AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol, Diesel Price: ಸರ್ಕಾರಗಳ ಆದಾಯ ಮೇಲಾಟದಲ್ಲಿ ಗ್ರಾಹಕರು ಹಣ್ಣುಗಾಯಿ, ನೀರುಗಾಯಿ; ತೈಲೋತ್ಪನ್ನ ಜಿಎಸ್​​ಟಿ ಅಡಿ ತಂದರೆ ಏನಾಗುತ್ತೆ?

ಪೆಟ್ರೋಲ್- ಡೀಸೆಲ್ ದರ ಎಲ್ಲಿಗೆ ಹೋಗಿ ಮುಟ್ಟಬಹುದು? ಈ ದರ ಇಳಿಸುವುದು ಯಾರ ಕೈಲಿದೆ? ಒಂದು ಜಿಎಸ್​ಟಿ ಅಡಿಯಲ್ಲಿ ಪೆಟ್ರೋಲ್- ಡೀಸೆಲ್ ಬಂದಲ್ಲಿ ದರ ಎಷ್ಟಾಗುತ್ತದೆ ಇತ್ಯಾದಿ ಆಸಕ್ತಿಕರ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Petrol, Diesel Price: ಸರ್ಕಾರಗಳ ಆದಾಯ ಮೇಲಾಟದಲ್ಲಿ ಗ್ರಾಹಕರು ಹಣ್ಣುಗಾಯಿ, ನೀರುಗಾಯಿ; ತೈಲೋತ್ಪನ್ನ ಜಿಎಸ್​​ಟಿ ಅಡಿ ತಂದರೆ ಏನಾಗುತ್ತೆ?
ಸಾಂದರ್ಭಿಕ ಚಿತ್ರ
Follow us
Srinivas Mata
| Updated By: ಸಾಧು ಶ್ರೀನಾಥ್​

Updated on: Mar 06, 2021 | 5:15 PM

ಭಾರತದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 90 ರೂಪಾಯಿ ದಾಟಿಹೋಗಿ ಯಾವುದೋ ಕಾಲವಾಯ್ತು! ಇನ್ನು, ಡೀಸೆಲ್ ರೇಟ್ ಬಹುತೇಕ ಕಡೆ 80 ರೂಪಾಯಿಗೂ ಹೆಚ್ಚಾಗಿ, ಐತಿಹಾಸಿಕ ಗರಿಷ್ಠ ಮಟ್ಟದಲ್ಲಿದೆ. ಪೆಟ್ರೋಲ್- ಡೀಸೆಲ್ ರೇಟ್ ಕಡಿಮೆ ಆಗಿಯೇ ಹೋಯಿತು ಅನ್ನೋ ಥರದ ವರದಿಗಳನ್ನು ನೀವು ಓದಿರಬಹುದು. “ಆದರೆ ಇದೊಂಥರ ಧರ್ಮ ಸಂಕಟ. ದರ ಇಳಿಸೋದು ಕಷ್ಟ,” ಎಂಬ ಸಂಗತಿಯನ್ನು ಸ್ವತಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಲ್ಲಿಗೆ ಇಡೀ ದೇಶಾದ್ಯಂತ ಪೆಟ್ರೋಲ್ ದರ 100ರ ಗಡಿ ದಾಟುವ ಸಾಧ್ಯತೆ ನಿಚ್ಚಳ ಆಗುತ್ತಿದೆ. ಯಾಕೆ ಹೀಗೆಲ್ಲ ಹೆದರಿಸ್ತೀರಿ ಅಂತೀರಾ? ನಿಮ್ಮೆದುರಿಗೆ ಕಾರಣ, ಅಂಕಿ- ಅಂಶವನ್ನು ಇಟ್ಟೇ ವಿವರಿಸುತ್ತೇವೆ.

