Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮ್ಮ ಮುಂದೆ ಪ್ರಸ್ತುತ ಪಡಿಸಿದೆ, ನೋಡಿ.
1) ಆರು ಮಂದಿ ಸಚಿವರಿಗೆ ಮುಂಬೈ ಡೈರೀಸ್ ನೆನಪುಗಳ ಆತಂಕ ಕಾಡ್ತಿದೆಯಾ? ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಹೊರಬರುತ್ತಿದ್ದಂತೆ, ರಮೇಶ್ ಆಪ್ತರಾದ ಆರು ಮಂದಿ ಸಚಿವರು ರಾಜಕೀಯ ಷಡ್ಯಂತ್ರದ ಗುಮಾನಿ ಬಂದ ಕಾರಣದಿಂದಾಗಿ ತಮ್ಮ ವಿರುದ್ಧ ಯಾವುದೇ ರೀತಿಯ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. Link: ಆ ಆರು ಸಚಿವರಿಗೆ ಕಾಡ್ತಿದೆಯಾ ‘ಮುಂಬೈ ಡೈರೀಸ್’ ನೆನಪು! ದಿನೇಶ್ ಕಲ್ಲಹಳ್ಳಿ ವಿರುದ್ಧ ಕಂಪ್ಲೇಂಟ್ ನೀಡುವಂತೆ ರಮೇಶ್ ಜಾರಕಿಹೊಳಿ ಮೇಲೆ ಒತ್ತಡ
2) ಭಾರತಕ್ಕೆ ಭರ್ಜರಿ ಜಯ ಭಾರತದ ಹೊಸ ಬೌಲಿಂಗ್ ಸೆನ್ಸೇಷನ್ ಅಕ್ಷರ್ ಪಟೇಲ್ ಮತ್ತು ಅನುಭವಿ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ತಲಾ 5 ವಿಕಟ್ ಪಡೆಯುವ ಸಾಧನೆ ಮಾಡಿ ಭಾರತಕ್ಕೆ ಸರಣಿ ಗೆಲುವು ಕೊಡಿಸುವುದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ನಲ್ಲಿ ಆಡುವ ಅರ್ಹತೆಯನ್ನೂ ದೊರಕಿಸಿದ್ದಾರೆ. Link: India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ
3) ಮಹಿಳಾ ದಿನದ ಹೆಸರಲ್ಲಿ ಹರಿದಾಡುತ್ತಿದೆ ಫೇಕ್ ವಾಟ್ಸಾಪ್ ಮೆಸೇಜ್ ವಾಟ್ಸಾಪ್ ಎಂಬ ಮೆಸೇಜಿಂಗ್ ಅಪ್ಲಿಕೇಷನ್ ಕೆಲವು ಸ್ಕ್ಯಾಮ್ಗಳಿಗೆ ಕಾರಣವಾಗುವುದೂ ಇದೆ. ಅಂತಹುದೇ ಒಂದು ಸಂದೇಶ ಈಗ ವಾಟ್ಸಾಪ್ನಲ್ಲಿ ಹರಿದಾಡುತ್ತಿದೆ. ಮಹಿಳಾ ದಿನಾಚರಣೆಯ ಹೆಸರಲ್ಲಿ ಮೋಸ ಮಾಡುವ ಜಾಲ ಸುಳಿದಾಡುತ್ತಿದೆ. Link: ಮಹಿಳಾ ದಿನದ ಹೆಸರಲ್ಲಿ ಹರಿದಾಡುತ್ತಿದೆ ಫೇಕ್ ವಾಟ್ಸಾಪ್ ಮೆಸೇಜ್! ಮೋಸದ ಜಾಲಕ್ಕೆ ಸಿಲುಕದಂತೆ ಎಚ್ಚರವಾಗಿರಿ
