AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ದಿನದ ಹೆಸರಲ್ಲಿ ಹರಿದಾಡುತ್ತಿದೆ ಫೇಕ್ ವಾಟ್ಸಾಪ್ ಮೆಸೇಜ್! ಮೋಸದ ಜಾಲಕ್ಕೆ ಸಿಲುಕದಂತೆ ಎಚ್ಚರವಾಗಿರಿ

Whatsapp Fake Message: ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದೆ. ಮಹಿಳಾ ದಿನಾಚರಣೆಯ ಹೆಸರಲ್ಲಿ ‘ಅದಿದಾಸ್ ಮಹಿಳಾ ದಿನದ ಗಿಫ್ಟ್’ (Adidas Womens Day Gift) ಎಂಬ ಸುಳ್ಳು ಸಂದೇಶ ಹರಿದಾಡುತ್ತಿದೆ.

ಮಹಿಳಾ ದಿನದ ಹೆಸರಲ್ಲಿ ಹರಿದಾಡುತ್ತಿದೆ ಫೇಕ್ ವಾಟ್ಸಾಪ್ ಮೆಸೇಜ್! ಮೋಸದ ಜಾಲಕ್ಕೆ ಸಿಲುಕದಂತೆ ಎಚ್ಚರವಾಗಿರಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 06, 2022 | 7:24 PM

Share

ವಾಟ್ಸಾಪ್ ಎಂಬ ಮೆಸೇಜಿಂಗ್ ಅಪ್ಲಿಕೇಷನ್​ನ್ನು ಬಹುತೇಕ ಎಲ್ಲರೂ ಬಳಸುತ್ತಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಈ ಅಪ್ಲಿಕೇಷನ್ ಬಳಸುವುದಿದೆ. ಜಾಗತಿಕವಾಗಿ ಎಲ್ಲಡೆಯ ಬಳಕೆದಾರರನ್ನೂ ಈ ಅಪ್ಲಿಕೇಷನ್ ಮೂಲಕ ತಲುಪಬಹುದು. ಒಬ್ಬರು ಮತ್ತೊಬ್ಬರಿಗೆ ಅಕ್ಷರ, ಚಿತ್ರ, ಸನ್ನೆಗಳು, ವಿಡಿಯೊ, ಆಡಿಯೊ ಹೀಗೆ ಎಲ್ಲಾ ವಿವರಗಳನ್ನೂ ಹಂಚಿಕೊಳ್ಳಬಹುದು. ಇಂಥಾ ಅಪ್ಲಿಕೇಷನ್ ಕೆಲವು ಸ್ಕ್ಯಾಮ್​ಗಳಿಗೆ ಕಾರಣವಾಗುವುದೂ ಇದೆ. ಅಂತಹುದೇ ಒಂದು ಸಂದೇಶ ಈಗ ವಾಟ್ಸಾಪ್​ನಲ್ಲಿ ಹರಿದಾಡುತ್ತಿದೆ. ಮಹಿಳಾ ದಿನಾಚರಣೆಯ ಹೆಸರಲ್ಲಿ ಮೋಸ ಮಾಡುವ ಜಾಲ ಸುಳಿದಾಡುತ್ತಿದೆ.

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಲಿದೆ. ಮಹಿಳಾ ದಿನಾಚರಣೆಯ ಹೆಸರಲ್ಲಿ ‘ಅದಿದಾಸ್ ಮಹಿಳಾ ದಿನದ ಗಿಫ್ಟ್’ (Adidas Womens Day Gift) ಎಂಬ ಸುಳ್ಳು ಸಂದೇಶ ಹರಿದಾಡುತ್ತಿದೆ. ಅದಿದಾಸ್ 1 ಮಿಲಿಯನ್ ಜತೆ ಶೂಗಳನ್ನು ಮಹಿಳಾ ದಿನದ ಅಂಗವಾಗಿ ನೀಡುತ್ತಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಈ ಫೇಕ್ ಸಂದೇಶವನ್ನು ಬಿಜಿಆರ್ ಇಂಡಿಯಾ ಮೊದಲು ಗುರುತಿಸಿದೆ. ಸಂದೇಶದಲ್ಲಿ ನೀಡಿರುವ ಅದಿದಾಸ್ ಯುಆರ್​ಎಲ್ ಕೂಡ ತಪ್ಪಾಗಿದೆ. ‘Adidas’ ಬದಲಾಗಿ ‘Adidass’ ಎಂದು ಬರೆದಿರುವುದು ಸಂದೇಶ ಫೇಕ್ ಎಂದು ಸಾರಿ ಹೇಳುತ್ತಿದೆ.

