AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Test Championship: ಇಂಗ್ಲೆಂಡ್​ ವಿರುದ್ದ ಅಧಿಕಾರಯುತ ಜಯದೊಂದಿಗೆ ಫೈನಲ್ ಪ್ರವೇಶಿಸಿದ ಭಾರತ!

ಇಂಗ್ಲೆಂಡ್ ವಿರುದ್ಧ ಸರಣಿ ಗೆಲುವು ಭಾರತಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ (WTC ) ಆಡುವ ಅರ್ಹತೆ ದೊರಕಿಸಿದೆ. ಹಾಗೆ ನೋಡಿದರೆ, ಕೊನೆಯ ಟೆಸ್ಟ್​ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿದ್ದರೂ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸುತ್ತಿತ್ತು.

World Test Championship: ಇಂಗ್ಲೆಂಡ್​ ವಿರುದ್ದ ಅಧಿಕಾರಯುತ ಜಯದೊಂದಿಗೆ ಫೈನಲ್ ಪ್ರವೇಶಿಸಿದ ಭಾರತ!
ಟೀಂ ಇಂಡಿಯಾ
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 06, 2021 | 7:06 PM

Share

ಇಂಗ್ಲೆಂಡ್ ವಿರುದ್ದ ಭಾರತ ಮೊದಲ ಟೆಸ್ಟ್ ಸೋತಾಗ ಭಾರತದ ಪ್ರದರ್ಶನವನ್ನು ಮತ್ತು ವಿರಾಟ್​ ಕೊಹ್ಲಿಯ ನಾಯಕತ್ವವನ್ನು ಬಹಳ ಜನರು ಟೀಕಿಸಿದ್ದರು. ಆದರೆ, ಭಾರತ ಸೋಲಿನ ವಿರುದ್ಧ ಪುಟಿದೆದ ಕೊಹ್ಲಿ ಪಡೆ ನಂತರದ ಮೂರು ಟೆಸ್ಟ್​ ಪಂದ್ಯಗಳನ್ನು ಬಹಳ ಸುಲಭವಾಗಿ ಗೆದ್ದು ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಅದಕ್ಕೂ ಮಿಗಿಲಾದ ಸಂಗತಿಯೆಂದರೆ, ಈ ಸರಣಿ ಗೆಲುವು ಭಾರತಕ್ಕೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ (WTC ) ಆಡುವ ಅರ್ಹತೆ ದೊರಕಿಸಿದೆ. ಹಾಗೆ ನೋಡಿದರೆ, ಕೊನೆಯ ಟೆಸ್ಟ್​ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿದ್ದರೂ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸುತ್ತಿತ್ತು.