4) ಟಿಕ್ಟಾಕ್ ಸ್ಟಾರ್ಗೆ ಟೈಮ್ ಚೆನ್ನಾಗಿಲ್ಲ.. ‘ಬಿಗ್ ಬಾಸ್ ಕನ್ನಡ ಸೀಸನ್ 8’ನಲ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟವರು ಧನುಶ್ರೀ. ಆದರೆ ಈ ಟಿಕ್ಟಾಕ್ ಸ್ಟಾರ್ಗೆ ಯಾಕೋ ಈಗ ಟೈಮ್ ಚೆನ್ನಾಗಿಲ್ಲ. ಮೊದಲ ವಾರ ಅವರ ಪರ್ಫಾರ್ಮೆನ್ಸ್ ತುಂಬ ಕಳಪೆ ಆಗಿದೆ. ಅಷ್ಟೇ ಅಲ್ಲದೇ, ಅವರಿಗೆ ಜೈಲು ಶಿಕ್ಷೆ ಕೂಡ ನೀಡಲಾಗಿದೆ. Link: Bigg Boss Kannada: ಜೈಲುಪಾಲಾದ ಬಿಗ್ ಬಾಸ್ ಸ್ಪರ್ಧಿ ಧನುಶ್ರೀ! ಮೊದಲ ವಾರವೇ ಕಳಪೆ ಹಣೆಪಟ್ಟಿ
5) ಎನ್ನೆಸ್ಸೆಲ್ ಎಂದೇ ಮನೆಮಾತಾಗಿದ್ದ ಹಿರಿಯ ಕವಿ ನಿಧನ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ… ಸಾಲು ತೇಲಿ ಬಂದಕ್ಷಣ ಥಟ್ಟನೆ ನೆನಪಾಗುವವರು ಸಮೃದ್ಧ ಭಾವಗೀತೆಗಳನ್ನು ಕನ್ನಡಿಗರಿಗೆ ಉಣಬಡಿಸಿದ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು. ಕನ್ನಡ ಸಾಹಿತ್ಯ ಲೋಕದಲ್ಲಿ, ಎನ್ನೆಸ್ಸೆಲ್ ಎಂದೇ ಮನೆಮಾತಾಗಿದ್ದ ಹಿರಿಯ ಕವಿ ಭೌತಿಕವಾಗಿ ನಮ್ಮನ್ನಗಲಿದ್ದಾರೆ. ಅವರ ಗೀತೆಗಳ ಭಾವ ಎಂದೆಂದಿಗೂ ನಮ್ಮ ಎದೆಯಲ್ಲಿ ಅಜರಾಮರವಾಗಿರುತ್ತದೆ. Link: ಸ್ಮರಣೆ | ಎಲ್ಲಿ ಜಾರಿತೋ ಮನವು..ಭಾವಗಳನ್ನು ಎದೆಗಿಳಿಸಿದ ಕವಿ ಲಕ್ಷ್ಮೀನಾರಾಯಣ ಭಟ್ಟ
6) ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ವಿರುದ್ಧ ಶಾಸಕ ಬಿ.ಕೆ. ಸಂಗಮೇಶ್ ಕಿಡಿ ಗಾಣಿಗ ಸಮುದಾಯದ ಜಗದ್ಗುರು ಯೋಗಿ ಕಲ್ಲಿನಾಥ ಸ್ವಾಮೀಜಿಯೊಂದಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್ ಅವರು ಒಂದು ತಿಂಗಳೊಳಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್.ಈಶ್ವರಪ್ಪನವರ ದಾಖಲೆಯನ್ನು ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. Link: ತಿಂಗಳೊಳಗೆ ಯಡಿಯೂರಪ್ಪ ಮತ್ತು ಈಶ್ವರಪ್ಪ ದಾಖಲೆ ಬಿಡುಗಡೆ ಮಾಡುವೆ: ಶಾಸಕ ಬಿ.ಕೆ. ಸಂಗಮೇಶ್
