ಕೃಷಿಕರು
ನವದೆಹಲಿ: ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ (Kharif Crops) ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಭತ್ತ, ರಾಗಿ, ಜೋಳ, ಹೆಸರುಕಾಳು ಇತ್ಯಾದಿ ಬೆಳೆಗಳಿವೆ. ಭತ್ತಕ್ಕೆ ಎಂಎಸ್ಪಿಯನ್ನು ಕ್ವಿಂಟಾಲ್ಗೆ 143 ರೂನಷ್ಟು ಏರಿಸಲಾಗಿದೆ. ಹೆಸರುಕಾಳಿಗೆ ಬೆಂಬಲ ಬೆಲೆ ಬರೋಬ್ಬರಿ 803 ರೂನಷ್ಟು ಹೆಚ್ಚಳವಾಗಿದೆ. ಕ್ವಿಂಟಾಲ್ ರಾಗಿಗೆ 268 ರೂಗಳಷ್ಟು ಎಂಎಸ್ಪಿ ಹೆಚ್ಚಿಸಲಾಗಿದೆ. ಈ ವರ್ಷದ ಹಿಂಗಾರು ಬೆಳೆಗಳಿಗೆ (Rabi Crops) ಸರ್ಕಾರ 2022ರ ನವೆಂಬರ್ನಲ್ಲಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿತ್ತು. ಯಾವ್ಯಾವ ಬೆಳೆಗಳಿಗೆ ಎಷ್ಟೆಷ್ಟು ಬೆಂಬಲ ಬೆಲೆ ಹೆಚ್ಚಿಸಲಾಗಿದೆ, ಈ ಪಟ್ಟಿಗಳು ಇಲ್ಲಿವೆ…
2023-24ರಲ್ಲಿ ಮುಂಗಾರು ಬೆಳೆಗೆ ಸರ್ಕಾರ ಪರಿಷ್ಕರಿಸಿರುವ ಎಂಎಸ್ಪಿ ದರ (ಕ್ವಿಂಟಾಲ್ಗೆ):
- ಭತ್ತ ಸಾಮಾನ್ಯ: 2040 ರೂನಿಂದ 2183 ರೂಗೆ ಏರಿಕೆ
- ಭತ್ತ ಗ್ರೇಡ್ ಎ: 2060ರಿಂದ 2203 ರೂಗೆ ಏರಿಕೆ
- ಜೋಳ (ಹೈಬ್ರಿಡ್): 2970 ರೂನಿಂದ 3180 ರೂಗೆ ಏರಿಕೆ
- ಜೋಳ (ಮಾಳದಂಡಿ): 2990 ರೂನಿಂದ 3225 ರೂಗೆ ಏರಿಕೆ
- ಮೆಕ್ಕೆ ಜೋಳ: 1,962 ರೂನಿಂದ 2090 ರೂಗೆ ಏರಿಕೆ
- ಬಿಳಿ ಜೋಳ (ಬಾಜ್ರ): 2,350 ರೂನಿಂದ 2500 ರೂಗೆ ಏರಿಕೆ
- ರಾಗಿ: 3578 ರೂನಿಂದ 3846 ರೂಗೆ ಏರಿಕೆ
- ತೊಗರಿಬೇಳೆ: 6,600 ರೂನಿಂದ 7,000 ರೂಗೆ ಏರಿಕೆ
- ಹೆಸರುಕಾಳು: 7,755 ರೂನಿಂದ 8558 ರೂಗೆ ಏರಿಕೆ
- ಶೇಂಗಾ: 5,850 ರೂ
- ಉದ್ದಿನಬೇಳೆ: 6,600 ರೂನಿಂದ 6950 ರೂಗೆ ಏರಿಕೆ
- ಸೋಯಾಬೀನ್ (ಹಳದಿ): 4,300 ರೂನಿಂದ 4600 ರೂಗೆ ಏರಿಕೆ
- ಕಡಲೆಕಾಯಿ: 5850 ರೂನಿಂದ 6377 ರೂಗೆ ಏರಿಕೆ
- ಸೂರ್ಯಕಾಂತಿ ಬೀಜ: 6400 ರೂನಿಂದ 6760 ರೂಗೆ ಏರಿಕೆ
- ಬಿಳಿ ಎಳ್ಳು: 7830 ರೂನಿಂದ 8635 ರೂಗೆ ಏರಿಕೆ
- ಕಪ್ಪು ಎಳ್ಳು: 7287 ರೂನಿಂದ 7734 ರೂಗೆ ಏರಿಕೆ
- ಹತ್ತಿ (ಮಧ್ಯಮ): 6080ರೂನಿಂದ 6620 ರೂಗೆ ಏರಿಕೆ
- ಹತ್ತಿ (ಉದ್ದದ್ದು): 6380 ರೂನಿಂದ 7020 ರೂಗೆ ಏರಿಕೆ
ಇದನ್ನೂ ಓದಿ: Kharif Crops: ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅನುಮೋದನೆ
ಹಿಂಗಾರು ಬೆಳೆಗಳಿಗೆ ಇರುವ ಎಂಎಸ್ಪಿ ದರ (2023-24)
- ಗೋಧಿ: ಕ್ವಿಂಟಾಲ್ಗೆ 2,125 ರೂ
- ಬಾರ್ಲಿ: 1,634 ರೂ
- ಸಾಸಿವೆ: 5,450 ರೂ
- ಅವರೆ: 6,000 ರೂ
- ಕಡಲೆ: 5,335 ರೂ
- ಕುಸುಮಬೀಜ (Safflower Seeds): 5,650 ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