ಭಾರತಕ್ಕೆ ಅಗತ್ಯ ಬೀಳುವ ತೈಲದ ಪೈಕಿ ಬಹುಪಾಲು ಆಮದು ಮಾಡಿಕೊಳ್ಳಲಾಗುತ್ತೆ. ಅದರಲ್ಲೂ ಪರ್ಷಿಯನ್ ದೇಶಗಳಿಂದ ಭಾರತಕ್ಕೆ ಭಾರೀ ಪ್ರಮಾಣದ ತೈಲ ಸರಬರಾಜು ಆಗುತ್ತದೆ. ಸದ್ಯಕ್ಕೆ ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 69 ಯುಎಸ್​ಡಿ (ಭಾರತೀಯ ರೂಪಾಯಿಗಳಲ್ಲಿ ಸುಮಾರು 5000) ಇದೆ. ಒಂದು ಬ್ಯಾರೆಲ್ ಅಂದರೆ 158.987 ಲೀಟರ್​ಗಳು. ಹಾಗೆ ಬಂದ ಕಚ್ಚಾ ತೈಲವು ಪರಿಷ್ಕರಣೆ ಮತ್ತಿತರ ಹಂತಗಳನ್ನು ದಾಟಿ, ಕೊನೆಗೆ ಗ್ರಾಹಕರನ್ನು ತಲುಪುವ ವೇಳೆಗೆ ನಾವೀಗ ನೀಡುತ್ತಿದ್ದೇವಲ್ಲಾ ಆ ದರಕ್ಕೆ ಬರುತ್ತದೆ.

ಎರಡು ತಿಂಗಳ ಹಿಂದೆ ಈ ದರ 42 ಡಾಲರ್ ಇತ್ತು. ಈಗ ಬೆಲೆ ಮೇಲ್ಮುಖವಾಗಿ ಸಾಗುತ್ತಲೇ ಇದೆ. ಅದಕ್ಕೆ ಕಾರಣ ಏನು ಅಂದರೆ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಮಾಡುವುದಕ್ಕೆ ಮಿತಿ ಹಾಕಿಕೊಂಡಿವೆ. ಅದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಾಗುತ್ತದೆ. ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡಿದ್ದಾಗ ಎರಡು ದಶಕಗಳ ಕನಿಷ್ಠ ಮಟ್ಟಕ್ಕೆ ತೈಲ ದರ ಕುಸಿದಿತ್ತು. ಆಗ ಆ ಅನುಕೂಲವನ್ನು ಗ್ರಾಹಕರಿಗೆ ವರ್ಗಾಯಿಸದೆ ಸರ್ಕಾರಗಳು ಸುಂಕವನ್ನು ಹೆಚ್ಚು ಮಾಡಿ, ಒಂದಷ್ಟು ಹಣ ಮಾಡಿಕೊಂಡಿದ್ದು ಅಲ್ಲಗಳೆಯುವಂತಿಲ್ಲ. ಈಗ ಕೊರೊನಾ ಕಾರಣಕ್ಕೆ ಸರ್ಕಾರಗಳಿಗೆ ಬೇರೆ ಆದಾಯ ದೊಡ್ಡ ಪ್ರಮಾಣದಲ್ಲಿ ಇಲ್ಲ. ನಿತ್ಯವೂ ಬಳಸುವ ಪೆಟ್ರೋಲ್- ಡೀಸೆಲ್ ಮೇಲಿನ ಆದಾಯ ಕಡಿಮೆ ಮಾಡಿಕೊಂಡರೆ ಅದನ್ನು ಭರಿಸುವುದಕ್ಕೆ ಬೇರೆ ಆದಾಯ ಮಾರ್ಗ ನೋಡಿಕೊಳ್ಳಬೇಕಾಗುತ್ತದೆ.

