಕ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ
  • ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ ಪಡೆಯುವ ಅವಕಾಶವಿದೆ
  • ಈ ಅಪ್ಲಿಕೇಶನ್ ನಲ್ಲಿ 30,000 ರೂ. 12,00,000 ರೂವರೆಗೆ ಸಾಲ ಸೌಲಭ್ಯ ಪಡೆಯಬಹುದು.

ಇತ್ತೀಚೆಗಿನ ದಿನಗಳಲ್ಲಿ ಗೂಗಲ್ ಪೇ, ಫೋನ್ ಪೇ ಮೂಲಕ ಆನ್ಲೈನ್ ಟ್ರಾನ್ಸಾಕ್ಷನ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಈ ಗೂಗಲ್ ಪೇ (Google Pay) ಮೂಲಕ ಹಣಕಾಸಿನ ವಹಿವಾಟಿನ ಜತೆಗೆ ಕರೆಂಟ್ ಬಿಲ್, ಗ್ಯಾಸ್ ಬಿಲ್, ಮೊಬೈಲ್ ಹಾಗೂ ಡಿಟಿಎಚ್ ರೀಚಾರ್ಜ್‌ಗಳನ್ನು ಕುಳಿತಲ್ಲಿಂದಲೇ ಮಾಡುತ್ತಿದ್ದಾರೆ. ಅದರ ಜತೆಗೆ ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ (Personal loan) ಪಡೆಯಬಹುದು ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ. ಈ ಅಪ್ಲಿಕೇಶನ್ ನಲ್ಲಿ 30,000 ರೂ. 12,00,000 ರೂವರೆಗೆ ಸಾಲ ಸೌಲಭ್ಯ ಪಡೆಯಬಹುದು. ಆದರೆ ಈ ಅರ್ಹತೆ ಇದ್ದವರಿಗೆ ಮಾತ್ರ ಸಾಲ ದೊರೆಯುತ್ತದೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ.

ಗೂಗಲ್ ಪೇನಲ್ಲಿ ಲೋನ್ ಪಡೆಯುವುದು ಹೇಗೆ?

ಹಂತ 1: ಮೊಬೈಲ್‌ನಲ್ಲಿ ಗೂಗಲ್ ಪೇ ಆ್ಯಪ್ ತೆರೆಯಿರಿ.

ಹಂತ 2: ಹಣ ಅಥವಾ ಬಿಸಿನೆಸ್ ವಿಭಾಗದಲ್ಲಿ ಲೋನ್ ಅಥವಾ ಪರ್ಸನಲ್ ಲೋನ್ ಮೇಲೆ ಟ್ಯಾಪ್ ಮಾಡಿ.

ಹಂತ 3: ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ, ಪಿನ್ ಕೋಡ್ ಮತ್ತು ಉದ್ಯೋಗದ ವಿವರಗಳನ್ನು ನಮೂದಿಸಿ.

ಹಂತ 4: ನಿಮ್ಮ ಅರ್ಹತೆಗೆ ತಕ್ಕಂತೆ ಲಭ್ಯವಿರುವ ಸಾಲದ ಮೊತ್ತ ಮತ್ತು ಇಎಂಐ ಯೋಜನೆಯನ್ನು ಆಯ್ಕೆಮಾಡಿ.

ಹಂತ 5: ನಿಮ್ಮ ವೈಯುಕ್ತಿಕ ವಿವರಗಳನ್ನು ಕೆವೈಸಿ ಮಾಡಿ ಹಾಗೂ ಸಾಲದ ಒಪ್ಪಂದಕ್ಕೆ ಸಹಿ ಹಾಕಿ.

ಹಂತ 6: ಇಎಂಐ ಪಾವತಿಗಾಗಿ e-Mandate (ಇ- ಮ್ಯಾಂಡೇಟ್) ಸೆಟ್ ಮಾಡಿ.

ಹಂತ 7: ಅನುಮೋದನೆಗೊಂಡ ಬಳಿಕ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ.

ಇದನ್ನೂ ಓದಿ: ಸಾಲವೆಂದರೆ ಮಾರುದೂರ ಹೋಗುತ್ತೀರಾ? ಕೆಟ್ಟಸಾಲ, ಒಳ್ಳೆಯ ಸಾಲದ ವ್ಯತ್ಯಾಸ ತಿಳಿದಿರಿ… ಇಲ್ಲಿವೆ ಕೆಲ ಟ್ರಿಕ್ಸ್

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಗೂಗಲ್ ಪೇನಲ್ಲಿ ಸಾಲ ಸೌಲಭ್ಯ ಹೇಗೆ ಸಿಗುತ್ತದೆ?

ಉತ್ತರ: ಗೂಗಲ್ ಪೇನಲ್ಲಿ ನೇರವಾಗಿ ಸಾಲ ಸೌಲಭ್ಯ ಸಿಗುವುದಿಲ್ಲ. ಡಿಎಂಐ ಫೈನಾನ್ಸ್, ಕ್ಯಾಶ್ ಅಥವಾ ಮನಿ ವ್ಯೂ ಮುಂತಾದ ಅಧಿಕೃತ ಬ್ಯಾಂಕ್ ಮತ್ತು ಹಣಕಾಸು ಪಾಲುದಾರರೊಂದಿಗೆ ನಿಮ್ಮನ್ನು ಕೈ ಜೋಡಿಸುತ್ತದೆ.

ಪ್ರಶ್ನೆ: ಗೂಗಲ್ ಪೇನಲ್ಲಿ ಎಷ್ಟು ಲಕ್ಷ ಸಾಲ ಸೌಲಭ್ಯ ದೊರೆಯುತ್ತದೆ?

ಉತ್ತರ: ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ 30,000 ರೂ. 12,00,000 ರೂವರೆಗೆ ಸಾಲ ಸೌಲಭ್ಯ ಪಡೆಯಬಹುದು.

ಪ್ರಶ್ನೆ: ಗೂಗಲ್ ಪೇನಿಂದ ಸಾಲ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು?

ಉತ್ತರ: ಗೂಗಲ್ ಪೇನಿಂದ ಸಾಲ ಪಡೆಯಲು ಪ್ಯಾನ್ ಕಾರ್ಡ್ , ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್ ವಿವರಗಳು ಬೇಕು

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:21 pm, Mon, 27 July 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us