7) CD ಪ್ರಕರಣ: ದಿನೇಶ್ ಕಲ್ಲಹಳ್ಳಿ ಕೊಟ್ಟ ಹೇಳಿಕೆಯಲ್ಲಿ ಜೊಳ್ಳೇ ಜಾಸ್ತಿ ರಮೇಶ್ ಜಾರಕಿಹೊಳಿ ಹಗರಣದಲ್ಲಿ, ಆ ಸಿಡಿಯನ್ನು ಪೊಲೀಸ್ರಿಗೆ ಕೊಟ್ಟು ಓರ್ವ ಮಹಿಳೆಗೆ ಅನ್ಯಾಯವಾಗಿದೆ, ಹಾಗಾಗಿ ಅವಳಿಗೆ ನ್ಯಾಯ ಕೊಡಿಸಿ ಎಂದು ಹೇಳುತ್ತ ರಾಜ್ಯ ರಾಜಕೀಯದಲ್ಲಿ ಚಂಡಮಾರುತ ಹುಟ್ಟು ಹಾಕಿರುವ ಆರ್ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಈಗ ಸ್ವಲ್ಪ ವಿಚಲಿತರಾಗಿದ್ದಾರೆ, ಹಾಗಾಗಿ ಗಂಟೆಗೊಂದು ಗಳಿಗೆಗೊಂದು ಹೇಳಿಕೆ ಕೊಡುತ್ತಿದ್ದ ಹಾಗಿದೆ ಎಂದು ಗೃಹ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. Link: ರಮೇಶ್ ಜಾರಕಿಹೊಳಿ ಸಿಡಿ ಕೇಸ್: ಕಬ್ಬನ್ ಪಾರ್ಕ್ ಪೊಲೀಸರಿಗೆ ದಿನೇಶ್ ಕಲ್ಲಹಳ್ಳಿ ಕೊಟ್ಟ ಹೇಳಿಕೆಯಲ್ಲಿ ಜೊಳ್ಳೇ ಜಾಸ್ತಿ
8) ಮೋದಿ ಫೋಟೋ ಬಗ್ಗೆ ಆಕ್ಷೇಪ ಎತ್ತಿದೆ ಪ್ರತಿಪಕ್ಷಗಳು ದೇಶದಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರೂ ತೆಗೆದುಕೊಂಡಿದ್ದಾರೆ. ಹೀಗೆ ಕೊರೊನಾ ಲಸಿಕೆ (Covid ಪಡೆದವರಿಗೆ ಒಂದು ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುತ್ತಿದ್ದು ಅದರ ಕೆಳಗೆ ಮೂಲೆಯಲ್ಲಿ ಮೋದಿಯವರ ಫೋಟೋ ಇದೆ. ಇದರ ಬಗ್ಗೆ ಈಗಾಗಲೇ ಪ್ರತಿಪಕ್ಷಗಳು ಆಕ್ಷೇಪವನ್ನೂ ಎತ್ತಿವೆ. Link: Assembly Election 2021: ಕೊವಿಡ್ ಲಸಿಕೆ ಸರ್ಟಿಫಿಕೇಟ್ನಿಂದ ಪ್ರಧಾನಿ ಮೋದಿ ಫೋಟೋ ತೆಗೆಯಲು ಚುನಾವಣಾ ಆಯೋಗ ಸೂಚನೆ
9) ರೈತ ಚಳವಳಿ ನಡೆದು ಬಂದಿದ್ದು ಹೀಗೆ.. ಇಂದಿಗೆ (6 March) ದೆಹಲಿ ಚಲೋ (Delhi Chalo) ಚಳವಳಿಗೆ ಬರೋಬ್ಬರಿ ನೂರು ದಿನಗಳ ಹರೆಯ. ಚಳವಳಿಕಾರರು ಇಂದಿನ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಿದ್ದಾರೆ. Link: Delhi Chalo: ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ‘ದೆಹಲಿ ಚಲೋ‘ಗೆ ಶತ ದಿನ; ರೈತ ಚಳವಳಿ ನಡೆದು ಬಂದಿದ್ದು ಹೀಗೆ..
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.