ಒಪೆಕ್ ರಾಷ್ಟ್ರಗಳು ಉತ್ಪಾದನೆ ಹೆಚ್ಚಿಸಿಲ್ಲ: ಆದರೆ, ಈಗ ಪರಿಸ್ಥಿತಿ ಏನಾಗಿದೆ ಅಂದರೆ, ಎಷ್ಟೋ ದೇಶಗಳಲ್ಲಿ ಕೊರೊನಾ ಬಿಕ್ಕಟ್ಟು ಪೂರ್ಣವಾಗಿ ಹತೋಟಿಗೆ ಬಂದಿಲ್ಲ ಎಂದು ಒಪೆಕ್ ರಾಷ್ಟ್ರಗಳು ಸೇರಿದಂತೆ ತೈಲ ಉತ್ಪಾದಿಸುವ ಪ್ರಮುಖ ದೇಶಗಳು ಉತ್ಪಾದನೆಯನ್ನು ಹೆಚ್ಚಿಸಿಲ್ಲ. ಇನ್ನೊಂದು ಕಡೆ ಭಾರತದಂಥ ದೇಶಗಳಲ್ಲಿ ಕೊರೊನಾ ಲಾಕ್​ಡೌನ್ ನಿರ್ಬಂಧ ಬಹುತೇಕ ತೆಗೆದು ಹಾಕಲಾಗಿದ್ದು, ಬೇಡಿಕೆ ಮುಂಚಿನಂತೆಯೇ ಆಗಿದೆ. ಹಾಗಾಗಿ ತೈಲ ಪೂರೈಕೆ ಪ್ರಮಾಣವನ್ನು ಗಣನೀಯವಾಗಿ ಏರಿಸಿ ಎಂದು ಕೊಲ್ಲಿ ರಾಷ್ಟ್ರಗಳನ್ನು ಭಾರತ ಕೇಳಿದಾಗ, ಅವು ನಕಾರಾತ್ಮಕವಾಗಿ ಸ್ಪಂದಿಸಿವೆ. ಹಾಗಾಗಿ ಪೆಟ್ರೋಲ್- ಡೀಸೆಲ್ ಬೆಲೆ ಇಳಿತಕ್ಕೆ ಭಾರತದಲ್ಲಿ ಅವಕಾಶ ಇಲ್ಲವಾಗಿದೆ.

ಪೆಟ್ರೋಲ್ ದರ ಪರಿಷ್ಕರಣೆ ಹೇಗೆ?:

ತೈಲ ಮಾರ್ಕೆಟಿಂಗ್ ಕಂಪೆನಿಗಳು ಪ್ರತಿ ನಿತ್ಯವೂ ದರ ಪರಿಷ್ಕರಣೆ ಮಾಡುತ್ತವೆ. ಇದಕ್ಕಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ 15 ದಿನಗಳಲ್ಲಿನ ಸರಾಸರಿ ದರ, ಡಾಲರ್ ವಿರುದ್ಧ ರೂಪಾಯಿ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಈಗಿನ ಟ್ರೆಂಡ್ ಗಮನಿಸಿದರೆ ಅಂತರರಾಷ್ಟ್ರೀಯ ಮಾರ್ಕೆಟ್​ನಲ್ಲಿ ಕಚ್ಚಾ ತೈಲ ದರ ಇಳಿಯುವಂತೆ ಕಾಣುತ್ತಿಲ್ಲ. ವ್ಯಾಟ್ ಇಳಿಸಿಬಿಟ್ಟರೆ ಕೇಂದ್ರ ಸರ್ಕಾರದಿಂದ ಅಬಕಾರಿ ಸುಂಕ ಹೆಚ್ಚಿಸಿಬಿಡುತ್ತಾರೆ, ಆ ಮೂಲಕ ತಮ್ಮ ಪಾಲು ಕೇಂದ್ರಕ್ಕೆ ಹೋಗಿಬಿಡುತ್ತದೆ ಎನ್ನುತ್ತವೆ ರಾಜ್ಯ ಸರ್ಕಾರಗಳು. ಇನ್ನು ಕೇಂದ್ರದಿಂದ ಅಬಕಾರಿ ಸುಂಕ ಇಳಿಸಿದರೆ ಅದರ ಲಾಭವನ್ನು ಬಳಸಿಕೊಳ್ಳುವ ರಾಜ್ಯ ಸರ್ಕಾರಗಳು ವ್ಯಾಟ್ ಹೆಚ್ಚಿಸಿ, ತಮಗೆ ಆದಾಯ ಮಾಡಿಕೊಂಡು ಬಿಡುತ್ತವೆ ಎನ್ನುತ್ತದೆ ಕೇಂದ್ರ ಸರ್ಕಾರ. ಅಲ್ಲಿಗೆ ಕೇಂದ್ರ- ರಾಜ್ಯಗಳ ಆದಾಯ ಲೆಕ್ಕಾಚಾರದಲ್ಲಿ ಗ್ರಾಹಕರು ಹಣ್ಣುಗಾಯಿ- ನೀರುಗಾಯಿ ಆಗುತ್ತಿದ್ದಾರೆ.

