GST: ಜಿಎಸ್​ಟಿ ದರದಲ್ಲಿ ಬದಲಾವಣೆಗೆ ನಡೆದಿದೆ ಸಿದ್ಧತೆ ಎನ್ನುತ್ತಿವೆ ವರದಿ

| Updated By: Srinivas Mata

Updated on: Oct 12, 2021 | 12:16 PM

ಕೇಂದ್ರ ಸರ್ಕಾರದಿಂದ ಜಿಎಸ್​ಟಿ ಹೆಚ್ಚಿಸುವ ಮತ್ತು ಕೆಲವೇ ದರವನ್ನು ಹೊಂದುವ ಆಲೋಚನೆ ಇದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಇನ್ನಷ್ಟು ವಿವರಗಳು ಇಲ್ಲಿವೆ.

GST: ಜಿಎಸ್​ಟಿ ದರದಲ್ಲಿ ಬದಲಾವಣೆಗೆ ನಡೆದಿದೆ ಸಿದ್ಧತೆ ಎನ್ನುತ್ತಿವೆ ವರದಿ
ಸಾಂದರ್ಭಿಕ ಚಿತ್ರ
Follow us on

ಕೆಲವು ಸರಕು ಮತ್ತು ಸೇವೆಗಳ ಮೇಲೆ ಹೆಚ್ಚುತ್ತಿರುವ ತೆರಿಗೆಯನ್ನು ಕಡಿಮೆ ದರದೊಂದಿಗೆ ಸರಳವಾದ ರಚನೆಗೆ ತೆರಳುವತ್ತ ಭಾರತವು ಗಮನಹರಿಸಬಹುದು ಎಂದು ಈ ವಿಷಯದ ಬಗ್ಗೆ ಮಾಹಿತಿ ತಿಳಿದಿರುವವರು ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದ ಸಮಿತಿಯು ಪ್ರಸ್ತುತ ನಾಲ್ಕು-ದರ ವ್ಯವಸ್ಥೆಯಿಂದ ಕೂಲಂಕಷ ಪರೀಕ್ಷೆಯನ್ನು ಪರಿಗಣಿಸಲು ಡಿಸೆಂಬರ್‌ನಲ್ಲಿ ಸಭೆ ಸೇರುವ ಸಾಧ್ಯತೆಯಿದೆ. ಸದ್ಯಕ್ಕೆ ಈ ಬಗೆಗಿನ ಚರ್ಚೆಗಳು ಖಾಸಗಿ ಆಗಿರುವುದರಿಂದ ತಮ್ಮ ಗುರುತನ್ನು ತಿಳಿಸದೆ ಮೂಲಗಳು ಮಾಹಿತಿ ನೀಡಿವೆ.

ಸದ್ಯಕ್ಕೆ ಭಾರತದಲ್ಲಿ ಸರಕು ಮತ್ತು ಸೇವೆಗಳ ಮೇಲೆ ಶೇ 5, ಶೇ 12, ಶೇ 18 ಮತ್ತು ಶೇ 28ರಂತೆ ತೆರಿಗೆಯನ್ನು ವಿಧಿಸುತ್ತದೆ. ಆಹಾರ ಪದಾರ್ಥಗಳಿಗೆ ಕಡಿಮೆ ದರವನ್ನು ಹಾಕಲಾಗುತ್ತಿದೆ ಮತ್ತು ಪಾಪದ (ಸಿಗರೇಟ್​ನಂಥ ತಂಬಾಕು ಮತ್ತು ಮದ್ಯದ ವಸ್ತುಗಳು) ಹಾಗೂ ಐಷಾರಾಮಿ ಸರಕುಗಳಿಗೆ ಅತ್ಯಧಿಕ ದರವನ್ನು ವಿಧಿಸಲಾಗುತ್ತದೆ. ಸದ್ಯಕ್ಕೆ ಇರುವ ಎರಡು ಕಡಿಮೆ ದರಗಳದನ್ನು ಶೇಕಡಾವಾರು ಒಂದು ಪಾಯಿಂಟ್‌ನಿಂದ ಕ್ರಮವಾಗಿ ಶೇ 6 ಮತ್ತು ಶೇ 13ಕ್ಕೆ ಏರಿಸಬಹುದು ಎಂದು ಮೂಲಗಳು ತಿಳಿಸಿವೆ. ಹಂತ ಹಂತದ ಕಡಿತ ಯೋಜನೆಯ ಭಾಗವಾಗಿ ದರಗಳನ್ನು ಅಂತಿಮವಾಗಿ ಮೂರಕ್ಕೆ ಇಳಿಸಲಾಗುತ್ತದೆ. ರಾಜ್ಯ ಹಣಕಾಸು ಮಂತ್ರಿಗಳ ಗುಂಪು ಮುಂದಿನ ತಿಂಗಳ ಅಂತ್ಯದ ವೇಳೆಗೆ ಪ್ರಸ್ತಾವನೆಗಳನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿದೆ.

ಹಣಕಾಸು ಸಚಿವಾಲಯದ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಲಭ್ಯರಾಗಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಭಾರತದ ಪ್ರಮುಖ ರಾಜ್ಯಗಳು ಚುನಾವಣೆಗೆ ಹೋಗುತ್ತಿರುವ ಸಮಯದಲ್ಲಿ ಜಿಎಸ್‌ಟಿ ದರಗಳನ್ನು ಹೆಚ್ಚಿಸುವ ಯೋಜನೆಯು ಬರಲಿದೆ. ಇದು ಬಹುಶಃ ಕೊರೊನಾ ಬಿಕ್ಕಟ್ಟಿನಿಂದ ಉಂಟಾದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ದೇಶದಲ್ಲಿ ಇದು ಜನಪ್ರಿಯವಲ್ಲದ ಕ್ರಮವಾಗಿದೆ.

ಇದನ್ನೂ ಓದಿ: Petrol, Diesel Price: ಸರ್ಕಾರಗಳ ಆದಾಯ ಮೇಲಾಟದಲ್ಲಿ ಗ್ರಾಹಕರು ಹಣ್ಣುಗಾಯಿ, ನೀರುಗಾಯಿ; ತೈಲೋತ್ಪನ್ನ ಜಿಎಸ್​​ಟಿ ಅಡಿ ತಂದರೆ ಏನಾಗುತ್ತೆ?