ನಾವು ಈಗಾಗಲೇ ಚರ್ಚಿಸಿರುವಂತೆ ನ್ಯೂಜಿಲೆಂಡ್ ಅದಾಗಲೇ  ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದೆ. ಪ್ರತಿಷ್ಠಿತ ಫೈನಲ್ ಪಂದ್ಯವು ಜೂನ್​ನಲ್ಲಿ ಕ್ರಿಕೆಟ್ ಕಾಶಿಯೆಂದು ಕರೆಸಿಕೊಳ್ಳುವ  ಇಂಗ್ಲೆಂಡ್​ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಭಾರತದ ಅನೇಕ ಆಟಗಾರರು ಡಬ್ಲ್ಯೂಟಿಸಿ ಚಾಂಪಿಯನ್​ಶಿಪ್​ ಗೆಲ್ಲುವುದು 50 ಓವರ್​ಗಳ ಐಸಿಸಿ ವಿಶ್ವಕಪ್ ಗೆಲ್ಲುವದಕ್ಕಿಂತ ಮಹತ್ವದ್ದು ಅಂತ ಹೇಳಿದ್ದಾರೆ. ಹಾಗಾಗಿ, ಭಾರತೀಯರೆಲ್ಲರು ಆ ಪಂದ್ಯಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್​ ಮಧ್ಯೆ ಕೊನೆಯ ಟೆಸ್ಟ್ ಆರಂಭವಾಗುವ ಮೊದಲು ಡಬ್ಲ್ಯೂಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿತ್ತು ಮತ್ತು ಭಾರತ ಎರಡನೇ ಸ್ಥಾನದಲ್ಲಿತ್ತು. ಆದರೆ, ಇಂದಿನ ಭರ್ಜರಿ ಜಯದೊಂದಿಗೆ ಭಾರತ ಈ ಟೇಬಲ್​ನ ಅಗ್ರಸ್ಥಾನಕ್ಕೆ ಜಿಗಿದಿದೆ. ಭಾರತದ ಪರ್ಸೆಂಟೇಜ್ ಆಫ್ ಪಾಯಿಂಟ್ಸ್ (ಪಿಸಿಟಿ) 72.2 ಇದ್ದರೆ ನ್ಯೂಜಿಲೆಂಡ್ ಪಿಸಿಟಿ 70.0 ಇದೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಮವಾಗಿ 3 ಮತ್ತು 4 ನೇ ಸ್ಥಾನದಲ್ಲಿವೆ. 2019 ರ ಜೂನ್​​ನಿಂದ 2021 ರ ಜೂನ್​ವರೆಗಿನ ಡಬ್ಲ್ಯೂಟಿಸಿ ಸೈಕಲ್​ನಲ್ಲಿ ಭಾರತ 5 ಸರಣಿಗಳನ್ನಾಡಿ,  12 ಟೆಸ್ಟ್​ ಪಂದ್ಯಗಳನ್ನು ಗೆದ್ದು 4 ರಲ್ಲಿ ಮಾತ್ರ ಸೋತು 1 ಪಂದ್ಯ ಡ್ರಾ ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ನ್ಯೂಜಿಲೆಂಡ್ ಸಹ 5 ಸರಣಿಗಳನ್ನಾಡಿ 7 ಗೆದ್ದು 4ರಲ್ಲಿ ಸೋಲುಂಡಿದೆ.    ​

ಅಂದ ಹಾಗೆ, ಐಸಿಸಿ ಟೆಸ್ಟ್​ ರ‍್ಯಾಕಿಂಗ್​ನಲ್ಲೂ ಬಾರತ ಮೊದಲ ಸ್ಥಾನಕ್ಕೆ ಜಿಗಿದಿದೆ. ಇಲ್ಲೂ ಭಾರತ ನ್ಯೂಜಿಲೆಂಡನ್ನು ಮೊದಲ ಸ್ಥಾನದಿಂದ ಪಲ್ಲಟಗೊಳಿಸಿದೆ.

ಹೊಸದಾಗಿ ಬಿಡುಗಡೆಯಾಗಿರುವ ಐಸಿಸಿ ರ‍್ಯಾಕಿಂಗ್​ಗಳ ಪ್ರಕಾರ,​ 122 ಅಂಕ ಗಳಿಸಿರುವ ಭಾರತ ಮೊದಲ ಸ್ಥಾನವನ್ನು ಆಕ್ರಮಿಸಿದರೆ, 118 ಅಂಕಗಳೊಂದಿಗೆ ನ್ಯೂಜಿಲೆಂಡ್ ಒಂದು ಸ್ಥಾನ ಕೆಳಗಡೆ ಜಾರಿದೆ.  ಆಸ್ಟ್ರೇಲಿಯಾ 113 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ 105 ಪಾಯಿಂಟ್ಸ್​ ಗಳಿಸಿರುವ ಇಂಗ್ಲೆಂಡ್ 4ನೇ  ಸ್ಥಾನದಲ್ಲಿದೆ.

ಇದನ್ನೂ ಓದಿ: India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ

Published On - 5:23 pm, Sat, 6 March 21

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?