ಭಾರತದಲ್ಲಿ ಸರಕು- ಸಾಗಣೆಗೆ, ಕೈಗಾರಿಕೆಗಳಲ್ಲಿ ಅತಿ ಹೆಚ್ಚು ಬಳಕೆ ಆಗುವುದು ಡೀಸೆಲ್. ಅದೇ ರೀತಿ ಹೆಚ್ಚಿನ ಸೆಸ್ ಬೀಳುವುದು ಸಹ ಅದರ ಮೇಲೇ. ಸ್ವಂತ ಬಳಕೆಯ ವಾಹನಗಳಿಗೆ ಹೆಚ್ಚಿನ ಪ್ರಮಾಣ ಪೆಟ್ರೋಲ್ ಬಳಸಲಾಗುತ್ತದೆ. ಆದರೆ ಅದು ಕಡಿಮೆ. ಜಿಎಸ್​ಟಿ ವ್ಯಾಪ್ತಿಯೊಳಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ರಾಜ್ಯ- ಕೇಂದ್ರ ಎರಡರ ಆದಾಯಕ್ಕೂ ಕತ್ತರಿ ಬೀಳುತ್ತದೆ. ಆದರೆ ಇದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಧೈರ್ಯ ಸರ್ಕಾರಗಳಿಗೆ ಇಲ್ಲ.

ಜಿಎಸ್​​ಟಿ ಅಡಿ ಪೆಟ್ರೋಲಿಯಂ ಉತ್ಪನ್ನ ಬಂದರೆ ಏನಾಗುತ್ತದೆ?: ಇಲ್ಲಿ ಇನ್ನೂ ಒಂದು ವಿಚಾರ ಇದೆ. ಜಿಎಸ್​ಟಿ ಜಾರಿ ಆದ ಮೇಲೆ ಅದರಿಂದ ರಾಜ್ಯಗಳಿಗೆ ಆಗುವ ಆದಾಯದ ಖೋತಾವನ್ನು ಇಂತಿಷ್ಟು ವರ್ಷ ಕೇಂದ್ರದಿಂದ ಭರಿಸಬೇಕಾಗುತ್ತದೆ. ಅದನ್ನು ಜಿಎಸ್​ಟಿ ಪರಿಹಾರ ಎನ್ನಲಾಗುತ್ತದೆ. ಒಂದು ವೇಳೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ಅಡಿ ತಂದಲ್ಲಿ ಕೇಂದ್ರದ ಆದಾಯ ಕಡಿಮೆ ಆಗುವುದಷ್ಟೇ ಅಲ್ಲ. ರಾಜ್ಯಗಳಿಗೆ ಆಗುವ ಆದಾಯ ಖೋತಾವನ್ನೂ ಕೇಂದ್ರದಿಂದ ತುಂಬಿಕೊಡಬೇಕಾಗುತ್ತದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ಅಡಿ ತಂದಿದ್ದಲ್ಲಿ ಬೆಲೆ ಏನಾಗುತ್ತಿತ್ತು ಅಂತ ನೋಡುವುದಾದರೆ, ದೆಹಲಿಯಲ್ಲಿ ಪೆಟ್ರೋಲ್ ದರ ರು. 91.17 ಹಾಗೂ ಡೀಸೆಲ್ ರು. 81.94 ಇದೆ. ಜಿಎಸ್​ಟಿ ಕೆಳಗೆ ಪೆಟ್ರೋಲಿಯಂ ಉತ್ಸನ್ನ ಬಂದ ತಕ್ಷಣ ಪೆಟ್ರೋಲ್ ಲೀಟರ್​ಗೆ ರು. 75 ಹಾಗೂ ಡೀಸೆಲ್ ಲೀಟರ್​ಗೆ ರು. 68 ಆಗುತ್ತದೆ ಎಂದು ಲೆಕ್ಕಾಚಾರವನ್ನು ಮುಂದಿಡುತ್ತಾರೆ ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ತಜ್ಞರು.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ತೆರಿಗೆ ಕಡಿತದ ವಿಚಾರದಲ್ಲಿ ಧರ್ಮಸಂಕಟದ ಸ್ಥಿತಿ: ನಿರ್ಮಲಾ ಸೀತಾರಾಮನ್

ಇದನ್ನೂ ಓದಿ: Petrol rate: ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