ಹೀಗೆ ಬಂದಿರುವ ಲಿಂಕ್ ಓಪನ್ ಮಾಡಿದರೆ, ‘Congratulations! You have a chance to get free shoes provided by adidas for Women’s Day’ ಎಂಬ ಸಂದೇಶ ಕಾಣಿಸುತ್ತದೆ. ಜತೆಗೆ, ಅದಿದಾಸ್ ಶೂನ ಚಿತ್ರವೂ ಕೂಡ ಹಾಕಲಾಗಿದೆ. ಅಷ್ಟೇ ಅಲ್ಲದೆ, ಅದಿದಾಸ್ ಲೋಗೊ, ಮೆನು ಬಟನ್, ಸರ್ಚ್ ಟೂಲ್, ಶಾಪಿಂಗ್ ಬ್ಯಾಗ್ ಚಿಹ್ನೆಗಳು ಕೂಡ ಸೈಟ್​ನಲ್ಲಿದೆ. ವಿಚಿತ್ರ ಎಂದರೆ ಆ ಯಾವ ಬಟನ್​ಗಳನ್ನು ಕೂಡ ಕ್ಲಿಕ್ ಮಾಡಲು ಆಗುವುದಿಲ್ಲ.

ಇಂಥಾ ತಪ್ಪು ಯುಆರ್ಎಲ್ (ಲಿಂಕ್), ತಪ್ಪು ಅಕ್ಷರಗಳಿರುವ ಬ್ರಾಂಡ್ ಹೆಸರು, ಇತ್ಯಾದಿ ಸಂದೇಶಗಳು ಬಂದರೆ ಮೊದಲನೆಯದಾಗಿ ಆ ಲಿಂಕ್ ಕ್ಲಿಕ್ ಮಾಡಲು ಹೋಗಬಾರದು. ಫ್ರೀ, ಆಫರ್ ಎಂದು ಜನರನ್ನು ಮೋಸದ ಜಾಲಕ್ಕೆ ಸಿಲುಕಿಸುವ ಸಂದೇಶಗಳನ್ನು ಕ್ಲಿಕ್ ಮಾಡಬಾರದು. ಇಂತಹಾ ಹಲವು ಸಂದೇಶಗಳು ಫಾರ್ವರ್ಡೆಡ್ ಮತ್ತು ಫ್ರೀಕ್ವೆಂಟ್ಲಿ ಫಾರ್ವರ್ಡೆಡ್ ಎಂದು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಅಂಥಾ ಮೆಸೇಜ್ ಓಪನ್ ಮಾಡುವ ಮುನ್ನ ಜಾಗರೂಕರಾಗಿ ಇರಬೇಕು. ಹೀಗೆ ಬಂದ ಮೆಸೇಜ್​ಗಳನ್ನು ಓಪನ್ ಮಾಡದೆ ಇರುವುದು ಉತ್ತಮ. ಜತೆಗೆ ಇತರರಿಗೆ ಕಳಿಸದಿರುವುದು ಇನ್ನೂ ಉತ್ತಮ. ಸಾಧ್ಯವಾದರೆ ಇಂಥಾ ಮೆಸೇಜ್ ಹಂಚದಂತೆ ಎಲ್ಲರಿಗೂ ಸಲಹೆ ನೀಡಬಹುದು. ಇದರಿಂದ ಇನ್ಯಾರೋ ಮೋಸ ಹೋಗುವುದು ತಪ್ಪಬಹುದು.

ಇದನ್ನೂ ಓದಿ: Credit card Benefits: ಕ್ರೆಡಿಟ್​ ಕಾರ್ಡ್​ನಿಂದ ನಿಮಗೆ ಸಿಗಲಿದೆ ಈ ಐದು ಸೀಕ್ರೆಟ್​ ಲಾಭಗಳು!

Debit Credit Card: ಆನ್​ಲೈನ್ ಶಾಪಿಂಗ್​ಗೆ ನೀವು ಕಾರ್ಡ್ ಬಳಸ್ತೀರಾ? ಮೋಸ ಆಗದಿರಲು ಹೀಗೆ ಮಾಡಿ

Published On - 3:51 pm, Sat, 6 March 21

ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು